Advertisement
ಈ ಹಿಂದೆ ಅಪ್ಪಳಿಸಿದ್ದ ಕೋವಿಡ್ ಹಾವಳಿಗೆ ಹೋಟೆಲ್ ಉದ್ಯಮ ತತ್ತರಿಸಿತ್ತು. ಕಾರ್ಪೋರೆಟ್ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಹೋಮ್‌ನಲ್ಲಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಹೋಟೆಲ್‌ಗಳ ಮಾಲೀಕರು ಬಾಡಿಗೆ ಕಟ್ಟಲಾಗದೆ ತಮ್ಮ ತಮ್ಮ ಹೋಟೆಲ್‌ಗಳಿಗೆ ಬೀಗ ಹಾಕಿದ್ದರು. ಜತೆಗೆ ಸಾವಿರಾರು ಕೋಟಿ ರೂ.ನಷ್ಟಕ್ಕೆ ಕಾರಣವಾಗಿತ್ತು. ಪ್ರತಿಷ್ಠಿತ ಹೋಟೆಲ್‌ಗಳ ಮಾಲೀಕರು ಹೋಟೆಲ್ ನಿರ್ವಹಿಸಲಾಗದೇ ಸಾಲದ ಸುಳಿಗೆ ಸಿಲುಕಿದ್ದರು. ಹಾಗೆಯೇ ಪ್ರತಿಷ್ಠಿತ ಬಡಾವಣೆಗಳಲ್ಲಿ ತಲೆ ಎತ್ತಿದ್ದ ಹೋಟೆಲ್‌ಗಳ ಬಾಡಿಗೆ ನೀಡಲಾಗದೆ ಬೀಗ ಹಾಕಲಾಗಿತ್ತು. ಇದೀಗ ಹೋಟೆಲ್ ಉದ್ಯಮ ಮತ್ತೆ ಸಹಜ ಸ್ಥಿತಿಯತ್ತ ಮರಳುತ್ತಿದೆ.
Related Articles
Advertisement
ಈ ವರ್ಷ ದರ್ಶನಿ, ನಾನ್ ಎಸಿ ಸೇರಿದಂತೆ 50ಕ್ಕೂ ಹೊಸ ಹೋಟೆಲ್‌ಗಳು ಬೆಂಗಳೂರಿನ ಹಲವು ಕಡೆ ತಲೆ ಎತ್ತಿವೆ. ಇನ್ನೂ ಹಲವು ಕಡೆ ರೆಸ್ಟೋರೆಂಟ್‌ಗಳು ಕೂಡ ಪ್ರಾರಂಭವಾಗಲಿವೆ. ಈ ಹಿಂದೆ ಹೋಟೆಲ್ ಉದ್ಯಮಕ್ಕೆ ಕೆಲಸಗಾರರ ಸಮಸ್ಯೆ ಉಂಟಾಗಿತ್ತು. ಉತ್ತರ ಭಾರತೀಯದ ಮೂಲದ ಕಾರ್ಮಿಕರು ಮತ್ತೆ ರಾಜ್ಯಕ್ಕೆ ಮರಳಿದ್ದಾರೆ. ಆ ಹಿನ್ನೆಲೆಯಲ್ಲಿ ಕಾರ್ಮಿಕರ ಸಮಸ್ಯೆ ಕೂಡ ಇಲ್ಲ ಎಂದು ಹೇಳುತ್ತಾರೆ. ಇಂದಿರಾನಗರ, ಎಂ.ಜಿ.ರಸ್ತೆ, ಹೆಬ್ಟಾಳ, ಕೋರ ಮಂಗಲ, ಎಲೆಕ್ಟ್ರಾನಿಕ್ ಸಿಟಿ, ರಾಜರಾಜೇಶ್ವರಿನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ತಿಂಗಳಿಗೆ ನಾಲ್ಕೈದು ಹೋಟೆಲ್‌ಗಳು ಪ್ರಾರಂಭವಾಗುತ್ತಿದೆ. ಉತ್ತಮ ರೀತಿಯ ಆರ್ಥಿಕ ವಹಿವಾಟು ನಡೆಯುತ್ತಿದೆ ಎಂದು ಮಾಹಿತಿ ನೀಡುತ್ತಾರೆ.
ತಿಂಡಿ, ತಿನಿಸು ಬೆಲೆ ಏರಿಕೆ ಇಲ್ಲ : ವಿದ್ಯುತ್ ಇಲಾಖೆಯು ವಿದ್ಯುತ್ ದರವನ್ನು 70 ಪೈಸೆ ಏರಿಸಿದೆ. ಇದು ಹೋಟೆಲ್ ಉದ್ಯಮಕ್ಕೆ ಬಹಳಷ್ಟು ಹೊರೆಯಾಗಲಿದೆ. ಆ ಹಿನ್ನೆಲೆಯಲ್ಲಿ ಶೀಘ್ರದಲ್ಲೆ ಹೋಟೆಲ್ ಉದ್ಯಮದ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವಿದ್ಯುತ್ ಬಿಲ್ ಇಳಿಕೆಗೆ ಮನವಿ ಮಾಡಲಿದೆ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘ ತಿಳಿಸಿದೆ. ವಿದ್ಯುತ್ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ತಿಂಡಿ, ತಿನಿಸುಗಳ ದರ ಏರಿಕೆ ಮಾಡುವ ಆಲೋಚನೆ ಸಂಘದ ಮುಂದೆ ಇಲ್ಲ. ಹೆಚ್ಚುವರಿ ವಿದ್ಯುತ್‌ಬಿಲ್ ಹೊರೆಯನ್ನು ಮಾಲೀಕರೇ ಭರಿಸಲಿದ್ದಾರೆ. ಆದರೂ ಕೂಡ ಅದನ್ನು ಗ್ರಾಹಕರ ಮೇಲೆ ವರ್ಗಾಯಿಸುವುದಿಲ್ಲ. ಜತೆಗೆ ಸದ್ಯದ ಪರಿಸ್ಥಿತಿಯಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆ ಬಗ್ಗೆ ಪ್ರಸ್ತಾಪವಿಲ್ಲ. ಈ ಹಿಂದೆ ಹೋಟೆಲ್‌ಗಳ ತಿಂಡಿ, ತಿನಿಸುಗಳ ಬೆಲೆ ಏರಿಕೆ ಮಾಡಲಾಗಿದೆ. ಮತ್ತೆ ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ಪರಿಸ್ಥಿತಿ ಇಲ್ಲ ಎಂದು ಸಂಘ ಹೇಳಿದೆ.
ಬಹುತೇಕ ಕಾರ್ಪೋರೆಟ್ ಸಂಸ್ಥೆಗಳು ವರ್ಕ್ ಫ್ರಮ್ ಹೋಮ್ ಸಂಸ್ಕೃತಿ ಸ್ಥಗಿತಗೊಳಸಿವೆ. ಹೀಗಾಗಿ ನೌಕರರು ಕಚೇರಿಗೆ ಬಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಎಲ್ಲ ಕಾರಣದಿಂದಾಗಿಯೇ ಬೆಂಗಳೂ ರಿನಲ್ಲಿ ತಿಂಗಳಿಗೆ ನಾಲ್ಕೈದು ಹೋಟೆ ಲ್‌ಗಳು ಪ್ರಾರಂಭವಾಗುತ್ತಿವೆ. -ಪಿ.ಸಿ.ರಾವ್, ಅಧ್ಯಕ್ಷರು, ಬೆಂಗಳೂರು ಹೋಟೆಲ್ ಮಾಲೀಕರ ಸಂಘ
-ದೇವೇಶ ಸೂರಗುಪ್ಪ