Advertisement
ಅತ್ಯಾಶ್ಚರ್ಯ, ಮೊನ್ನೆ ಕಂಡ ಸೂರ್ಯನ ಕಲೆ ಎಆರ್3213 ಫೆಬ್ರವರಿ 11 ಪುನಃ ಸಿಡಿದು ಸೌರ ಜ್ವಾಲೆಯನ್ನು ಬಿತ್ತರಿಸಿದೆ. ಕೊತಕೊತ ಕುದಿವ ಪ್ಲಾಸ್ಮಾದ ಸೂರ್ಯ ಉತ್ತರ ಧ್ರುವದ ಸಮೀಪ ಸಿಡಿಯುತ್ತಲೇ ಇದ್ದಾನೆ.
Related Articles
Advertisement
ಈ ಕೆಲವು ದಿನಗಳ ವಿದ್ಯಮಾನದಲ್ಲಿ ಎಂ ಕಿರಣಗಳು ಚೆಲ್ಲಿವೆ. ಹಾಗೆ ಎಕ್ಸ್ ಕಿರಣಗಳೂ ಬರಬಹುದೆಂದು ಅಂದಾಜಿಸಿದ್ದಾರೆ. ಇವುಗಳಿಂದ ಭೂಮಿಯ ಕೆಲ ಭಾಗಗಳಲ್ಲಿ ವಿದ್ಯುತ್ ನಲ್ಲಿ ವ್ಯತ್ಯಯ, ಗ್ಲೋಬಲ್ ಇಂಟರ್ನೆಟ್‌ಗಳ ಮೇಲೆ ರೇಡಿಯೊ ಅಲೆಗಳು ಸೇಲ್ಫೋನ್, ಮೊಬೈಲ್ ಸಿಗ್ನಲ್‌ಗಳ ಮೇಲೂ ಈ ಕೆಲ ದಿನ ಪರಿಣಾಮ ಬೀರಬಹುದೆಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಕಾಂತೀಯ ಕಿರಣಗಳ ಪ್ರವಾಹದ ಹಿಂದಿಂದ ಮೆರವಣಿಗೆಯೋಪಾದಿಯಲ್ಲಿ ಶಕ್ತಿಯುತಕಣಗಳ ಸಿಡಿತ ಸಂಭವಿಸುತ್ತದೆ. ಇವನ್ನು ಕೊರೋನಲ್ ಮಾಸ್ ಇಜೆಕ್ಸನ್ ಎನ್ನುವರು.ಭೂಮಿಯ ಧ್ರುವ ಪ್ರದೇಶಗಳಲ್ಲಿ ಅತಿಯಾದ ಬಣ್ಣಬಣ್ಣದ ಧ್ರುವ ಪ್ರಭೆ ಯಥೇತ್ಛವಾಗಿ ಕಾಣಿಸಬಹುದು. ಸುಮಾರು 11 ವರ್ಷಕ್ಕೊಮ್ಮೆ ಸೂರ್ಯ ಕಲೆಗಳ ಆವರ್ತನ ನಡೆಯುತ್ತಿದೆ. ಈಗ 25ನೇ ಆವರ್ತನ ಡಿಸೆಂಬರ್ 2019ರಿಂದ ಪ್ರಾರಂಭ. ಪ್ರತೀ 11 ವರ್ಷಗಳಲ್ಲಿ ಕೆಲ ವರ್ಷ ಅತೀ ಕಡಿಮೆ ಕಲೆಗಳು, ಕೆಲ ವರ್ಷ ಅತೀ ಹೆಚ್ಚು ಕಲೆಗಳನ್ನು ಗಮನಿಸುತ್ತಲೇ ಇದ್ದಾರೆ. ಈ ಸಾರಿಯ 25ನೇ ಆವರ್ತದಲ್ಲಿ 2023ರಿಂದ 2026ರ ವರೆಗೆ ಹೆಚ್ಚಿಗೆ ಸೌರಕಲೆಗಳನ್ನು ಕಾಣಬಹುದೆಂದು ಅಂದಾಜಿಸಿದ್ದರು. ಹಾಗೆಯೇ ಈಗ ನಡೆಯುತ್ತಿರುವ 25ನೇ ಸೈಕಲ್ ಹೆಚ್ಚೇನೂ ವಿಶೇಷವಿರುವುದಿಲ್ಲವೆಂದು ವಿಜ್ಞಾನಿಗಳು ಅಂದಾಜಿಸಿದ್ದರು. ಆದರೆ ಸೂರ್ಯ, ಈಗ ಅದೆಲ್ಲವನ್ನೂ ತಲೆಕೆಳಗೆ ಮಾಡಿಸಿ ಈ 25ನೇ ಸೈಕಲ್ ತುಂಬಾ ವಿಚಿತ್ರವೆಂಬಂತೆ ಸೂರ್ಯ ವಿಜ್ಞಾನಿಗಳನ್ನು ದಿಗ½$›ಮೆಗೊಳಿಸುತ್ತ ಸಿಡಿಯುತ್ತಿದ್ದಾನೆ. ಸೂರ್ಯನ ಕಾಂತೀಯ ಧ್ರುವಗಳು ಭೂಮಿಯಂತೆ ಯಾವಾಗಲೂ ಒಂದೇಕಡೆ ಸ್ಥಿರವಲ್ಲ. 11 ವರ್ಷಕ್ಕೊಮ್ಮೆ ಕಾಂತೀಯ ಧ್ರುವಗಳು ಉತ್ತರದಿಂದ ದಕ್ಷಿಣಕ್ಕೆ ಪರಿವರ್ತನೆ ಗೊಳಗಾಗುತ್ತವೆ. ಇದಕ್ಕೆ ಸೂರ್ಯನ ಸಂಕೀರ್ಣ ಅಯಸ್ಕಾಂತೀಯ ವ್ಯವಸ್ಥೆಯೇ ಕಾರಣ. ಈಗ ನಡೆಯುತ್ತಿರುವ ಮಾಮೂಲಿನಂತಿರದ ವಿಚಿತ್ರ ಅಯಸ್ಕಾಂತೀಯ ರುದ್ರ ನರ್ತನಕ್ಕೆ ಕಾರಣ ತಿಳಿಯಬೇಕಿದೆಯಷ್ಟೇ. ಇದೊಂದು ಸೂರ್ಯನ ವಿಚಿತ್ರ ವಿಸ್ಮಯ. – ಡಾ| ಎ.ಪಿ. ಭಟ್, ಉಡುಪಿ