Advertisement

ರಾಜ್ ಕುಂದ್ರಾ ಪ್ರಕರಣದಲ್ಲಿ “ಹಾಟ್ ಶಾಟ್ಸ್”ಹೆಸರು ಮುಂಚೂಣಿ: ಈ ಆ್ಯಪ್ ನ ಹಿನ್ನೆಲೆಯೇನು ?

08:38 AM Jul 21, 2021 | Team Udayavani |

ಮುಂಬೈ: ಅಶ್ಲೀಲ ಚಿತ್ರ ನಿರ್ಮಾಣ ಮತ್ತು ಪ್ರಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಇದೀಗ ಒಟ್ಟಾರೇ ಪ್ರಕರಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಸ್ಟ್ರೀಮಿಂಗ್ ಅಪ್ಲಿಕೇಶನ್ ‘ಹಾಟ್ ಶಾಟ್ಸ್’ ನ್ನು ಗೂಗಲ್ ಮತ್ತು ಆ್ಯಪಲ್ ಪ್ಲೇ ಸ್ಟೋರ್ ಡಿಲೀಟ್ ಮಾಡಿದೆ.

Advertisement

ಇದೀಗ ಈ ಅಪ್ಲಿಕೇಶನ್ ಪ್ಲೇಸ್ಟೋರ್ ನಲ್ಲಿ ಡೌನ್ ಲೋಡ್ ಗೆ ಲಭ್ಯವಿಲ್ಲವಾಗಿದ್ದು, APK ಫೈಲ್ ಗಳು ಮಾತ್ರ ಇತರ ಫ್ಲ್ಯಾಟ್ ಫಾರ್ಮ್ ಗಳಲ್ಲಿ ಸಿಗುತ್ತಿದೆ. ಈಗಾಗಲೇ ಇನ್ ಸ್ಟಾಲ್ ಆಗಿರುವ ಮೊಬೈಲ್ ಗಳಲ್ಲಿ ಮಾತ್ರ ಹಾಟ್ ಶಾಟ್ಸ್ ಆ್ಯಪ್ ನ ಕೆಲವು ಕಾರ್ಯಕ್ರಮಗಳು ಪ್ರಸಾರವಾಗುತ್ತಿದೆ.

ಈ ಆ‍್ಯಪ್ ನಲ್ಲಿ ಫೋಟೋಶೂಟ್, ಕಿರುಚಿತ್ರ, ಜಗತ್ತಿನ ಪ್ರಸಿದ್ದ ಸಿನೆಮಾ ತಾರೆಗಳ ಜೀವನ ಶೈಲಿಗಳನ್ನು ಕಾರ್ಯಕ್ರಮದ ಮೂಲಕ ಪ್ರಸಾರ ಮಾಡಲಾಗುತ್ತಿತ್ತು. ಅಶ್ಲೀಲತೆಯ ಪ್ರಮಾಣವೂ ಹೆಚ್ಚಾಗಿತ್ತು ಎಂದು ವರದಿ ತಿಳಿಸಿದೆ.

ಇದರ ಜೊತೆಗೆ ಜಗತ್ತಿನ ವಿವಿಧ ಮೊಡೆಲ್ ಗಳ ಜೊತೆ ಲೈವ್ ಸಂವಾದವನ್ನು ಈ ಆ್ಯಪ್ ಮೂಲಕ ನಡೆಸಬಹುದಿತ್ತು. ಈ ಆ್ಯಪ್ ‘ಮಿಸ್ ಹಾಟ್ ಶಾಟ್ಸ್ ಕಂಟೆಸ್ಟ್ 2019” ನ್ನು ಕೂಡ ಆಯೋಜಿಸಿತ್ತು ಎಂದು ತಿಳಿದುಬಂದಿದೆ.

Advertisement

ಕಿರುಚಿತ್ರಗಳು ಮತ್ತು ವೆಬ್ ಸರಣಿಗಳಲ್ಲಿನ ಕೆಲಸದ ನೆಪದಲ್ಲಿ ಹೊಸ ನಟರನ್ನು ಆಮಿಷಕ್ಕೆ ಒಳಪಡಿಸಲಾಗುತಿತ್ತು. ನಂತರ ಅವರ ಇಚ್ಚೆಗೆ ವಿರುದ್ಧವಾಗಿ ನಗ್ನ ಮತ್ತು ಅರೆ-ನಗ್ನ ಚಲನಚಿತ್ರಗಳ ಚಿತ್ರೀಕರಣಕ್ಕೆ ಮುಂದಾಗುತ್ತಿದ್ದರು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಇದೇ ಅರೆನಗ್ನ ಚಿತ್ರಗಳನ್ನು ಈ ಹಾಟ್ ಶಾಟ್ಸ್ ಆ್ಯಪ್ ನಲ್ಲಿ ಪ್ರಸಾರ ಮಾಡಲಾಗುತ್ತಿತ್ತು ಎಂದು ಮುಂಬೈ ಪೊಲೀಸರು ಅನುಮಾನಿಸಿದ್ದಾರೆ. ಇದೀಗ ಹಾಟ್ ಶಾಟ್ಸ್ ಗೆ ಲಿಂಕ್ ಆಗಿದ್ದ ವೆಬ್ ಸೈಟನ್ನು ಕೂಡ ಡಿಲೀಟ್ ಮಾಡಲಾಗಿದ್ದು, ಡೇಟಾ ಸಂಗ್ರಹ ಮಾಹಿತಿಯ ಪ್ರಕಾರ ಇದು 2019ರ ಮಾರ್ಚ್ ರಂದು ಯುಕೆಯಲ್ಲಿ ನೋಂದಣಿಯಾಗಿತ್ತು.

ಉದ್ಯಮಿ ರಾಜ್ ಕುಂದ್ರಾ ಈ ಹಾಟ್ ಶಾಟ್ಸ್ ಆ್ಯಪ್ ಗೆ ಹಣಕಾಸಿನ ನೆರವು ಒದಗಿಸುತ್ತಿದ್ದರು ಎಂದು ಮುಂಬೈ ಪೊಲೀಸರು ಆರೋಪಿಸಿದ್ದಾರೆ. ಆದರೆ ರಾಜ್ ಕುಂದ್ರಾ ಆ್ಯಪ್ ಉದ್ಯಮದಲ್ಲಿ ತೊಡಗಿಸಿಕೊಂಡಿಲ್ಲ ಎಂದು ಮಾಹಿತಿ ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next