Advertisement

3ರಂದು ರಾಜ್ಯಾದ್ಯಂತ ಅಕ್ಷರ ದಾಸೋಹ ನೌಕರರ ಮುಷ್ಕರ

12:38 PM Jan 28, 2020 | Suhan S |

ಮುದ್ದೇಬಿಹಾಳ: ಫೆ. 3ರಂದು ಮುಷ್ಕರ ನಡೆಸುವುದರಿಂದ ಅಂದು ಬಿಸಿಯೂಟದ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ತಿಳಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಸೋಮವಾರ ತಹಶೀಲ್ದಾರ್‌, ತಾಪಂ ಇಒ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗೆ ಪ್ರತ್ಯೇಕ ತಿಳಿವಳಿಕೆ ಮನವಿ ಸಲ್ಲಿಸಿದ್ದಾರೆ.

Advertisement

ಒಟ್ಟು 15 ಪ್ರಮುಖ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯವ್ಯಾಪಿ ಈ ಮುಷ್ಕರ ನಡೆಸಲು ಕೇಂದ್ರ ಸಂಘವು ಕರೆ ನೀಡಿದೆ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಮದ್ಯಾಹ್ನದ ಹಸಿವನ್ನು ನೀಗಿಸಲು ಜಾರಿಗೊಳಿಸಲಾಗಿರುವ ಈ ಯೋಜನೆ ಅಡಿ ಕೆಲಸ ಮಾಡುತ್ತಿರುವವರಿಗೆ ಮೂಲಸೌಕರ್ಯ ಕೊಡದೆ, ಕನಿಷ್ಠ ವೇತನ ನಿಗದಿಪಡಿಸದೆ ಅನ್ಯಾಯ ಮಾಡುತ್ತಿರುವುದನ್ನು ಪ್ರತಿಭಟಿಸಿದ್ದರೂ, ಸರ್ಕಾರಗಳ ಗಮನಕ್ಕೆ ತಂದಿದ್ದರೂ ಏನೂ ಸುಧಾರಣೆ ಕಂಡುಬಾರದ ಹಿನ್ನೆಲೆ ಈ ಮುಷ್ಕರ ನಡೆಸಲು ಮುಂದಾಗಬೇಕಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇದಲ್ಲದೆ ತಮ್ಮ 15 ಬೇಡಿಕೆಗಳ ಕುರಿತೂ ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ. ಸಂಘದ ತಾಲೂಕು ಘಟಕದ ಅಧ್ಯಕ್ಷೆ ಸುವರ್ಣಾ ರಾಠೊಡ, ಪದಾಧಿಕಾರಿಗಳು, ಸದಸ್ಯರು ಆದ ಗುಡೂಮಾ ಹಲಕಾವಟಗಿ, ಶೈಲಾ ಹಿರೇಮಠ, ಶೋಭಾ ಯರಝರಿ, ಬಾಪುಬಾಯಿ ಲಮಾಣಿ, ರತ್ನಾಬಾಯಿ ಲಮಾಣಿ, ಗಿರಿಜಾ ಅಂಗಡಿ, ಲಕ್ಷ್ಮೀ ಲಮಾಣಿ, ಯಲ್ಲವ್ವ ಲಮಾಣಿ, ರಜಿಯಾಬೇಗಂ, ಜಿ.ಜಿ. ಕೆಂದೂಳಿ, ಮೀನಾಕ್ಷಿ ಕನ್ನೊಳ್ಳಿ, ಮಂಜುಳಾ ಯಾಳವಾರ, ರೇಣುಕಾ ಆಲೂರ, ಬಸಮ್ಮ ಕೋರಿ, ಶಮಶಾದಬೇಗಂ ಮಕಾನದಾರ, ಮಂಜುಳಾ ಭಜಂತ್ರಿ, ಜನ್ನತಬಿ ಜಾನ್ವೆಕರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next