ರಸ್ತೆ ಬದಿ ಸಿಗುವ ಚಾಟ್ಸ್ ರುಚಿಗೆ ಮನ ಸೋಲದವರು ಅಪರೂಪವೆ. ಗೋಲ್‌ಗಪ್ಪ, ಉದ್ìದಾಲ್ ಪಕೋಡಿ, ಸಮೋಸಾ ಚೋಲೆ… ಹೆಸರು ಕೇಳುತ್ತಿದ್ದರೇ ಬಾಯಲ್ಲಿ ನೀರೂರುತ್ತಿದೆಯಲ್ಲವೆ? ಹಾಗಿದ್ದರೆ ಇನ್ನೇಕೆ ತಡ ಚಾಟ್ಸ್‌ಗಾಗಿಯೇ ಹೆಸರುವಾಸಿಯಾದ “ಕೇಸರಿಯಾ’ ರೆಸ್ಟೋರೆಂಟ್‌ನಲ್ಲಿ ಚಾಟ್ ಫೆಸ್ಟಿವಲ್ ನಡೆಯುತ್ತಿದೆ.
ತಣ್ಣಗಿನ ವಾತಾವರಣದಲ್ಲಿ, ಸಣ್ಣಗೆ ಮಳೆ ಜಿನುಗುತ್ತಿರುವ ಹೊತ್ತಿನಲ್ಲಿ ಆಪ್ತರೊಂದಿಗೆ ಚಾಟ್ಸ್ ಸವಿಯುವ ಮಜವೇ ಬೇರೆ. ಚಾಟ್ ಫೆಸ್ಟಿವಲ್‌ಗೆ ಹೋದಾಗ ಪಾನಿ ಪತಾಶಾಸ್ ಎಂಬ ತಿನಿಸನ್ನು ಟೇಸ್ಟ್ ಮಾಡದೆ ಬರದಿರಿ. ಬೇಯಿಸಿದ ಆಲೂಗಡ್ಡೆಯ ಹೂರಣ ಹಾಗೂ ಖಾರ ಹಾಗೂ ಮಸಾಲಾ ಪಾನಿ ವಿಶಿಷ್ಟ ರುಚಿ ನೀಡುವುದು.
ನೀವು ಪಾಪಡ್ ಪ್ರಿಯರಾಗಿದ್ದರೆ ಪಾಪ್ಡಿ ಚಾಟ್ ಹಾಗೂ ಪಾಲಕ್ ಪಾಪ್ಡಿ ಚಾಟ್ ನಿಮಗೆ ಇಷ್ಟವಾಗುತ್ತದೆ. ಖಡಕ್ ರುಚಿಯನ್ನು ಹೊಂದಿರುವ ಆಲೂ ಟಿಕ್ಕಿಗೆ ಮೊಸರು ಹಾಗೂ ಹಲವು ಬಗೆಯ ಚಟ್ನಿಯ ಜೊತೆ ತಿಂದರೆ ರುಚಿ ಇನ್ನೂ ಹೆಚ್ಚು.
ಎಲ್ಲಿ?: ಕೇಸರಿಯಾ, ನೆಕ್ಸಾ ಪ್ಯಾಲೇಸ್, ಬಳ್ಳಾರಿ ರಸ್ತೆ, ಸದಾಶಿವನಗರ
ಯಾವಾಗ?: ಜೂನ್ 5 ರಿಂದ 15ರವರೆಗೆ