Advertisement
ಮೋದಿ ಶಕ್ತಿ ಪ್ರದರ್ಶನ:ಚನ್ನಪಟ್ಟಣದಲ್ಲಿ ಭಾನುವಾರ ಮಧ್ಯಾಹ್ನ 1 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ರ್ಯಾಲಿ ನಡೆಸಲಿದ್ದಾರೆ. ಇನ್ನು ಈ ರ್ಯಾಲಿಗೆ 2 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು ಬಿಜೆಪಿ ಘೋಷಿಸಿದ್ದು, ಒಕ್ಕಲಿಗರ ಶಕ್ತಿ ಕೇಂದ್ರ ಎನಿಸಿರುವ ಮಂಡ್ಯ ಮತ್ತು ರಾಮನಗರ ಜಿಲ್ಲೆಯಲ್ಲಿ ಕಮಲ ಅರಳಿಸಲು ಆಸಕ್ತಿ ವಹಿಸಿರುವ ಬಿಜೆಪಿ ಹೈಕಮಾಂಡ್ ಮೋದಿ ಅವರನ್ನು ಕರೆಸಿ ಪ್ರಚಾರ ಮಾಡಲು ಮುಂದಾಗಿದೆ.
ಪ್ರಧಾನಿ ಮೋದಿ ಅವರ ಬಗ್ಗೆ ಪಕ್ಷಾತೀತವಾಗಿ ಕೆಲ ಅಭಿಮಾನಿಗಳಿದ್ದಾರೆ. ಕ್ಷೇತ್ರದಲ್ಲಿ ಪ್ರಧಾನಿ ಕರೆಸಿ ಬಿಜೆಪಿ ರ್ಯಾಲಿ ನಡೆಸುತ್ತಿರುವುದು ಬಿಜೆಪಿಗೆ ವರದಾನ ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಒಕ್ಕಲಿಗ ಸಮುದಾಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಸಾಕಷ್ಟು ಅಭಿಮಾನಿಗಳಿದ್ದು, ಒಕ್ಕಲಿಗರಾಚೆಗೂ ಕೆಲ ಮಂದಿ ದೇವೇಗೌಡರ ಅಭಿಮಾನಿಗಳಿದ್ದಾರೆ. ಮೋದಿಗೆ ಪರ್ಯಾಯವಾಗಿ ದೇವೇಗೌಡರ ರ್ಯಾಲಿ ಮಾಡಿಸುವ ಮೂಲಕ ಡ್ಯಾಮೇಜ್ ಕಂಟ್ರೋಲ್ ಮಾಡುವುದು ಜೆಡಿಎಸ್ನ ತಂತ್ರವಾಗಿದೆ.