Advertisement

HOT ಅಟ್ಯಾಕ್

12:30 AM Mar 20, 2019 | |

ಬಿಸಿಲು, ಆಯಾಸ, ದಾಹ, ನಿಶ್ಶಕ್ತಿ, ಊಟ ಸೇರದಿರುವುದು… ಇವು ಬೇಸಿಗೆಯ ಲಕ್ಷಣಗಳು. ಮುಂದಿನ ಎರಡೂ¾ರು ತಿಂಗಳು ಇವೆಲ್ಲವೂ ನಮ್ಮನ್ನು ಕಾಡುತ್ತವೆ. ಆದರೆ, ಋತುಮಾನಕ್ಕೆ ತಕ್ಕಂತೆ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ ಯಾವ ಸಮಸ್ಯೆಯೂ ಬರುವುದಿಲ್ಲ. ಬೇಸಿಗೆ ಬಂದಾಗ ಫ್ಯಾಷನ್‌ ಟ್ರೆಂಡ್‌ ಅಷ್ಟೇ ಅಲ್ಲ, ಲೈಫ್ಸ್ಟೈಲ್‌ ಅನ್ನೂ ಬದಲಿಸಿಕೊಳ್ಳಬೇಕು.

Advertisement

1. ಚಪಾತಿ, ರೊಟ್ಟಿ, ಪೂರಿ, ದೋಸೆಯಂಥ ಘನ ಪದಾರ್ಥಗಳನ್ನು ಬೆಳಗ್ಗಿನ ತಿಂಡಿಯಾಗಿ ಸೇವಿಸಬೇಡಿ. ಬೆಳಗ್ಗಿನ ಆಹಾರ ಹಿತ-ಮಿತವಾಗಿರಲಿ. ಇಲ್ಲವಾದರೆ, ದಿನವಿಡೀ ದಾಹ, ಆಯಾಸ ಕಾಡುತ್ತದೆ.

2. ಬೇಸಿಗೆಯಲ್ಲಿ ಶರ್ಕರಪಿಷ್ಠ ಅಧಿಕವಾಗಿರುವ ಅಕ್ಕಿ, ಗೋಧಿ ಪದಾರ್ಥಗಳ ಸೇವನೆ ಸಲ್ಲ. 

3. ಮೊಸರು, ಯೋಗರ್ಟ್‌ ಬದಲು ಮಜ್ಜಿಗೆ ಕುಡಿಯಿರಿ. ಸುಲಭವಾಗಿ ಜೀರ್ಣವಾಗುವ ಮತ್ತು ದ್ರವರೂಪದ ಆಹಾರವನ್ನು ಹೆಚ್ಚಾಗಿ ಸೇವಿಸಿ.

4. ತಂಪುಪಾನೀಯಗಳ ಸೇವನೆ ಜೀರ್ಣಕ್ರಿಯೆ ಮೇಲೆ ಅಡ್ಡಪರಿಣಾಮ ಬೀರುತ್ತವೆ. ಅದರ ಬದಲು ತಾಜಾ ಹಣ್ಣಿನ ರಸ, ಎಳನೀರು ಕುಡಿಯಿರಿ.

Advertisement

5. ಖಾರ ಹಾಗೂ ಮಸಾಲ ಪದಾರ್ಥಗಳು ದೇಹದ ಉಷ್ಣವನ್ನು ಹೆಚ್ಚಿಸುತ್ತವೆ. ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ, ಕಾಳುಮೆಣಸು, ಟೊಮೇಟೊ ಕಡಿಮೆ ಬಳಸಿ.

6. ನೀವು ಸೇವಿಸುವ ಸಕ್ಕರೆ ಪ್ರಮಾಣದ ಕಡೆ ಗಮನ ಕೊಡಿ. ಬಾಯಿಯನ್ನು ತಣ್ಣಗೆ ಮಾಡುವ ಐಸ್‌ಕ್ರೀಂ, ಐಸ್‌ಕ್ಯಾಂಡಿಯನ್ನು ದಿನಾ ತಿನ್ನಬೇಡಿ.

7. ಆಹಾರದಲ್ಲಿ ಹಣ್ಣು-ಹಸಿ ತರಕಾರಿ ಹೆಚ್ಚಾಗಿರಲಿ.

8. ಒಂದೇ ಬಾರಿಗೆ ಹೊಟ್ಟೆ ಬಿರಿಯುವಂತೆ ತಿನ್ನುವ ಬದಲು, ಹಣ್ಣು, ಡ್ರೈ ಫ್ರೂಟ್ಸ್‌, ಜ್ಯೂಸ್‌, ಮಜ್ಜಿಗೆಯನ್ನು ಆಗಾಗ್ಗೆ ಸೇವಿಸಿ.

Advertisement

Udayavani is now on Telegram. Click here to join our channel and stay updated with the latest news.

Next