Advertisement

Hosur ವಿಮಾನ ನಿಲ್ದಾಣಕ್ಕೆ 2 ಸ್ಥಳ ನಿಗದಿಪಡಿಸಿದ ತಮಿಳುನಾಡು

12:20 AM Dec 26, 2024 | Team Udayavani |

ಚೆನ್ನೈ: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೊಂದು ವಿಮಾನ ನಿಲ್ದಾಣ ಸ್ಥಾಪ­ನೆಗೆ ಕರ್ನಾಟಕ ಮುಂದಾಗಿದೆ.

Advertisement

ಇದರ ನಡುವೆಯೇ ನೆರೆಯ ತಮಿಳುನಾಡು ಹೊಸೂರಿನಲ್ಲಿ ಅಂತಾರಾ­ಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ 20 ಕಿ.ಮೀ. ದೂರದ ನಡುವೆ 2 ಸಂಭಾವ್ಯ ಸ್ಥಳಗಳನ್ನು ಗುರುತಿ­ಸಿದೆ.

ಅವುಗಳನ್ನು ಶೀಘ್ರವೇ ಪರಿಶೀಲನೆ ನಡೆ ಸುವ ಬಗ್ಗೆ ಬಗ್ಗೆ ತಮಿಳುನಾಡು ಸರಕಾರ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಮುಂದಿನ ವಾರ ಮನವಿ ಮಾಡುವ ಸಾಧ್ಯತೆಗಳಿವೆ. ನಿಲ್ದಾಣ ಸ್ಥಾಪನೆ ಬಗ್ಗೆ ಸಿಎಂ ಸ್ಟಾಲಿನ್‌ ಜೂನಲ್ಲಿ ಘೋಷಣೆ ಮಾಡಿ­ದ್ದರು.

ಸೆಪ್ಟಂಬರ್‌ನಲ್ಲಿ ತಮಿಳುನಾಡು ಸರಕಾರವು ಹೊಸೂರು ಸುತ್ತಲಿನ ತೊಗರೈ ಅಗ್ರಹಾರಂ ಸೇರಿ 4 ಪ್ರದೇಶಗಳನ್ನು ಗುರುತಿಸಿತ್ತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next