Advertisement
ಪ್ರೊ ಕಬಡ್ಡಿ 7ನೇ ಆವೃತ್ತಿಯ ಗುರುವಾರದ 2ನೇ ಪಂದ್ಯದಲ್ಲಿ ಗೆಲುವು ಅತ್ತಿಂದಿತ್ತ ತೂಗಾಡುತ್ತಲೇ ಇತ್ತು. ಕೊನೆಯಲ್ಲಿ ಅದೃಷ್ಟ ಬೆಂಗಾಲ್ ಕೈ ಹಿಡಿಯಿತು. ಬುಲ್ಸ್ ಪರ ಪವನ್ ಸೆಹ್ರಾವತ್ (19 ರೈಡಿಂಗ್ ಅಂಕ) ಏಕಾಂಗಿ ಯಾಗಿ ಹೋರಾಡಿದರು. ಬೆಂಗಾಲ್ ಜಯದಲ್ಲಿ ಮಣಿಂದರ್ ಸಿಂಗ್ (17 ರೈಡಿಂಗ್ ಅಂಕ) ಮಿಂಚಿದರು.
ಎರಡನೇ ಅವಧಿ ಆರಂಭವಾಗಿ 5 ನಿಮಿಷದಲ್ಲೇ ಆತಿಥೇಯರನ್ನು ಬೆಂಗಳೂರು ಬುಲ್ಸ್ ಆಲೌಟ್ ಮಾಡಿ ಮೇಲುಗೈಯನ್ನು 27-21ಕ್ಕೆ ಹೆಚ್ಚಿಸಿ ಕೊಂಡಿತು. ಈ ಅವಧಿಯಲ್ಲಿ ಪವನ್ ಆಕ್ರಮಣಕಾರಿಯಾಗಿ ಆಡಿದರು. ಅನಂತರ ಬೆಂಗಾಲ್ ಮಿಂಚಿನ ಆಟಕ್ಕೆ ಇಳಿಯಿತು. ಪಂದ್ಯದ ಕೊನೆಯ 5 ನಿಮಿಷದ ಆಟ ಬಾಕಿ ಇರುವಾಗ ಬೆಂಗಾಲ್ ಎದುರಾಳಿಯನ್ನು ಆಲೌಟ್ ಮಾಡಿತು. ಅಂಕ 33-33 ಸಮಬಲಕ್ಕೆ ಬಂತು. ಮೊದಲ ಅವಧಿಯಲ್ಲಿ ಬುಲ್ಸ್ ನ ತಾರಾ ಆಟಗಾರರಾದ ಪವನ್ ಹಾಗೂ ನಾಯಕ ರೋಹಿತ್ ಕುಮಾರ್ ವೈಫಲ್ಯ ಅನುಭವಿಸಿದರು. ಇದರಿಂದ ಬೆಂಗಳೂರು ವಿರಾಮದ ವೇಳೆ 16-15ರಿಂದ ಹಿನ್ನಡೆ ಅನುಭವಿಸಿತು.
Related Articles
ಗುರುವಾರ ನಡೆದ ಮೊದಲ ಪಂದ್ಯದಲ್ಲಿ ಪರ್‌ದೀಪ್ ನರ್ವಾಲ್ (14 ರೈಡಿಂಗ್ ಅಂಕ) ಹಾಗೂ ಜಾಂಗ್ ಕುನ್ ಲೀ (8 ರೈಡಿಂಗ್ ಅಂಕ) ನೆರವಿನಿಂದ ಜೈಪುರ ವಿರುದ್ಧದ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ 36-33 ಅಂಕಗಳ ರೋಚಕ ಗೆಲುವು ಸಾಧಿಸಿತು. ಇದು ಜೈಪುರಕ್ಕೆ ಎದುರಾದ ಸತತ 2ನೇ ಸೋಲು. ಪಂದ್ಯದ ಕೊನೆಯ ರೈಡಿಂಗ್‌ನಲ್ಲಿ ಕುನ್ ಲೀ ಸಮಯ ವ್ಯರ್ಥ ಮಾಡುವ ಮೂಲಕ ಪಾಟ್ನಾ ಜಯ ಗಳಿಸಿತು.
Advertisement