Advertisement
ಕೋವಿಡ್-19 ನಂತರದಲ್ಲಿ ಪದವಿ, ಸ್ನಾತಕೋತ್ತರ, ವೃತ್ತಿಪರ, ತಾಂತ್ರಿಕ ಕೋರ್ಸ್‌ಗಳ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ನ.17ರಿಂದ ತರಗತಿಗಳನ್ನು ಸರ್ಕಾರ ಆರಂಭಿಸಿದೆ. ಇದಕ್ಕೆ ಪೂರಕವಾಗಿ ಅಂದಿನಿಂದಲೇ ಹಾಸ್ಟೆಲ್ ಗಳ ಪುನರಾರಂಭಗೊಂಡಿವೆ.
Related Articles
Advertisement
ತೊಲಗಿಲ್ಲ ಭೀತಿ: ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಕೋವಿಡ್-19 ಕುರಿತ ಆತಂಕ ಕಡಿಮೆಯಾಗಿಲ್ಲ. ಹಾಸ್ಟೆಲ್ ಗೆ ದಾಖಲಾಗುವ 72 ಗಂಟೆ ಮುನ್ನ ಕೋವಿಡ್-19 ಪರೀಕ್ಷೆಗೊಳಗಾಗಿ ನೆಗೆಟಿವ್ ವರದಿ ತರಬೇಕು ಎನ್ನುವ ನಿಯಮದಿಂದ ಬಹುತೇಕರು ಹಿಂದೇಟು ಹಾಕುತ್ತಿದ್ದಾರೆ. ಇನ್ನೂ ಕಾಲೇಜುಗಳ ಹಾಜರಾತಿ ಕಡ್ಡಾಯಗೊಳಿಸದಿರುವುದು ಹಾಗೂ ಆನ್‌ಲೈನ್ ಕ್ಲಾಸ್‌ಗಳಿಗೆ ಆದ್ಯತೆ ನೀಡಿರುವುದು ಹಾಸ್ಟೆಲ್ ಪ್ರವೇಶಕ್ಕೆ ಹೆಚ್ಚಿನ ಒತ್ತು ನೀಡುತ್ತಿಲ್ಲ. ದಿನ ಕಳೆದಂತೆ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಅಧಿಕಾರಿಗಳಲ್ಲಿದೆ.
ತೆಗೆದುಕೊಂಡ ಮುಂಜಾಗ್ರತಾ ಕ್ರಮಗಳೇನು? :
-ಹಾಸ್ಟೆಲ್ ಪ್ರವೇಶ ದ್ವಾರ ಹಾಗೂ ಊಟದ ಕೋಣೆಯಲ್ಲಿ ಸ್ಯಾನಿಟೈಸರ್ ದ್ರಾವಣ
-ಊಟದ ಕೋಣೆ ಸೇರಿದಂತೆ ಇನ್ನಿತರೆ ಕಡೆ ಬಿಸಿ ನೀರು ಪೂರೈಕೆ
-ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಸೀಮಿತ ಮಂಚ
-ಥರ್ಮಲ್ ಸ್ಕ್ಯಾನಿಂಗ್ ಮತ್ತು ತುರ್ತು ವೈದ್ಯಕೀಯ ಸೇವೆ
-ಸೋಂಕಿನ ಲಕ್ಷಣ ಕಂಡು ಬಂದರೆ ಪ್ರತ್ಯೇಕ ಕೊಠಡಿ ವ್ಯವಸ್ಥೆ
-ಹಾಸ್ಟೆಲ್, ಹಾಸಿಗೆ ಸ್ವತ್ಛತೆಗೆ ಆದ್ಯತೆ-ಶುಚಿ ರುಚಿ ಆಹಾರಕ್ಕೆಒತ್ತು
-ಸೋಡಿಯಂ ಹೈಪೋಕ್ಲೋರೈಡ್‌ನಿಂದ ಎರಡೆರಡು ಬಾರಿ ಸ್ಯಾನಿಟೈಸ್
ಹಾಸ್ಟೆಲ್ ಹಾಗೂ ಕೊಠಡಿಗಳ ಹಂಚಿಕೆ ಶೇ.50ಕ್ಕೆ ಸೀಮಿತ
ಕಾಲೇಜುಗಳು ಆರಂಭಗೊಂಡ ಹಿನ್ನೆಲೆಯಲ್ಲಿ ಸರ್ಕಾರ ಹಾಸ್ಟೆಲ್ ಆರಂಭಕ್ಕೆ ಸೂಚನೆ ನೀಡಿದ್ದು, ಸ್ವತ್ಛತೆ ಹಾಗೂ ಕೋವಿಡ್ -19 ತಡೆ ನಿಯಮಗಳನ್ನು ಕಡ್ಡಾಯವಾಗಿ ಅಳವಡಿಸಲಾಗಿದೆ. ದಿನ ಕಳೆದಂತೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. -ಆರ್.ಎನ್. ಪುರುಷೋತ್ತಮ ಜಂಟಿ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ
-ಹೇಮರಡ್ಡಿ ಸೈದಾಪುರ