Advertisement

“ವ್ಯವಸ್ಥಿತ ಕಟ್ಟಡಕ್ಕೆ ವಸತಿ ನಿಲಯ’

09:31 PM Jul 24, 2019 | mahesh |

ಬೆಳ್ತಂಗಡಿ: ಉಜಿರೆ ಹಳೆ ಪೇಟೆಯಲ್ಲಿ ಬಾಡಿಗೆ ಕಟ್ಟಡದಲ್ಲಿದ್ದ ವಸತಿ ನಿಲಯವನ್ನು ಬೇರೊಂದು ವ್ಯವಸ್ಥಿತ ಕಟ್ಟಡದಲ್ಲಿ ಮಕ್ಕಳಿಗೆ ಹಿತ ವಾಗುವ ರೀತಿಯಲ್ಲಿ ಬದಲಾವಣೆ ಮಾಡಲಾಗುತ್ತಿದೆ ಎಂದು ಲೋಕಾ ಯುಕ್ತ ವೃತ್ತನಿರೀಕ್ಷಕಿ ಭಾರತಿ ಹೇಳಿದರು.

Advertisement

ತಾಲೂಕಿನ ಮಿನಿ ವಿಧಾನಸೌಧದಲ್ಲಿ ಬುಧವಾರ ಸಾರ್ವಜನಿಕ ಅಹವಾಲು ಸ್ವೀಕರಿಸಿ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಲೋಕಾಯುಕ್ತ ನ್ಯಾಯಮೂರ್ತಿ ಯವರು ಬೆಳ್ತಂಗಡಿ, ಬಂಟ್ವಾಳ, ಮಂಗಳೂರು ಮುಂತಾದ ಪ್ರದೇಶಗಳಲ್ಲಿ ಸರಕಾರಿ ವಸತಿ ನಿಲಯಗಳಿಗೆ ಭೇಟಿ ನೀಡಿ ಅಲ್ಲಿರುವ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸರಿಪಡಿಸುವ ಬಗ್ಗೆ ರಾಜ್ಯಮಟ್ಟದ ಅಧಿಕಾರಿಗಳಿಗೆ ಸೂಚಿಸಿದ್ದರು. ಬಳಿಕ ನಾವು ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನಹರಿಸಿ ವಸತಿ ನಿಲಯದ ವ್ಯವಸ್ಥೆ ಸರಿಪಡಿಸಲು ಪ್ರಯತ್ನಿಸಿದ ಫಲವಾಗಿ ವಿದ್ಯಾರ್ಥಿಗಳನ್ನು ಶೀಘ್ರ ಸ್ಥಳಾಂತರಿಸುವ ಕೆಲಸವಾಗಲಿದೆ ಎಂದರು.

ಇದಕ್ಕೂ ಮುನ್ನ ಸಾರ್ವಜನಿಕ ರಿಂದ ಅಹವಾಲು ಸ್ವೀಕರಿಸಲಾಯಿತು. 1972-73ರಲ್ಲಿ ಡಿಸಿಡಿಆರ್‌ನಲ್ಲಿ 7.10 ಎಕ್ರೆ ಭೂಮಿ ಮಂಜೂರಾಗಿ ಸಾಗುವಳಿ ಚೀಟಿ ಸಿಕ್ಕಿದ್ದು, ಕೃಷಿ ಚಟುವಟಿಕೆ ನಡೆಸುತ್ತಿದ್ದೇನೆ ಇದೀಗ ಅರಣ್ಯ ಭೂಮಿ ಎಂದು ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಪೆರಾಡಿ ಗ್ರಾಮದ ರಮೇಶ್‌ ದೂರು ನೀಡಿದರು. ಪಿಡಬ್ಲ್ಯುಡಿ, ಅರಣ್ಯ ಇಲಾಖೆಯಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸಿ ಇದೀಗ ನಿವೃತ್ತಿ ಹೊಂದಿದ್ದು, ನನಗೆ ಸೌಲಭ್ಯ ನೀಡಿಲ್ಲ ಎಂದು ಸೋಣಂದೂರು ಗ್ರಾಮದ ವಲೇರಿ ಯನ್‌, ದೂರಿದರು.

ಸರಕಾರಿ ಜಮೀನು ಒತ್ತುವರಿ
ಶೀರ್ಲಾಲು ಗ್ರಾಮದ ಪುದ್ದರಬೈಲು ನಿವಾಸಿ ಎಂ.ಪಿ. ಶೇಖರ್‌ ಸರಕಾರಿ ಜಮೀ ನನ್ನು ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಿದ ಕುರಿತು ತಹಶೀಲ್ದಾರರಿಗೆ ದೂರು ನೀಡಲಾಗಿತ್ತು. ತಹಶೀಲ್ದಾರ್‌ ಹಾಗೂ ಸರ್ವೇ ಇಲಾಖೆಯು ಸ್ಥಳತನಿಖೆ ಮಾಡಿ ತೆರವಿಗೆ ಆದೇಶ ಮಾಡಿದರೂ ಇನ್ನೂ ತೆರವುಗೊಳಿಸಿಲ್ಲ. ಈ ಬಗ್ಗೆ ತಹಶೀಲ್ದಾರರ ಬಳಿ ಲೋಕಾಯುಕ್ತರು ವಿಚಾರಿಸಿದಾಗ ಈ ವಿಚಾರ ಕೋರ್ಟ್‌ನಲ್ಲಿರುವುದರಿಂದ ತೆರವುಗೊಳಿಸಿಲ್ಲ ಎಂದು ತಿಳಿಸಿದ್ದಾರೆ ಎಂದು ಶೀರ್ಲಾಲು ಗ್ರಾಮದ ಪುದ್ದರಬೈಲು ನಿವಾಸಿ ವಿಶ್ವನಾಥ ಸಾಲ್ಯಾನ್‌ ದೂರು ನೀಡಿದರು.

ಕುವೆಟ್ಟು ಗ್ರಾಮದ ಶಿವಾಜಿ ನಗರದ ಭೋಜರಾಜ ಕುಲಾಲ್‌ ಸರಕಾರಿ ಭೂಮಿ ಒತ್ತುವರಿ ಮಾಡಿ ಶೆಡ್‌ ನಿರ್ಮಿಸಿ ಮಳೆನೀರು ಹರಿಯದಂತೆ ತಡೆಯೊಡ್ಡಿರುವ ಕುರಿತು ಕುವೆಟ್ಟು ಗ್ರಾಮದ ಶಿವಾಜಿ ನಗರದ ಸುಮಾ ವಸಂತ ಆಚಾರ್ಯ ದೂರು ನೀಡಿದರು. ದೂರುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವ ಕುರಿತು ಲೋಕಾಯುಕ್ತ ಅಧಿಕಾರಿ ಗಳು ಭರವಸೆ ನೀಡಿದರು. ಲೋಕಾಯುಕ್ತ ಸಿಬಂದಿ ಹರೀಶ್‌ ಉಪಸ್ಥಿತರಿದ್ದರು.

Advertisement

ತಪ್ಪಿತಸ್ಥ ಅಧಿಕಾರಿಗಳ ಮೇಲೆ ನಿಗಾ
ಬೆಳ್ತಂಗಡಿ ಮೆಸ್ಕಾಂ ಕಚೇರಿ ಬಳಿ ಇರುವ ವಸತಿ ನಿಲಯದ ಮೂಲಸೌಕರ್ಯ ಸರಿಪಡಿಸ ಲಾಗಿದೆ. ಬಂಟ್ವಾಳ, ಮಂಗಳೂರಿ ನಲ್ಲೂ ಸಮಸ್ಯೆಗೆ ಸ್ಪಂದಿಸುವ ಮೂಲಕ ಲೋಕಾಯುಕ್ತ ಗಮನಹರಿಸುತ್ತಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಿಗಾ ಇರಿಸಲಾಗುತ್ತಿದೆ ಎಂದು ಲೋಕಾಯುಕ್ತ ವೃತ್ತನಿರೀಕ್ಷಕಿ ಭಾರತಿ ತಿಳಿಸಿದರು.

 ಸಹಕರಿಸಿ
ವೈಯಕ್ತಿಕ ದ್ವೇಷದ ಕುರಿತ ದೂರುಗಳು ಹೆಚ್ಚಾಗಿ ಬರುತ್ತಿವೆ. ಸಾರ್ವಜನಿಕರಿಗೆ ತೊಂದರೆಯಾಗುವ ವ್ಯವಸ್ಥೆಗಳ ಕುರಿತು ಲೋಕಾಯಕ್ತ ಪರಿಹಾರಕ್ಕೆ ಆದ್ಯತೆ ನೀಡುತ್ತಿದೆ. ಸಾರ್ವಜನಿಕರಿಗೆ ತೊಂದರೆಯಾಗುವ ವ್ಯವಸ್ಥೆಗಳ ಪರಿಹಾರಕ್ಕೆ ಎಲ್ಲರೂ ಸಹಕರಿಸಬೇಕು.
– ಭಾರತಿ, ಲೋಕಾಯುಕ್ತ ವೃತ್ತನಿರೀಕ್ಷಕಿ

Advertisement

Udayavani is now on Telegram. Click here to join our channel and stay updated with the latest news.

Next