Advertisement

ವಿದೇಶದತ್ತ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’

06:17 PM Jul 28, 2023 | Team Udayavani |

ಒಂದು ದೊಡ್ಡ ಗೆಲುವಿಗಾಗಿ ಎದುರು ನೋಡುತ್ತಿದ್ದ ಸ್ಯಾಂಡಲ್‌ವುಡ್‌ಗೆ ಈ ಬಾರಿ ಗೆಲುವಿನ ರುಚಿ ತೋರಿಸಿದವರು “ಹಾಸ್ಟೆಲ್‌ ಹುಡುಗರು’. ನಗುವೊಂದೇ ಸಿನಿಮಾದ ಪರಮ ಉದ್ದೇಶ ಎಂದುಕೊಂಡು ಬಂದ “ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ಚಿತ್ರ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಯಶಸ್ಸಿನ ಪಯಣ ಮುಂದುವರೆಸಿದೆ. ಈಗ ಹುಡುಗರು ವಿದೇಶದಲ್ಲೂ ಹವಾ ಎಬ್ಬಿಸಲು ರೆಡಿಯಾಗಿದ್ದಾರೆ.

Advertisement

ಹೌದು, “ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ವಿದೇಶದಲ್ಲಿಯೂ ಬಿಡುಗಡೆಯಾಗುತ್ತಿದೆ. ಕೆನಡ, ಸೌತ್‌ ಆಫ್ರಿಕಾ, ಆಸ್ಟ್ರೇಲಿಯಾ, ಯುಕೆ ಅಂಡ್‌ ಯೂರೋಪ್‌ ದೇಶಗಳಲ್ಲಿ ಈ ವಾರಾಂತ್ಯದಿಂದ ತುಂಗಾ ಹಾಸ್ಟೆಲ್‌ ಬಾಯ್ಸ್ ಕ್ವಾಟ್ಲೆ ಶುರುವಾಗಲಿದೆ. ಆರಂಭದಿಂದಲೂ ತಮ್ಮ ಚಿತ್ರವನ್ನು ಅತ್ಯಂತ ಕೆಟ್ಟ ಚಿತ್ರ ಎನ್ನುತ್ತಲೇ ಅತ್ಯುತ್ತಮ ಸಿನಿಮಾ ಎಂದು ಪ್ರೇಕ್ಷಕರಿಂದ ಬೆನ್ನು ತಟ್ಟಿಸಿಕೊಂಡಿರುವ ಚಿತ್ರತಂಡ ವಿಶ್ವಾದ್ಯಂತ ತಮ್ಮ ಸಿನಿಮಾವನ್ನು ಸಂಭ್ರಮಿಸುವ ತವಕದಲ್ಲಿದೆ.

ಹೈದರಾಬಾದ್‌, ಚೆನ್ನೈ, ಕೊಚ್ಚಿ ಸೇರಿದಂತೆ ಹಲವರು ರಾಜ್ಯಗಳಲ್ಲಿ ನಿತಿನ್‌ ಕೃಷ್ಣಮೂರ್ತಿ ಚೊಚ್ಚಲ ಕನಸಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವರುಣ್‌ ಗೌಡ, ನಿತಿನ್‌ ಕೃಷ್ಣಮೂರ್ತಿ, ಪ್ರಜ್ವಲ್‌ ಬಿ.ಪಿ, ಅರವಿಂದ್‌ ಎಸ್‌ ಕಶ್ಯಪ್‌ ಸಿನಿಮಾಗೆ ಬಂಡವಾಳ ಹೂಡಿದ್ದು, ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ತಮ್ಮದೇ ಪರವಃ ಪಿಕ್ಚರ್ನಡಿ ಪ್ರಸೆಂಟ್‌ ಮಾಡಿದ್ದಾರೆ. ಈ ತಂಡಕ್ಕೆ ರಿಷಭ್‌ ಶೆಟ್ಟಿ, ರಮ್ಯಾ, ಪವನ್‌ ಕುಮಾರ್‌, ಶೈನ್‌ ಶೆಟ್ಟಿ ಹಾಗೂ ದಿಗಂತ್‌ ಕೂಡ ಸಾಥ್‌ ಕೊಟ್ಟಿದ್ದಾರೆ. ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಸಂಗೀತ, ಅರವಿಂದ್‌ ಕಶ್ಯಪ್‌ ಛಾಯಾಗ್ರಹಣ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next