Advertisement

ಹಾಸ್ಟೆಲ್, ಆರೋಗ್ಯ ಕೇಂದ್ರ ಕುಂದುಕೊರತೆ ಪರಿಶೀಲನೆ

12:56 AM Jul 21, 2019 | Team Udayavani |

ಬಂಟ್ವಾಳ: ಲೋಕಾಯುಕ್ತ ನ್ಯಾ| ಪಿ. ವಿಶ್ವನಾಥ ಶೆಟ್ಟಿ ಜು. 20ರಂದು ಬಿ.ಸಿ. ರೋಡ್‌ನ‌ ಹಿಂದುಳಿದ ವರ್ಗಗಳ ಹಾಸ್ಟೆಲ್ಗೆ ಭೇಟಿ ನೀಡಿ ಅಲ್ಲಿನ ಕುಂದು ಕೊರತೆಗಳ ಪರಿಶೀಲನೆ ನಡೆಸಿದರು.

Advertisement

ಹಾಸ್ಟೆಲ್ ವರಾಂಡ ಸಹಿತ ಕಚೇರಿ, ವಿದ್ಯಾರ್ಥಿಗಳ ಕೊಠಡಿಯನ್ನು ಲೋಕಾ ಯುಕ್ತರು ಭೇಟಿ ನೀಡಿ ಪರಿಶೀಲಿಸುವರು ಎಂಬ ಕಾರಣಕ್ಕೆ ಶುಚಿ ಮಾಡಲಾಗಿದೆಯೇ ಅಥವಾ ನಿತ್ಯ ಶುಚಿತ್ವ ಕಾಪಾಡಲಾಗು ತ್ತಿದೆಯೇ ಎಂದು ಸಮಾಜ ಕಲ್ಯಾಣ ಅಧಿಕಾರಿಗಳನ್ನು ಪ್ರಶ್ನಿಸಿದರು.

ಹಾಸ್ಟೆಲ್ ಕುಂದುಕೊರತೆ ಬಗ್ಗೆ ಸುಧಾ ರಣೆ ಆಗಬೇಕು. ನೀರು ಸೋರಿಕೆಯಿಂದ ಗೋಡೆಯಲ್ಲಿ ಆಗಿರುವ ಕಪ್ಪುಕಲೆಗಳನ್ನು ಗುರುತಿಸಿ, ಇದನ್ನು ತೆಗೆಯಲು ಮರೆತು ಹೋಯಿತೇ ಎಂದಾಗ, ಅಧಿಕಾರಿಗಳು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಮೊಡಂಕಾಪು ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ, ಶಿಥಿಲಾವಸ್ಥೆಯಲ್ಲಿರುವ ಕಟ್ಟಡದ ಬಗ್ಗೆ ಮಾಹಿತಿ ಪಡೆದು ಕೊಂಡರು. ಕಟ್ಟಡಕ್ಕೆ ಸುಣ್ಣ- ಬಣ್ಣ ಬಳಿಯುವಂತೆ ತಿಳಿಸಿ ದರು. ಒಂದು ತಿಂಗಳ ಒಳಗೆ ಸರಿಪಡಿಸಿ ಮಾಹಿತಿ ನೀಡಿ ಎಂದು ಆದೇಶಿಸಿದರು.

ಇಲಾಖೆ ವತಿಯಿಂದ ಪ್ರವಾಸ ಅವಕಾಶ ಮಾಡಿಕೊಡುವಂತೆ ಲೋಕಾಯುಕ್ತರಲ್ಲಿ ವಿದ್ಯಾರ್ಥಿಗಳು ಕೇಳಿಕೊಂಡಾಗ, ಅಧಿಕಾರಿ ಗಳಿಗೆ ತಿಳಿಸುವುದಾಗಿ ಹೇಳಿದರು.

Advertisement

ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಧಿಕಾರಿಗಳ ಕೊಠಡಿ, ರೋಗಿಗಳ ತಪಾಸಣೆ ಕೊಠಡಿ ಗಳನ್ನು ಪರಿಶೀಲಿಸಿದರು. ರೋಗಿಗಳಲ್ಲಿ ಆರೋಗ್ಯದ ಬಗ್ಗೆ ವಿಚಾರಿಸಿದರು.

ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿದ್ದು, ಇಲ್ಲಿನ ವಠಾರ ಶುಚಿತ್ವ ಕಾಪಾಡಲು, ಸೊಳ್ಳೆ ಉತ್ಪತ್ತಿಯಾಗದಂತೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿಯನ್ನು ವಿಚಾರಿಸಿದರು.

ಆಸ್ಪತ್ರೆಯ ಪ್ರತಿ ಘಟಕಗಳ ವೀಕ್ಷಣೆ ನಡೆಸಿ ತಾ| ಆರೋಗ್ಯ ಅಧಿಕಾರಿ ದೀಪಾ ಪ್ರಭು ಅವರಿಂದ ಮಾಹಿತಿ ಪಡೆದು ಕೊಂಡರು. ವೈದ್ಯಾಧಿಕಾರಿಗಳು ಸರಿಯಾಗಿ ಶುಶ್ರೂಷೆ ಮಾಡುತ್ತಿದ್ದಾರೆ. ಇಷ್ಟು ಸಂಖ್ಯೆ ಯಲ್ಲಿ ಆರೋಗ್ಯ ತಪಾ ಸಣೆಗೆ, ಔಷಧಕ್ಕಾಗಿ ಜನರು ಬರುವುದನ್ನು ಕಾಣುವಾಗ ಇಲ್ಲಿನ ವೈದ್ಯರ ಸೇವೆ ಬಗ್ಗೆ ಮನವರಿಕೆ ಆಗುತ್ತದೆ. ಉತ್ತಮ ಸೇವೆಯೇ ಜನಾಕರ್ಷಣೆಗೆ ಕಾರಣವಾಗಿದೆ ಎಂದರು.

ಸರಕಾರಿ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರು, ವೈದ್ಯಾಧಿಕಾರಿಗಳ ಕೊರತೆ ಇರುವ ಬಗ್ಗೆ, ಹೊರಗುತ್ತಿಗೆಯಲ್ಲಿ ವೈದ್ಯರನ್ನು ನೇಮಕ ಮಾಡುವು ದಕ್ಕೆ ಇರುವ ಅವಕಾಶ ಬಳಸಿ ಕೊಳ್ಳುವಂತೆ ಲೋಕಾಯುಕ್ತ ನ್ಯಾ| ಪಿ. ವಿಶ್ವನಾಥ ಶೆಟ್ಟಿ ಸೂಚನೆ ನೀಡಿದರು. ಸರ್ಜರಿ, ಇನ್ನಿತರ ಸೇವೆಗಳಿಗೆ ಅಗತ್ಯವಿದ್ದಲ್ಲಿ ಹತ್ತಿರದ ಖಾಸಗಿ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸುವಂತೆ ತಿಳಿಸಿದರು.

ಸರಕಾರಿ ಆಸ್ಪತ್ರೆಯ ಡಿ. ಗ್ರೂಪ್‌ ನೌಕರರಿಗೆ ಮಾಸಿಕ ವೇತನ ಸರಿಯಾಗಿ ಬರುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿ ಕೊಂಡಾಗ ವೇತನ ವಿಳಂಬದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ವೇತನ, ಪಿಎಫ್‌ ಕಡಿತದ ಕ್ರಮಗಳ ಬಗ್ಗೆ ವಿವರ ಪಡೆದರು.

ಹೊರಗುತ್ತಿಗೆಯಲ್ಲಿ ವೈದ್ಯರ ನೇಮಕ

ಸರಕಾರಿ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರು, ವೈದ್ಯಾಧಿಕಾರಿಗಳ ಕೊರತೆ ಇರುವ ಬಗ್ಗೆ, ಹೊರಗುತ್ತಿಗೆಯಲ್ಲಿ ವೈದ್ಯರನ್ನು ನೇಮಕ ಮಾಡುವು ದಕ್ಕೆ ಇರುವ ಅವಕಾಶ ಬಳಸಿ ಕೊಳ್ಳುವಂತೆ ಲೋಕಾಯುಕ್ತ ನ್ಯಾ| ಪಿ. ವಿಶ್ವನಾಥ ಶೆಟ್ಟಿ ಸೂಚನೆ ನೀಡಿದರು. ಸರ್ಜರಿ, ಇನ್ನಿತರ ಸೇವೆಗಳಿಗೆ ಅಗತ್ಯವಿದ್ದಲ್ಲಿ ಹತ್ತಿರದ ಖಾಸಗಿ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸುವಂತೆ ತಿಳಿಸಿದರು. ಸರಕಾರಿ ಆಸ್ಪತ್ರೆಯ ಡಿ. ಗ್ರೂಪ್‌ ನೌಕರರಿಗೆ ಮಾಸಿಕ ವೇತನ ಸರಿಯಾಗಿ ಬರುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿ ಕೊಂಡಾಗ ವೇತನ ವಿಳಂಬದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ವೇತನ, ಪಿಎಫ್‌ ಕಡಿತದ ಕ್ರಮಗಳ ಬಗ್ಗೆ ವಿವರ ಪಡೆದರು.
Advertisement

Udayavani is now on Telegram. Click here to join our channel and stay updated with the latest news.

Next