ನವದೆಹಲಿ: ಸಾರ್ವಜನಿಕ ಆರೋಗ್ಯ ತಜ್ಞರು ಹಾಗೂ ಖಾಸಗಿ ಆಸ್ಪತ್ರೆಗಳ ಸಂಘವು ಈಗ ಕೆಲವು ಆಸ್ಪತ್ರೆಗಳಿಗೆ “ಸ್ತನ್ಯಪಾನ ಸ್ನೇಹಿ’ ಎಂಬ ಟ್ಯಾಗ್ ನೀಡಲಾರಂಭಿಸಿವೆ.
ಸಿಸೇರಿಯನ್ ಹೆರಿಗೆಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದು, ಹೆರಿಗೆಯಾದ ಕೂಡಲೇ ಶಿಶುವಿಗೆ ಹಾಲುಣಿಸುವ ಪ್ರಮಾಣ ಶೇ.46ರಷ್ಟು ಇಳಿಮುಖವಾಗಿದೆ ಎಂದು ಇತ್ತೀಚೆಗೆ ಬಿಡುಗಡೆಯಾದ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ(ಎನ್‌ಎಫ್ಎಚ್‌ಎಸ್) ವರದಿ ಹೇಳಿತ್ತು.
ಅದರ ಬೆನ್ನಲ್ಲೇ ಭಾರತೀಯ ಸ್ತನ್ಯಪಾನ ಉತ್ತೇಜನಾ ಜಾಲ(ಬಿಪಿಎನ್‌ಐ) ಮತ್ತು ಅಸೋಸಿಯೇಷನ್ ಆಫ್ ಹೆಲ್ತ್‌ಕೇರ್ ಪ್ರೊವೈಡರ್ಸ್ ಇನ್ ಇಂಡಿಯಾ(ಎಎಚ್‌ಪಿಐ) ಜಂಟಿಯಾಗಿ ಈ ಯೋಜನೆ ಹಮ್ಮಿಕೊಂಡಿದ್ದು, ಆಸ್ಪತ್ರೆಗಳಿಗೆ ಸ್ತನ್ಯಪಾನ ಸ್ನೇಹಿ ಎಂಬ ಮಾನ್ಯತೆ ನೀಡಲು ಚಿಂತನೆ ನಡೆಸಿವೆ.
ಇದನ್ನೂ ಓದಿ:ಪ್ರತಿಯೊಬ್ಬರಿಗೂ ಧರ್ಮದ ಅರಿವು ಮುಖ್ಯ : ಶಾಸಕ ಸಿದ್ದು ಸವದಿ
ಕೇವಲ ಶೇ.41.8ರಷ್ಟು ತಾಯಂದಿರಿಗೆ ಮಾತ್ರ ಹೆರಿಗೆಯಾದ ಒಂದು ಗಂಟೆಯೊಳಗೆ ಶಿಶುವಿಗೆ ಸ್ತನ್ಯಪಾನ ಮಾಡಲು ಸಾಧ್ಯವಾಗುತ್ತಿದೆ. ಆದರೆ, ಉಳಿದ ಶೇ.58ರಷ್ಟು ಮಂದಿಗೆ ಇದು ಸಾಧ್ಯವಾಗುತ್ತಿಲ್ಲ. ಅಂದರೆ, ವರ್ಷದಲ್ಲಿ 2.45 ಕೋಟಿ ಮಕ್ಕಳು ಹುಟ್ಟಿದರೆ, ಆ ಪೈಕಿ 1.42 ಕೋಟಿ ಮಕ್ಕಳು ತಾಯಿಯ ಎದೆಹಾಲಿನಿಂದ ವಂಚಿತರಾಗುತ್ತಿದ್ದಾರೆ. ಇದರಿಂದ ತಾಯಿ-ಮಗುವಿನ ಮಾನವ ಹಕ್ಕನ್ನೂ ಉಲ್ಲಂಘಿ ಸಿದಂತಾಗುತ್ತದೆ ಎಂದು ಎನ್‌ಎಫ್ಎಚ್‌ಎಸ್ ವರದಿ ಹೇಳಿತ್ತು.