Advertisement

ಕರಾವಳಿ: ಪರಿಸ್ಥಿತಿ ನಿಭಾವಣೆಗೆ ತಾಲೂಕು ಆಸ್ಪತ್ರೆಗಳು ಸನ್ನದ್ಧ

11:35 PM Jan 13, 2022 | Team Udayavani |

ಮಣಿಪಾಲ: ಕೊರೊನಾ ಮತ್ತು ಒಮಿಕ್ರಾನ್‌ ಪ್ರಕರಣಗಳೊಂದಿಗೆ ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ಸಾಮಾನ್ಯ ಶೀತ-ಜ್ವರ-ಕೆಮ್ಮು ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರುತ್ತಿದೆ. ಇದರ ಜತೆ ಹವಾಮಾನದಲ್ಲಿ ಏರುಪೇರು ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. 2-3 ದಿನಗಳಿಂದ ಬೆಳಗ್ಗೆ ಭಾರೀ ಚಳಿ ಇದ್ದು, ಮಂಜು ಕೂಡ ಬೀಳುತ್ತಿದೆ. ಮೂರನೇ ಅಲೆಯ ಅಬ್ಬರದ ನಡುವೆ ಕರಾವಳಿಯ ತಾಲೂಕು ಆಸ್ಪತ್ರೆಗಳಲ್ಲಿನ ಸ್ಥಿತಿಗತಿ ಹೇಗಿದೆ ಎಂಬುದರ ಕುರಿತು ಸ್ಥೂಲ ನೋಟ ಇಲ್ಲಿದೆ.

Advertisement

ಬಂಟ್ವಾಳದಲ್ಲಿ ಸದ್ಯ ಸಮಸ್ಯೆ ಇಲ್ಲ :

ಬಂಟ್ವಾಳ: ತಾಲೂಕಿನಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸದ್ಯ ಯಾವುದೇ ಸಮಸ್ಯೆ ಇಲ್ಲ. ಸಾಕಷ್ಟು ಸಂಖ್ಯೆ ಬೆಡ್‌ ಮತ್ತು ವೈದ್ಯರು ಲಭ್ಯವಿದ್ದು, ಆಕ್ಸಿಜನ್‌ ವ್ಯವಸ್ಥೆಯನ್ನೂ ಮಾಡಲಾಗಿದೆ.

ಒಟ್ಟು 100 ಬೆಡ್‌ಗಳಿರುವ ಆಸ್ಪತ್ರೆಯಲ್ಲಿ ಸದ್ಯಕ್ಕೆ 40 ಬೆಡ್‌ಗಳು ಭರ್ತಿಯಾಗಿದ್ದು, 60 ಬೆಡ್‌ಗಳು ಖಾಲಿ ಇವೆ. 4 ಮಂದಿ ಕೋವಿಡ್‌ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿ 60 ಬೆಡ್‌ಗಳಿಗೆ ಆಕ್ಸಿಜನ್‌ ವ್ಯವಸ್ಥೆ ಇದ್ದು, 4 ಸಾಮಾನ್ಯ ರೋಗಿಗಳಿಗೆ ಐಸಿಯು ಹಾಗೂ 5 ಕೋವಿಡ್‌ ರೋಗಿಗಳಿಗೆ ಐಸಿಯು ವ್ಯವಸ್ಥೆ ಇರುತ್ತದೆ. ಆಸ್ಪತ್ರೆಯಲ್ಲಿ ಒಟ್ಟು 69 ಮಂದಿ ಸಿಬಂದಿ ಇದ್ದು, 9 ಮಂದಿ ವೈದ್ಯರು ಹಾಗೂ 30 ಮಂದಿ ನರ್ಸ್‌ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ತಾಲೂಕು ವ್ಯಾಪ್ತಿಯಲ್ಲಿ ವಾಮದಪದವು ಮತ್ತು ವಿಟ್ಲದಲ್ಲಿ ಸಮುದಾಯ ಆಸ್ಪತ್ರೆಗಳಿದ್ದು, ಅನುಕ್ರಮವಾಗಿ 12 ಮತ್ತು 30 ಬೆಡ್‌ಗಳಿವೆ. ಬಹುತೇಕ ಬೆಡ್‌ಗಳು ಸದ್ಯ ಖಾಲಿ ಇವೆ.

Advertisement

ಒಟ್ಟು  ಜನಸಂಖ್ಯೆ          3.95 ಲಕ್ಷ

ಒಟ್ಟು  ಬೆಡ್‌ಗಳು             100

ಕೋವಿಡ್‌ಗೆ ಮೀಸಲು    30

ಖಾಲಿ ಬೆಡ್‌ಗಳು                60

ಒಟ್ಟು  ವೈದ್ಯರು               09

ಪುತ್ತೂರು: ವೈದ್ಯ, ಸಿಬಂದಿ ಕೊರತೆ ಇಲ್ಲ :

ಪುತ್ತೂರು: ಉಪ ವಿಭಾಗದ ಅತೀ ದೊಡ್ಡ ಸರಕಾರಿ ಆಸ್ಪತ್ರೆಯಾಗಿರುವ ಪುತ್ತೂರು ತಾಲೂಕು ಆಸ್ಪತ್ರೆಯಲ್ಲಿ ವೈದ್ಯರು, ಸಿಬಂದಿ ಹುದ್ದೆಯಲ್ಲಿ ಕೊರತೆ ಇಲ್ಲ. ಡಯಾಲಿಸಿಸ್‌ ಯಂತ್ರ, ಜನರೇಟರ್‌ ಸೇರಿದಂತೆ ಕೆಲವು ಮೂಲ ಸೌಕರ್ಯದ ಈಡೇರಿಕೆಯ ಅಗತ್ಯ ಇದೆ.

ಕಳೆದ ಕೊರೊನಾ ಅಲೆಯ ಅವಧಿಯಲ್ಲಿ 1 ಕೋ.ರೂ. ವೆಚ್ಚದಲ್ಲಿ ಆಮ್ಲಜನಕ ಘಟಕ ನಿರ್ಮಿಸಲಾಗಿದ್ದು ಆಮ್ಲಜನಕದ ಕೊರತೆ ಉಂಟಾಗದು. 32 ಮಂದಿ ಸ್ಟಾಫ್ ನರ್ಸ್‌ಗಳಿದ್ದಾರೆ. 12 ಮಂದಿ ವೈದ್ಯರಿದ್ದಾರೆ. ಇತರ ಸಿಬಂದಿ ಸೇರಿದಂತೆ ಪೂರ್ಣ ಕಾಲಿಕ-ಹೊರಗುತ್ತಿಗೆ ವಿಭಾಗದಲ್ಲಿ ಒಟ್ಟು 100ಕ್ಕೂ ಅಧಿಕ ಸಿಬಂದಿ ಇದ್ದಾರೆ.

ಪ್ರಸ್ತುತ 100 ಬೆಡ್‌ಗಳ ಸೌಲಭ್ಯ ಇದ್ದು, 35 ಬೆಡ್‌ಗಳನ್ನು ಕೋವಿಡ್‌ ಚಿಕಿತ್ಸೆಗೆ ಮೀಸಲಿ ಡಲಾಗಿದೆ. 8 ಮಂದಿ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದಾರೆ.

65 ಬೆಡ್‌ಗಳನ್ನು ಇತರ ರೋಗಗಳಿಗೆ ಮೀಸಲಿಡಲಾಗಿದೆ. 26 ಆಕ್ಸಿಜನ್‌ ಬೆಡ್‌ ಸೌಲಭ್ಯಗಳಿವೆ.

ಒಟ್ಟು  ಜನಸಂಖ್ಯೆ          1.85 ಲಕ್ಷ

ಒಟ್ಟು  ಬೆಡ್‌ಗಳು             100

ಕೋವಿಡ್‌ಗೆ ಮೀಸಲು    35

ಖಾಲಿ ಬೆಡ್‌ಗಳು                52

ಒಟ್ಟು  ವೈದ್ಯರು               12

ಸುಳ್ಯ: ಸದ್ಯ ನಿರಾತಂಕ :

ಸುಳ್ಯ: ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಸದ್ಯಕ್ಕೇನೂ ಸಮಸ್ಯೆ ಬಾಧಿಸದಷ್ಟು ಸೌಕರ್ಯಗಳು ಇದ್ದು ಕೋವಿಡ್‌ ಮೂರನೇ ಅಲೆ ಎದುರಿಸಲು ಸಜ್ಜಾಗಿದೆ. 100 ಬೆಡ್‌ ಸಾಮರ್ಥ್ಯದ ಆಸ್ಪತ್ರೆ ಇದಾಗಿದ್ದು 37 ಬೆಡ್‌ ಅನ್ನು ಕೋವಿಡ್‌ ಚಿಕಿತ್ಸೆಗೆ ಮೀಸಲಿಡಲಾಗಿದೆ. 3 ಐಸಿಯು ಬೆಡ್‌ಗಳಿವೆ. 80 ಆಕ್ಸಿಜನ್‌ ಬೆಡ್‌ಗಳಿವೆ. ಈ ತನಕ ಕೋವಿಡ್‌ ಚಿಕಿತ್ಸೆಗೆ ಒಳರೋಗಿ ವಿಭಾಗದಲ್ಲಿ ಯಾವುದೇ ದಾಖಲಾತಿ ಆಗಿಲ್ಲ.

14 ವೈದ್ಯರ ಹುದ್ದೆ ಮಂಜೂರಾತಿ ಇದ್ದು 12 ಹುದ್ದೆ ಭರ್ತಿಯಾಗಿದೆ. 2 ಹುದ್ದೆಗಳು ಖಾಲಿ ಇವೆ. 28 ನರ್ಸ್‌ಗಳಿದ್ದು 4 ಹುದ್ದೆ ಖಾಲಿ ಇದೆ. ಒಟ್ಟು 33 ಪೂರ್ಣಕಾಲಿಕ ಹಾಗೂ 46 ಹೊರ ಗುತ್ತಿಗೆ ಆಧಾರಿತ ಸಿಬಂದಿ ಇದ್ದು ಒಟ್ಟು 79 ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಹೆಚ್ಚುವರಿ ಡಯಾಲಿಸಿಸ್‌  ಯಂತ್ರದ ಆವಶ್ಯಕತೆ ಇದ್ದು

ಪೂರೈಸುವಂತೆ ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿದ್ದ ಜಿಲ್ಲಾಧಿ ಕಾರಿಯವರಿಗೆ ಮನವಿ ಸಲ್ಲಿಸಲಾಗಿದೆ.

ಒಟ್ಟು  ಜನಸಂಖ್ಯೆ          1.42 ಲಕ್ಷ

ಒಟ್ಟು  ಬೆಡ್‌ಗಳು             100

ಕೋವಿಡ್‌ಗೆ ಮೀಸಲು    37

ಖಾಲಿ ಬೆಡ್‌ಗಳು                60

ಒಟ್ಟು  ವೈದ್ಯರು               12

ಬೆಳ್ತಂಗಡಿ ತಾಲೂಕು ಆಸ್ಪತ್ರೆ ತಯಾರು :

ಬೆಳ್ತಂಗಡಿ: ಜಿಲ್ಲಾಡಳಿತದ ಸೂಚನೆಯಂತೆ ತಾಲೂಕು ಆಸ್ಪತ್ರೆಯನ್ನು ಸನ್ನದ್ಧಗೊಳಿಸಿದ್ದರೂ ಕೆಲವು ನ್ಯೂನತೆಗಳಿದ್ದು ಅವುಗಳನ್ನು ಸರಿಪಡಿಸಬೇಕಿದೆ.

ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ಸಂಬಂಧಿಸಿದಂತೆ ಈಗಾಗಲೇ 7 ಕೋವಿಡ್‌ ಸಕ್ರಿಯ ಪ್ರಕರಣಗಳಿವೆ. ಇರುವ 100 ಬೆಡ್‌ಗಳ ಪೈಕಿ 50 ಬೆಡ್‌ಗಳಿಗೆ ನೇರ ಆಕ್ಸಿಜನ್‌ ಸಂಪರ್ಕ ಕಲ್ಪಿಸಲಾ

ಗಿದೆ. 20 ಬೆಡ್‌ಗಳನ್ನು ಕೋವಿಡ್‌ಗಾಗಿ ಮೀಸಲಿಡಲಾಗಿದೆ. 390 ಎಲ…ಪಿಎಂ ಆಕ್ಸಿಜನ್‌ ಉತ್ಪಾದನ ಘಟಕ ಸ್ಥಾಪಿಸಲಾಗಿದೆ. ಇದಕ್ಕೆ  ಈಗಿರುವ 34 ಕೆ.ವಿ.  ಜನರೇಟರ್‌ ಸಾಲುತ್ತಿಲ್ಲ. ಆದ್ದರಿಂದ 24

ತಾಸು ವಿದ್ಯುತ್‌ ಪೂರೈಕೆಯಾಗ ಬೇಕು. ಆಕ್ಸಿಜನ್‌ ಘಟಕ ಇದ್ದರೂ ಫಿಲ್ಲಿಂಗ್‌ ಪ್ಲಾಂಟ್‌ ಇಲ್ಲದ್ದರಿಂದ ಮಂಗಳೂರಿನಿಂದ ಮರುಪೂರಣ ಮಾಡಿ ಸಿಲಿಂಡರ್‌ ತರಲಾಗುತ್ತಿದೆ. 9 ಖಾಯಂ ವೈದ್ಯರಿದ್ದು, 18 ಖಾಯಂ ಶುಶ್ರೂಷಕಿಯರು, 4 ಎನ್‌ಆರ್‌ಎಚ್‌ಎಂ, ಕೋವಿಡ್‌ಗಾಗಿ ಜಿಲ್ಲಾಡಳಿತವು ಪ್ರತ್ಯೇಕ 3 ಮಂದಿಯನ್ನು ನೇಮಿಸಿದೆ. ಡಿ  ಗ್ರೂಪ್‌ನಡಿ ಒಬ್ಬರೇ ಖಾಯಂ, ಉಳಿದ 15 ಮಂದಿ ಹೊರಗುತ್ತಿಗೆಯಡಿ ಕರ್ತವ್ಯ ನಿರ್ವಹಿಸಿದರೆ, ಕೋವಿಡ್‌ಗೆ ಇಬ್ಬರನ್ನು ಪ್ರತ್ಯೇಕವಾಗಿ ನಿಯೋಜಿಸ ಲಾಗಿದೆ. 6 ವೆಂಟಿಲೇಟರ್‌ಗಳಿದ್ದು 8 ಡಯಾಲಿಸಿಸ್‌ ಯಂತ್ರಗಳಿವೆ. ಕೇವಲ ಒಂದು ಆ್ಯಂಬುಲೆನ್ಸ್ ಇದೆ.

ಒಟ್ಟು  ಜನಸಂಖ್ಯೆ          1.66 ಲಕ್ಷ

ಒಟ್ಟು  ಬೆಡ್‌ಗಳು             100

ಕೋವಿಡ್‌ಗೆ ಮೀಸಲು    20

ಖಾಲಿ ಬೆಡ್‌ಗಳು                85

ಒಟ್ಟು  ವೈದ್ಯರು               09

ಕಾರ್ಕಳ ಆಸ್ಪತ್ರೆ: ಪರಿಸ್ಥಿತಿ ಎದುರಿಸಲು ಸರ್ವ ವ್ಯವಸ್ಥೆ  :

ಕಾರ್ಕಳ: ಒಮಿಕ್ರಾನ್‌ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾರ್ಕಳ ತಾಲೂಕು ಆಸ್ಪತ್ರೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೋವಿಡ್‌ ಅಲೆಯಿಂದ ಪಾರಾಗಲು ಸದ್ಯದ ಪರಿಸ್ಥಿತಿಯಲ್ಲಿ ತುರ್ತು ಅಗತ್ಯಕ್ಕೆ ಬೇಕಾಗುವಷ್ಟು ಆಕ್ಸಿಜನ್‌, ಬೆಡ್‌ ಮೊದಲಾದ ವ್ಯವಸ್ಥೆಗಳನ್ನು ಹೊಂದಲಾಗಿದೆ.

ತಾಲೂಕು ಆಸ್ಪತ್ರೆ ವ್ಯಾಪ್ತಿ ಜನಸಂಖ್ಯೆ 26,250 ಆಗಿದೆ. 9 ಮಂದಿ ಅಲೋಪತಿ ಹಾಗೂ ಎರಡು ಮಂದಿ ಆಯುಷ್‌ ವೈದ್ಯರಿದ್ದಾರೆ, ದಾದಿಯರು 35 ಮಂದಿ ಇದ್ದು ಇಬ್ಬರು ಆರೋಗ್ಯ ಕಾರ್ಯಕರ್ತೆಯರಿದ್ದಾರೆ. ಒಟ್ಟು 170 ಬೆಡ್‌ಗಳನ್ನು ಆಸ್ಪತ್ರೆ ಹೊಂದಿದ್ದು, ಅದರಲ್ಲಿ 70 ಕೋವಿಡ್‌ ಬೆಡ್‌ಗಳಿವೆ. ಕೋವಿಡ್‌ ಐಸಿಯು ಬೆಡ್‌ನ‌ಲ್ಲಿ 12 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 300 ಎಲ್‌ಪಿಎಂ ಆಕ್ಸಿಜನ್‌ ಘಟಕ 1, ಪಿಎಂ ಕೇರ್ನ 500 ಎಲ್‌ಪಿಎಂ ಆಕ್ಸಿಜನ್‌ ಘಟಕ, 83 ಜಂಬೋ ದೊಡ್ಡ ಸಿಲಿಂಡರ್‌ಗಳಿವೆ. ತಾಲೂಕು ಆಸ್ಪತ್ರೆಯಲ್ಲಿ 25 ಐಸಿಯು ಇದ್ದು ಅದರಲ್ಲಿ ಕೋವಿಡ್‌ಗೆ 20 ಹಾಗೂ ಜನರಲ್‌ಗೆ 5 ಎಂದು ಮೀಸಲಿರಿಸಲಾಗಿದೆ. 10 ಮಕ್ಕಳ ಐಸಿಯು ಬೆಡ್‌ ಸಿದ್ಧಪಡಿಸಲಾಗಿದ್ದು, ಕೆಲ ಉಪಕರಣಗಳ ಜೋಡಣೆಗೆ ಬಾಕಿ ಇದೆ. ಜನವರಿ ಅಂತ್ಯದ ವೇಳೆಗೆ ಅದು ಸಿದ್ಧವಾಗಲಿದೆ.

ಒಟ್ಟು  ಜನಸಂಖ್ಯೆ          26,250

ಒಟ್ಟು  ಬೆಡ್‌ಗಳು             170

ಕೋವಿಡ್‌ಗೆ ಮೀಸಲು    70

ಖಾಲಿ ಬೆಡ್‌ಗಳು                65

ಕುಂದಾಪುರ: ವ್ಯವಸ್ಥೆ ಸನ್ನದ್ಧ  :

ಕುಂದಾಪುರ ಸರಕಾರಿ ಉಪವಿಭಾಗ ಆಸ್ಪತ್ರೆ 200 ಹಾಸಿಗೆಗಳ ಸಾಮರ್ಥ್ಯ ಹೊಂದಿದೆ. ತಾಯಿಮಕ್ಕಳ ಆಸ್ಪತ್ರೆ 100 ಹಾಸಿಗೆ, ಜನರಲ್‌ ಆಸ್ಪತ್ರೆಯಲ್ಲಿ 100 ಹಾಸಿಗೆಗಳಿವೆ. ಕಳೆದ ಬಾರಿ ಕೋವಿಡ್‌ ಚಿಕಿತ್ಸೆಯಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಲ್ಪಟ್ಟಿತ್ತು. ಸ್ತ್ರೀರೋಗ, ಅರಿವಳಿಕೆ ಹಾಗೂ ಮಕ್ಕಳ ತಜ್ಞರು ತಲಾ ಇಬ್ಬರಂತೆ ಇದ್ದಾರೆ. ಸಾಮಾನ್ಯ ತಜ್ಞ, ಮೂಳೆ ಮತ್ತು ಎಲುಬು, ಕಣ್ಣು, ಕಿವಿ  ಮೂಗು ಗಂಟಲು ಚಿಕಿತ್ಸೆಯ  ವೈದ್ಯಕೀಯ ತಜ್ಞರು ಲಭ್ಯರಿ ದ್ದಾರೆ. ಚರ್ಮರೋಗ ತಜ್ಞರ ಹುದ್ದೆಯೇ ಇಲ್ಲ. ಸ್ಕ್ಯಾನಿಂಗ್‌ಗೆ 2 ರೇಡಿಯೋಲಜಿಸ್ಟ್‌ ಹುದ್ದೆ ಇದ್ದರೂ ಖಾಲಿ ಇದೆ. ತುರ್ತು ಚಿಕಿತ್ಸಾ ವಿಭಾಗದ ವೈದ್ಯರ 4 ಹುದ್ದೆಯಲ್ಲಿ ಒಬ್ಬರಿ ದ್ದಾರೆ. ಎಂಬಿಬಿಎಸ್‌ ಆದ ಕೂಡಲೇ ಮಾಡಬೇಕಾದ ಕಡ್ಡಾಯ ಸೇವೆ ನೆಲೆಯಲ್ಲಿ 6 ವೈದ್ಯರಿದ್ದಾರೆ. 44 ಜನ ದಾದಿಯರು ಇದ್ದಾರೆ. ಕೋವಿಡ್‌ಗೆ ಪ್ರತ್ಯೇಕ 12  ದಾದಿಯರು ಇದ್ದು 9 ರೋಗಿ ಗಳು ಪ್ರಸ್ತುತ ದಾಖಲಾಗಿದ್ದಾರೆ. ವೈದ್ಯರ ಕೊರತೆ ಇಲ್ಲ.  ಕೋವಿಡ್‌ಗೆಂದೇ ಸದ್ಯ ಆಸ್ಪತ್ರೆ ಮೀಸಲಿಟ್ಟಿಲ್ಲ. ಹಳೆ ಆದರ್ಶ ಹಾಗೂ ಹೊಸ ಆಸ್ಪತ್ರೆ ಕಟ್ಟಡ ಕೋವಿಡ್‌ ಚಿಕಿತ್ಸೆಗೆ ದೊರೆಯಲಿದೆ. ಹಳೆಯ ತಾಲೂಕು ವ್ಯಾಪ್ತಿಯಲ್ಲಿ ಬೈಂದೂರಿನಲ್ಲಿ ಸಮುದಾಯ ಆಸ್ಪತ್ರೆ ಇದ್ದು, ಇಲ್ಲಿ 30 ಬೆಡ್‌ಗಳ ವ್ಯವಸ್ಥೆ ಇದೆ.

ಒಟ್ಟು  ಜನಸಂಖ್ಯೆ          4.63 ಲಕ್ಷ

ಒಟ್ಟು  ಬೆಡ್‌ಗಳು             200

ಕೋವಿಡ್‌ಗೆ ಪ್ರತ್ಯೇಕ ವ್ಯವಸ್ಥೆ ಇದೆ

ಖಾಲಿ ಬೆಡ್‌ಗಳು                156

ಒಟ್ಟು  ವೈದ್ಯರು               17

Advertisement

Udayavani is now on Telegram. Click here to join our channel and stay updated with the latest news.

Next