Advertisement

“ಆಸ್ಪತ್ರೆಗಳು ಗುಣಮಟ್ಟ ಕಾಯ್ದುಕೊಳ್ಳುವುದು ಅಗತ್ಯ’

09:15 PM Sep 25, 2019 | sudhir |

ಕುಂದಾಪುರ: ಆಸ್ಪತ್ರೆಗಳು ಭಾರತ ಸರಕಾರದ ಸ್ವಾಯತ್ತ ಸಂಸ್ಥೆ “ಎನ್‌. ಎ.ಬಿ.ಎಚ್‌’ ಮಾನ್ಯತೆ ಪಡೆದುಕೊಳ್ಳುವುದು ಅಷ್ಟು ಸುಲಭವಲ್ಲ. ಕಠಿನ ಪರಿಶ್ರಮದೊಂದಿಗೆ ನಿರೀಕ್ಷಿತ ನಿಯಮಾವಳಿಗಳನ್ನು ಪಾಲಿಸುತ್ತಾ ಉತ್ತಮ ಗುಣಮಟ್ಟವನ್ನು ಎಲ್ಲ ವಿಭಾಗಗಳಲ್ಲೂ ಕಾಯ್ದುಕೊಳ್ಳಬೇಕಾಗುತ್ತದೆ ಎಂದು ವೈದ್ಯ, ಬೆಂಗಳೂರಿನ ನಾರಾಯಣ ನೇತ್ರಾಲಯದ ಸ್ಥಾಪಕ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಡಾ| ಕೆ. ಭುಜಂಗ ಶೆಟ್ಟಿ ಹೇಳಿದರು.

Advertisement

ಕೋಟೇಶ್ವರದ ಅಂಕದಕಟ್ಟೆಯ ಸರ್ಜನ್‌ ಆಸ್ಪತ್ರೆಗೆ “ನ್ಯಾಶನಲ್‌ ಅಕ್ರಿಡಿಟೇಶನ್‌ ಬೋರ್ಡ್‌ ಫಾರ್‌ ಹಾಸ್ಪಿಟಲ್ಸ್‌ ಆ್ಯಂಡ್‌ ಹೆಲ್ತ್‌ ಕೇರ್‌’ ನಿಂದ ರಾಷ್ಟ್ರೀಯ ಮಾನ್ಯತೆ ಪಡೆದ ಅಂಗವಾಗಿ ಕೋಟೇಶ್ವರದ ಸಹನಾ ಕನ್‌ವೆನ್ಶನ್‌ ಸೆಂಟರ್‌ನ ಸಭಾಂಗಣದಲ್ಲಿ ಏರ್ಪಡಿಸಿದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸದ್ಯ ಸುಮಾರು 60,000 ಆಸ್ಪತ್ರೆಗಳಲ್ಲಿ 700ರಷ್ಟು ಆಸ್ಪತ್ರೆಗಳು ಮಾತ್ರ ಈ ಮಟ್ಟ ಕಾಯ್ದುಕೊಳ್ಳಲು ಶಕ್ತವಾಗಿವೆ. ಕೋಟೇಶ್ವರದ ಅಂಕದ ಕಟ್ಟೆಯ ಗ್ರಾಮೀಣ ಪ್ರದೇಶದಲ್ಲಿರುವ ಆಸ್ಪತ್ರೆ “ಎನ್‌. ಎ.ಬಿ.ಎಚ್‌.’ ಮಾನ್ಯತೆ ಪಡೆದಿರುವುದು ನಿಜವಾಗಿಯೂ ಶ್ರೇಷ್ಠ ಸಾಧನೆ ಂದು ಅವರು ಹೇಳಿ ದ ರು.
ಬೆಂಗಳೂರು ಆರ್‌.ವಿ. ಮೆಟ್ರೊ ಪೊಲೀಸ್‌ನ ಎಂ.ಡಿ. ಡಾ| ರವಿಕುಮಾರ್‌ ಎಚ್‌.ಎನ್‌, ಕುಂದಾಪುರ ಐ.ಎಂ.ಎ. ಘಟಕದ ಅಧ್ಯಕ್ಷ ಡಾ| ಶೇಖರ್‌ ಉಪಸ್ಥಿತರಿದ್ದರು.

ಸ್ವಾತಂತ್ರÂ ಹೋರಾಟಗಾರ, 98ರ ಹರೆಯದ ಹುಲಿಕಲ್‌ ನಾಗಭೂಷಣ್‌ ರಾವ್‌ ಅವರನ್ನು ಸಮ್ಮಾ¾ನಿಸಿ ಗೌರವಿಸಲಾಯಿತು.

ಲೇಖಕ ಪ್ರಕಾಶಕ, ಸಮಾಜ ಶಾಸ್ತ್ರ ತಜ್ಞ ಸಿ.ಎನ್‌. ಶಂಕರ ರಾವ್‌, ಡಾ| ಎಚ್‌. ರಾಮಮೋಹನ್‌, ಡಾ| ಎಂ. ಆರ್‌.ಅಡಿಗ ಅತಿಥಿಗಳನ್ನು ಪರಿಚಯಿಸಿದರು.
ಸರ್ಜನ್‌ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ತಜ್ಞ ಡಾ| ಎಚ್‌.ಎ.ವಿಶ್ವೇಶ್ವರ ಸ್ವಾಗತಿಸಿದರು. ಅರಿವಳಿಕೆ ತಜ್ಞೆ ಡಾ| ವನಿತಾಲಕ್ಷ್ಮೀ ಎನ್‌. ಎ. ಬಿ. ಹೆಚ್‌. ಮಾನ್ಯತೆ ಪಡೆದ ಕುರಿತು ವಿವರಿಸಿದರು. ಡಾ| ಅದಿಶ್ರೀ ರಾವ್‌ ಅತಿಥಿಗಳನ್ನು ಗೌರವಿಸಿದರು. ಡಾ| ವಿಲಾಸ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next