Advertisement

ಕಚ್ಚಿದ ಹೆಬ್ಟಾವು ಹಿಡಿದು ಆಸ್ಪತ್ರೆಗೆ

12:52 PM Jun 23, 2019 | Suhan S |

ಭಟ್ಕಳ: ತನಗೆ ಕಚ್ಚಿದ ಹೆಬ್ಟಾವಿನೊಂದಿಗೆ ವ್ಯಕ್ತಿಯೊಬ್ಬ ಆಸ್ಪತ್ರೆಗೆ ಬಂದು ಅಲ್ಲಿನ ಜನ ಹಾಗೂ ಸಿಬ್ಬಂದಿ ಬೆಚ್ಚಿ ಬೀಳುವಂತೆ ಮಾಡಿದ್ದಾನೆ.

Advertisement

ನಗರದ ಚೌಥನಿ ಹೊಳೆ ತುಂಬಿ ಹರಿಯುತ್ತಿದ್ದು ಹೊಳೆಯ ನೀರಿನಲ್ಲಿ ಹೆಬ್ಟಾವೊಂದು ತೇಲಿ ಬರುತ್ತಿರುವುದನ್ನು ಕೆಲವು ಯುವಕರು ನೋಡಿದ್ದಾರೆ. ಊರಿನಲ್ಲಿ ಬಂದರೆ ಅಪಾಯವಿದೆ ಎಂದು ಹೆಬ್ಟಾವನ್ನು ಹಿಡಿದು ದೂರ ಬಿಡಲು ಯೋಚಿಸಿ ನೀರಿಗಿಳಿದಾಗ ಪುರವರ್ಗದ ವೆಂಕಟರಮಣ ನಾಯ್ಕ ಎನ್ನುವವರ ಕೈಗೆ ಹೆಬ್ಟಾವು ಕಚ್ಚಿದೆ. ಆದರೂ ವಿಚಲಿತರಾಗದ ಅವರು ಹೆಬ್ಟಾವನ್ನು ಹಿಡಿದುಕೊಂಡೇ ಆಸ್ಪತ್ರೆಗೆ ಬಂದಿದ್ದಾರೆ. ಹೆಬ್ಟಾವಿನೊಂದಿಗೆ ಬಂದಿದ್ದ ಅವರನ್ನು ಕಂಡು ಒಮ್ಮೆ ಜನರು ಹಾಗೂ ಸಿಬ್ಬಂದಿ ಹೌಹಾರಿದರೂ ನಂತರ ವಿಷಯ ತಿಳಿದು ನಿಟ್ಟುಸಿರು ಬಿಟ್ಟರು. ಆಸ್ಪತ್ರೆ ವೈದ್ಯರು ಆತನಿಗೆ ಚಿಕಿತ್ಸೆ ನೀಡಿ ಕಳುಹಿಸಿದರು. ನಂತರ ವಿಷಯವನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿ ಹಾವನ್ನು ಕಾಡಿಗೆ ಬಿಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next