ಬೆಂಗಳೂರು: ಸರ್ಕಾರದ ಆದೇಶದಂತೆ ಸೋಂಕಿತರಚಿಕಿತ್ಸೆಗಾಗಿ ಶೇ.50 ಹಾಸಿಗೆಗಳನ್ನು ಮೀಸಲಿಡದಆಸ್ಪತ್ರೆ ಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ಗುಪ್ತಾ ಎಚ್ಚರಿಕೆ ನೀಡಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ಹಾಸಿಗೆ ಮೀಸಲಿಡುವ ಸಂಬಂಧ ಭಾನುವಾರ ಐದು ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾತನಾಡಿ, ಆಸ್ಪತ್ರೆಗಳು 24 ಗಂಟೆಯೊಳಗೆ ಶೇ.50 ಬೆಡ್‌ಗಳನ್ನು ಸೋಂಕಿತರಿಗೆ ಮೀಸಲಿರಿಸದಿದ್ದರೆ ಮುಂದಿನದಿನಗಳಲ್ಲಿ ಆಸ್ಪತ್ರೆಗಳ ಮೇಲೆ ಶಿಸ್ತು ಕ್ರಮಕೈಗೊಳ್ಳಬೇಕುಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಐದು ಆಸ್ಪತ್ರೆಗೆ ನೋಟೀಸ್: ಭಾನುವಾರ ಸಾಂಕೇತಿಕ ವಾಗಿ ಐದು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದು, ಹಾಸಿಗೆಮೀಸಲಿಡದ ಕಾರಣ ನೋಟಿಸ್ ನೀಡಲಾಗಿದೆ.ಒಂದು ವೇಳೆ ಹಾಸಿಗೆ ಮೀಸಲಿಡದಿದ್ದರೆಕೆಪಿಎಂಇ ಕಾಯ್ದೆ ಪ್ರಕಾರ ಕ್ರಮಕೈಗೊಳ್ಳಲಾಗುತ್ತದೆ ಎಂದರು.ವಿಕ್ರಂ ಆಸ್ಪತ್ರೆಯಲ್ಲಿ 39ಹಾಸಿಗೆಗಳು ಹಾಗೂ ಪೋರ್ಟಿಸ್‌ಆಸ್ಪತ್ರೆಯಲ್ಲಿ 30 ಹಾಸಿಗೆಗಳು ಮೀಸಲಿಡ ಲಾಗಿದೆ. ಕೋವಿಡ್ ಸೋಂಕಿತರಚಿಕಿತ್ಸೆಗಾಗಿ ಮೀಸಲಿಟ್ಟಿರುವ ಸಂಖ್ಯೆಯಸೂಚನಾ ಫಲಕವನ್ನು ಪ್ರವೇಶದ್ವಾರದ ಮುಂದೆಅಳವಡಿಸಬೇಕಿತ್ತು. ಆದರೆ, ಸರಿಯಾದ ಮಾಹಿತಿನೀಡದ ಹಾಗೂ ಸರ್ಕಾರದ ಆದೇಶವನ್ನು ಪಾಲಿಸದಹಿನ್ನೆಲೆಯಲ್ಲಿ ಎರಡು ಆಸ್ಪತ್ರೆಗೆ ನೋಟಿಸ್‌ನೀಡಲಾಗಿದೆ ಎಂದರು.
ಇದೇ ವೇಳೆ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆಭೇಟಿ ನೀಡಿದ ಆಯುಕ್ತರು, ಸಿಬ್ಬಂದಿಯಿಂದಮಾಹಿತಿ ಪಡೆದರು. ಸರ್ಕಾರದ ಆದೇಶದಂತೆ 30ಹಾಸಿಗೆ ಮೀಸಲಿಡಬೇಕು. ಇಲ್ಲಿ 15 ಹಾಸಿಗೆ ಮಾತ್ರಮೀಸಲಿಡಲಾಗಿದೆ. ಮುಂದಿನ 24 ಗಂಟೆಯೊಳಗೆಹಾಸಿಗೆ ಮೀಸಲಿಡಬೇಕು ಎಂದು ತಿಳಿಸಿದರು.
ಒಪಿಸಿ ಮುಚ್ಚುವುದಾಗಿ ಎಚ್ಚರಿಕೆ: ಬಳಿಕ, ಆಸ್ಟರ್ ಸಿ.ಎಂ.ಐ ಮತ್ತು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಭೇಟಿ ನೀಡಿದ್ದು,ಹಾಸಿಗೆ ಮೀಸಲಿಡದ ಹಿನ್ನೆಲೆ ಸ್ಥಳದಲ್ಲೇ ನೋಟಿಸ್‌ಜಾರಿ ಗೊಳಿಸಿದರು. ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ 124ಹಾಸಿಗೆಗಳ ಪೈಕಿ 63 ಹಾಸಿಗೆಗಳನ್ನು ಮಾತ್ರಮೀಸಲಿಡಲಾಗಿತ್ತು. ಹೀಗಾಗಿ, 24 ಗಂಟೆಯೊಳಗಾಗಿಉತ್ತರ ನೀಡುಬೇಕು. ಇಲ್ಲದಿದ್ದರೆ, ಒಪಿಸಿ ಮುಚ್ಚುವುದಾಗಿ ಎರಡೂ ಆಸ್ಪತ್ರೆಗೆ ಎಚ್ಚರಿಕೆ ನೀಡಿದರು.
ನೋಟಿಸ್ ನೀಡಿದರೂ ಬೆಡ್ ಮೀಸಲಿಟ್ಟಿಲ್ಲ:ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ಸರ್ಕಾರದ ಆದೇಶದಪ್ರಕಾರ 112 ಹಾಸಿಗೆಗಳನ್ನು ಮೀಸಲಿಡಬೇಕಿದೆ.ಆದರೆ ಶೇ.20ರಂತೆ ಸಾಮಾನ್ಯ, ಐಸಿಯು, ವೆಂಟಿಲೇಟರ್ ಸೇರಿ 45 ಹಾಸಿಗೆಗಳನ್ನು ಮಾತ್ರ ಮೀಸಲಿಡಲಾಗಿದೆ. ಸೋಂಕಿತರಿಗಾಗಿ ಶೇ.50 ಹಾಸಿಗೆ ಮೀಸಲಿಡ ಬೇಕೆಂದು ಈಗಾಗಲೇ ಒಮ್ಮೆ ನೋಟೀಸ್‌ನೀಡಲಾಗಿತ್ತು. ಆದರೂ ಕ್ರಮ ವಹಿಸಿಲ್ಲ. ಹೀಗಾಗಿ,ಆಸ್ಪತ್ರೆಗೆ ನೋಟಿಸ್ ನೀಡಲಾಗಿದೆ ಎಂದರು.ಈ ವೇಳೆವಲಯ ಆಯುಕ್ತ ಡಿ.ರಂದೀಪ್, ಮುಖ್ಯ ಆರೋಗ್ಯಾಧಿಕಾರಿ ಡಾ.ವಿಜೇಂದ್ರ ಇತರರಿದ್ದರು.