Advertisement
ತಾಲೂಕಿನ ಗೌರಿಪುರ ಗ್ರಾಮದ ಬೃಂದಾ ಶರಣಪ್ಪ ಎಂಬ ಮಹಿಳೆಪತಿಯ ಮನೆಯಿರುವ ಯಲಬುರ್ಗಾತಾಲೂಕಿನ ಗೆದಗೇರಿ ಜಾತ್ರೆಗೆಹೋಗಿದ್ದ ಸಂದರ್ಭದಲ್ಲಿ ಹೆರಿಗೆನೋವು ಕಾಣಿಸಿಕೊಂಡಿತು. ತುರ್ತು ಚಿಕಿತ್ಸಾ ವಾಹನ ಸಿಗದ ಕಾರಣಮಂಗಳವಾರ ಬೆಳಗಿನ ಜಾವ ಆಶಾಕಾರ್ಯಕರ್ತೆಯೊಂದಿಗೆ ಖಾಸಗಿವಾಹನ ಮೂಲಕ ಕನಕಗಿರಿ ಆಸ್ಪತ್ರೆಗೆಆಗಮಿಸಿದ್ದಾರೆ. ಕರ್ತವ್ಯದಲ್ಲಿದ್ದ ಸಿಬ್ಬಂದಿಗೆಹೆರಿಗೆ ಮಾಡಿಸುವಂತೆ ಕೇಳಿಕೊಂಡರೂಸಿಬ್ಬಂದಿ ಮಾತ್ರ ಆಸ್ಪತ್ರೆ ಬಾಗಿಲು ತೆರೆಯದೇ, ಯಾವುದೇ ತಪಾಸಣೆ ನಡಸದೆ ಇಲ್ಲಿ ಹೆರಿಗೆ ಮಾಡಿಸೋಕೆ ಆಗಲ್ಲ ಗಂಗಾವತಿಗೆ ಕರೆದುಕೊಂಡು ಹೋಗಿ ಎಂದು ಹೇಳಿದರು. ಆಗ ಗರ್ಭಿಣಿಯು ಹೆರಿಗೆ ನೋವು ತಾಳದೆ ನೋವಿನಿಂದ ಬಳಲುತ್ತಿರುವುದನ್ನು ಕಂಡು ಅಕ್ಕಪಕ್ಕದ ಮಹಿಳೆಯರು ಧಾವಿಸಿ ಸಾಮಾನ್ಯ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾದರು.
Related Articles
Advertisement
ವೈದ್ಯ, ಸಿಬ್ಬಂದಿ ಅಮಾನತು :
ಕೊಪ್ಪಳ: ಕನಕಗಿರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗೇಟ್‌ನಲ್ಲೇ ಮಹಿಳೆಗೆ ಹೆರಿಗೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿರುವ ವೈದ್ಯ ಹಾಗೂ ಗುತ್ತಿಗೆ ಸಿಬ್ಬಂದಿಯನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಹಾಗೂ ಜಿಪಂ ಸಿಇಒ ರಘುನಂದನ್ ಮೂರ್ತಿ ಅವರು ಆದೇಶ ಮಾಡಿದ್ದಾರೆ.
ಜಿಲ್ಲೆಯ ಕನಕಗಿರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಬೆಳಗಿನ ಜಾವ 5:45ಕ್ಕೆ ಗೌರಿಪುರ ಗ್ರಾಮದ ಬೃಂದಾ ಶರಣಪ್ಪ ಎಂಬ ಮಹಿಳೆ ಹೆರಿಗಾಗಿ ಆಗಮಿಸಿದ್ದು, ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದ್ದ ಡಾ| ನಾಗರಾಜ ಪಾಟೀಲ
ಆಸ್ಪತ್ರೆಯಲ್ಲಿರಲಿಲ್ಲ. ಕಾರ್ಯನಿರತ ಶುಶ್ರೂಷಕ ಬಸನಗೌಡವಿಶ್ರಾಂತಿ ಕೊಠಡಿಯಲ್ಲಿ ಮಲಗಿದ್ದರು. ಪೋಷಕರು ಶುಶ್ರೂಷಕರನ್ನು ಕರೆದು ಹೆರಿಗೆಗಾಗಿ ಬಂದಿರುವುದಾಗಿ ತಿಳಿಸಿದರೂ ಯಾವುದೇ ರೀತಿಯ ಚಿಕಿತ್ಸೆ ನೀಡಿಲ್ಲ. ಗಂಡಾಂತರ ಹೆರಿಗೆಯಾಗಿದ್ದರೂ ಆಂಬ್ಯುಲೆನ್ಸ್ ಜೊತೆಗೆ ಮುಂದಿನ ಮೇಲ್ದರ್ಜೆಆಸ್ಪತ್ರೆಗೆ ರೆಫರ್ ಮಾಡದೇ ನಿರ್ಲಕ್ಷ ವಹಿಸಿದ್ದಾರೆ. ನಂತರ 7:05ಕ್ಕೆ ಆಸ್ಪತ್ರೆಯಮುಖ್ಯದ್ವಾರದ ಎದುರಿಗೆ ಮಹಿಳೆಗೆ ಹೆರಿಗೆಯಾಗಿದೆ. ಡಿಎಚ್‌ಒ ಕನಕಗಿರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ, ಕರ್ತವ್ಯಲೋಪ ಎಸಗಿದವರ ಮೇಲೆ ಶಿಸ್ತು ಕ್ರಮ ಜರುಗಿಸಲು ವರದಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ, ನಿರ್ಲಕ್ಷತೆ ಮತ್ತು ಕರ್ತವ್ಯಲೋಪ ಎಸಗಿದ ಡಾ| ನಾಗರಾಜ ಪಾಟೀಲ ಅವರನ್ನು ಅಮಾನತು ಮಾಡಿ ಆದೇಶ ಮಾಡಿದ್ದರೆ, ಗುತ್ತಿಗೆ ಸಿಬ್ಬಂದಿ ಬಸನಗೌಡ ಅವರನ್ನು ಜಿಪಂ ಸಿಇಒ ರಘುನಂದನ್ ಮೂರ್ತಿ ಅಮಾನತು ಮಾಡಿ ಆದೇಶ ಮಾಡಿದ್ದಾರೆ.