ಕಂಡು ಜಿಲ್ಲಾ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ಕ್ಷಣ ಕಾಲ ಅವಕ್ಕಾದ ಘಟನೆ ಶುಕ್ರವಾರ ಚಾಮರಾಜಪೇಟೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಿಢೀರ್ ಭೇಟಿ ಸಂದರ್ಭದಲ್ಲಿ ನಡೆಯಿತು.
Advertisement
ಜಿಪಂ ಅಧ್ಯಕ್ಷೆ ಮಂಜುಳಾ ಟಿ.ವಿ. ರಾಜು, ಉಪಾಧ್ಯಕ್ಷೆ ಗೀತಾ ಗಂಗಾನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶೈಲ ಬಸವರಾಜ್, ಬಿ.ಎಂ. ವಾಗೀಶಸ್ವಾಮಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ 1932ರಲ್ಲಿ ನಿರ್ಮಾಣವಾಗಿರುವ ಆಸ್ಪತ್ರೆ ಕಟ್ಟಡದ ಮೇಲೆ ಮತ್ತೂಂದು ಕಟ್ಟಡ ಕಟ್ಟುತ್ತಿರುವುದನ್ನು ಕಂಡು ಬೆಚ್ಚಿ ಬಿದ್ದರು.
ಪರವಾನಗಿ ಪಡೆಯಲಾಗಿದೆಯೇ ಎಂದು ಪ್ರಶ್ನಿಸಿದರು. ಸಂಬಂಧಿತ ಇಲಾಖೆಯಿಂದ ಎನ್‌ಒಸಿ (ನೋ ಅಬ್ಜೆಕ್ಷನ್ ಸರ್ಟಿ ಫಿಕೇಟ್) ಪಡೆದಿರುವುದಾಗಿ ಗುತ್ತಿಗೆದಾರ ತಿಳಿಸಿದರು. ವಾರ್ಡ್‌ಗಳಲ್ಲೂ ಯಾವುದೇ ರೀತಿಯ ಸ್ವಚ್ಛ ಇಲ್ಲ. ದುರ್ವಾಸನೆ ಹರಡಿದೆ. ಹೊರ ಮತ್ತು ಒಳ ರೋಗಿಗಳಿಗೆ ಶುದ್ಧ ಕುಡಿಯುವ ನೀರು ಕೂಡ ಇಲ್ಲ. ಹಾಸಿಗೆ, ಹೊದಿಕೆಗಳು ಗಲೀಜಾಗಿರುವುದನ್ನು ನೋಡಿದರೆ ಆಸ್ಪತ್ರೆ ಎನ್ನುವಂತಿಲ್ಲ ಎಂದು ಭೇಟಿ ನೀಡಿದ ತಂಡ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತು.
Related Articles
Advertisement
ಸ್ನಾನಕ್ಕೆ ಬಿಸಿ ನೀರು, ಶುದ್ಧ ಕುಡಿಯುವ ನೀರು ಇಲ್ಲ, ರೋಗಿಗಳ ವಸ್ತು ಇಟ್ಟುಕೊಳ್ಳಲು ಯಾವುದೇ ಟೇಬಲ್ ಇಲ್ಲ ಎಂಬ ಆರೋಪಗಳು ರೋಗಿಗಳು, ಸಂಬಂಧಿಕರಿಂದ ಕೇಳಿ ಬಂದವು. ನೂತನವಾಗಿ ನಿರ್ಮಿಸಲಾಗುತ್ತಿರುವ ನೂರು ಹಾಸಿಗೆಯುಳ್ಳ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲಿಸಿದ ತಂಡ, ಈ ಕಟ್ಟಡಕ್ಕೆ ಈಗಾಗಲೇ 50 ಹಾಸಿಗೆಗಳು ಮಂಜೂರಾಗಿವೆ. ಬೇಗೆನೆ ಪೂರ್ಣಗೊಳಿಸಬೇಕು ಎಂದು ಸೂಚಿಸಿತು.
ಅರವಳಿಕೆ ತಜ್ಞ ಡಾ| ಬಸವರಾಜ್ ಮಾತನಾಡಿ, ಆಸ್ಪತ್ರೆಯಲ್ಲಿನ ಸಣ್ಣಪುಟ್ಟ ಸಮಸ್ಯೆಗಳ ನಿವಾರಣೆಗೆ ಯಾವುದೇ ರೀತಿಯ ಅನುದಾನ ಇಲ್ಲದೆ ಸಮಸ್ಯೆ ಆಗುತ್ತಿದೆ. ರೋಗಿಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಆಡಳಿತಾತ್ಮಕಖರ್ಚಿಗಾಗಿ 2 ಲಕ್ಷ ನೀಡಲಾಗುತ್ತಿದೆ. ಸಣ್ಣಪುಟ್ಟ ಸಮಸ್ಯೆ ಬಗೆಹರಿಸಿಕೊಳ್ಳಲು, ನಿರ್ವಹಣೆಗಾಗಿ ಪ್ರತ್ಯೇಕ ಅನುದಾನದ ಅಗತ್ಯ ಇದೆ ಎಂದು ತಿಳಿಸಿದರು. ಪ್ರಭಾರ ಅಧೀಕ್ಷಕ ಡಾ| ನೀಲಕಂಠ ಇದ್ದರು.