Advertisement

10 ಕೋ. ರೂ. ವೆಚ್ಚದಲ್ಲಿ ನೂತನ ಆಸ್ಪತ್ರೆ

12:57 PM May 23, 2022 | Team Udayavani |

ಪುಂಜಾಲಕಟ್ಟೆ: ಪುಂಜಾಲ ಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದ್ದು, ಅಂದಾಜು 10 ಕೋಟಿ ರೂಪಾಯಿ ವೆಚ್ಚದಲ್ಲಿ 18 ಸಾವಿರ ಚದರಡಿ ವಿಸ್ತೀರ್ಣದಲ್ಲಿ ಆಸ್ಪತ್ರೆ ನಿರ್ಮಾಣ ವಾಗಲಿದೆ ಎಂದು ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಹೇಳಿದರು.

Advertisement

ಅವರು ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ನೀಲನಕಾಶೆಯನ್ನು ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರಕಾರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದು, ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವ ಕೆಲಸ ಮಾಡುತ್ತಿದೆ ಎಂದರು. ನೂತನ ಆಸ್ಪತ್ರೆಯಲ್ಲಿ 30 ಹಾಸಿಗೆಗಳು ಹಾಗೂ ಸರ್ವ ರೀತಿಯ ಸೌಲಭ್ಯಗಳಿರಲಿದೆ ಎಂದರು.

ಜಿ.ಪಂ. ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ, ಪಿಲಾತಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ, ಮಾಜಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಪ್ರಮುಖರಾದ ಹರೀಶ್‌ ಪ್ರಭು, ದಯಾನಂದ ನಾಯಕ್‌, ಯೋಗೇಂದ್ರ ಕುಮಂಗಿಲ, ಶಂಕರ ಶೆಟ್ಟಿ ಬೆದ್ರಮಾರ್‌, ಶುಭಕರ ಶೆಟ್ಟಿ, ಸುದರ್ಶನ ಬಜ, ರಮಾನಾಥ ರಾಯಿ, ಯಶೋಧರ ಕರ್ಬೆಟ್ಟು, ದಿನೇಶ್‌ ಶೆಟ್ಟಿ ದಂಬೆದಾರ್‌, ಚಿದಾ ನಂದ ರೈ ಕಕ್ಯ, ಪ್ರಶಾಂತ್‌ ಪುಂಜಾಲಕಟ್ಟೆ, ರಮೆಶ್‌ ಶೆಟ್ಟಿ ಮಜಲೋಡಿ, ತಾರಾನಾಥ, ಎಂಜಿನಿಯರ್‌ ರಾಜೇಶ್‌, ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ರಶ್ಮಿ ಎಸ್‌. ಆರ್‌, ತಹಶೀಲ್ದಾರ್‌ ಸ್ಮಿತಾರಾಮು, ಪಿ.ಡಿ.ಒ. ಯಮನಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next