Advertisement

ಹೋಬಳಿ ಮಟ್ಟದಲ್ಲಿ ಬಸ್‌ ಸಂಚಾರ ಆರಂಭ

06:34 PM May 30, 2020 | Naveen |

ಹೊಸಪೇಟೆ: ಲಾಕ್‌ಡೌನ್‌ ಸಡಲಿಕೆ ಹಿನ್ನೆಲೆಯಲ್ಲಿ ಜಿಲ್ಲಾ- ತಾಲ್ಲೂಕು ಕೇಂದ್ರಗಳಿಗೆ ಮಾತ್ರ ಬಸ್‌ ಸಂಚಾರ ಅರಂಭಿಸಿದ್ದ ಕರ್ನಾಟಕ ಈಶಾನ್ಯ ಸಾರಿಗೆ ಸಂಸ್ಥೆ ಹೊಸಪೇಟೆ ವಿಭಾಗ ಇದೀಗ ಹೋಬಳಿ ಮಟ್ಟದಲ್ಲಿ ಬಸ್‌ ಸಂಚಾರ ಆರಂಭಿಸಿದೆ.

Advertisement

ಕೋವಿಡ್‌-19 ಲಾಕ್‌ಡೌನ್‌ ಆದೇಶದಂತೆ ಸಾರಿಗೆ ಕಾರ್ಯಾಚರಣೆಯನ್ನು ಮಾ. 24ರಿಂದ ಮೇ 18ರವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ ಲಾಕ್‌ಡೌನ್‌ ಸಡಿಲಿಸಿ, ಅಂತರ್‌ರಾಜ್ಯ ಹಾಗೂ ಕಂಟೋನ್‌ಮೆಂಟ್‌ ವಲಯಗಳನ್ನು ಹೊರತುಪಡಿಸಿ ಇನ್ನುಳಿದ ತಾಲೂಕುನಿಂದ ಜಿಲ್ಲಾ ಕೇಂದ್ರಗಳಿಗೆ ಮಾತ್ರ ಪ್ರಮುಖ ಸ್ಥಳಗಳಿಗೆ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಒಂದು ವಾಹನದಲ್ಲಿ ಎಸ್‌ ಒಪಿ ಪ್ರಕಾರ 30 ಆಸನಗಳಿಗೆ ಸೀಮಿತಗೊಳಿಸಿ, ಸಾರಿಗೆ ಕಾರ್ಯಾಚರಣೆ ಆರಂಭಿಸಲಾಗಿದೆ.

ಮುಂದುವರೆದು ಪ್ರಯಾಣಿಕರಿಗೆ ಹೆಚ್ಚಿನ ಸಾರಿಗೆ ಸೌಕರ್ಯ ಒದಗಿಸುವ ದೃಷ್ಟಿಯಿಂದ ತಾಲೂಕು-ಹೋಬಳಿ ಮಟ್ಟದ ಆಯ್ದ ಸ್ಥಳಗಳಾದ ಇಟ್ಟಗಿ, ಕಮಲಾಪುರ, ಖಾನಾಹೊಸಳ್ಳಿ, ತೋರಣಗಲ್ಲು, ಕಮಲಾಪುರದಲ್ಲಿ ಸಂಸ್ಥೆಯ ಸಿಬ್ಬಂದಿ ನಿಯೋಜಿಸಿ ಥರ್ಮಲ್‌ ಸೀðನಿಂಗ್‌, ಸ್ಯಾನಿಟೈಸರ್‌ ವ್ಯವಸ್ಥೆ ಮಾಡುವ ಮೂಲಕ ಸಾರಿಗೆ ಸೌಕರ್ಯ ಒದಗಿಸಲಾಗಿದೆ. ಅಲ್ಲದೆ ಜನದಟ್ಟಣೆ ಹಾಗೂ ಅವಶ್ಯಕತೆಗನುಗುಣವಾಗಿ ದೂರದ ರಾತ್ರಿ ಸಾರಿಗಗಳಿಗೆ ಹೊಸಪೇಟೆ, ಸಂಡೂರು, ಹಡಗಲಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಕೂಡ್ಲಿಗಿ,ಕೊಟ್ಟೂರು, ಕಂಪ್ಲಿಯಿಂದ ಬೆಂಗಳೂರಿಗೆ ಮತ್ತು ಇತರೆ ಪ್ರಮುಖ ಸ್ಥಳಗಳಿಗೆ ಅವತಾರ್‌ನಲ್ಲಿ ಮುಂಗಡ ಆಸನ ಕಾಯ್ದಿರಿಸುವ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ.

ಸಾರ್ವಜನಿಕರು ಸದರಿ ಹೋಬಳಿ ಮಟ್ಟದಿಂದ ಸಾರಿಗೆಗಳ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಕರ್ನಾಟಕ ಈಶಾನ್ಯ ಸಾರಿಗೆ ಸಂಸ್ಥೆ ಹೊಸ ಪೇಟೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next