ಹೊಸಪೇಟೆ: ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಕೊನೆಗೂ ಬಂಡಾಯದ ಬಿಸಿ ತಟ್ಟಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರ ಮಾತಿಗೂ ಜಗ್ಗದ ಬಿಜೆಪಿ ಬಂಡಾಯ ಅಭ್ಯರ್ಥಿ ಕವಿರಾಜ್ ಅರಸ್ ನಾಮಪತ್ರ ಹಿಂಪಡೆಯದೇ ಚುನಾವಣೆ ಕಣದಲ್ಲಿ ಉಳಿದಿದ್ದು ಪಕ್ಷಕ್ಕೆ ಹೊಡೆತ ನೀಡಿದ್ದಾರೆ.
Advertisement
ಬಿಜೆಪಿ ನಾಯಕರ ಮಾತಿಗೆ ಮಣಿದು ಕೊನೆಗಳಿಯಲ್ಲಿ ನಾಮಪತ್ರ ಹಿಂಪಡೆಯಬಹುದು ಎಂಬ ಲೆಕ್ಕಾಚಾರ ಸಂಪೂರ್ಣ ತಲೆಕೆಳಗಾಗಿದೆ. ಸಿಎಂ ಯಡಿಯೂರಪ್ಪ ಸೇರಿ ಇಡೀ ಮಂತ್ರಿ ಮಂಡಲ ಬಂದರೂ ಚುನಾವಣೆ ಕಣದಿಂದ ಹಿಂದೆ ಸರಿಯುವುದಿಲ್ಲ ಎಂಬ ಮಾತಿಗೆ ಕವಿರಾಜ ಕಟಿಬದ್ಧರಾಗಿ ಕಣದಲ್ಲಿ ಉಳಿದು ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ಇದು ಬಿಜೆಪಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ.
Related Articles
Advertisement
ಕವಿರಾಜ ಅವರು ಚುನಾವಣೆ ಕಣದಿಂದ ಹಿಂದೆ ಸರಿಯುವಂತೆ ಮನವೊಲಿಸುವುದು ಶ್ರೀರಾಮುಲು ಅವರಿಗೆ ಸುಲಭದ ಕೆಲಸವಾಗಿತ್ತು. ಆದರೂ ಬಂಡಾಯ ಶಮನಕ್ಕೆ ರಾಮುಲು ಮನಸ್ಸು ಮಾಡಿಲ್ಲವೇ ಅಥವಾ ಇದರ ಹಿಂದೆ ಆನಂದ ಸಿಂಗ್ ಅವರಿಗೆ ಒಳಹೊಡೆತ ನೀಡುವ ಉದ್ದೇಶ ಅಡಗಿದೆಯೇ ಎಂಬೆಲ್ಲ ಮಾತುಗಳು ಕೇಳಿಬರುತ್ತಿವೆ. ಕ್ಷೇತ್ರ ದ ಕಾರ್ಯಕರ್ತರಭಿನ್ನ ಮತ ಶಮನಗೊಳಿಸಿ ಪಕ್ಷದ ಅಭ್ಯರ್ಥಿ ಆನಂದಸಿಂಗ್ ಅವರನ್ನು ಗೆಲ್ಲಿಸುವ ಸೂಚನೆ ಇದ್ದರೂ ಕವಿ ರಾಜ ಮನವೊಲಿಸುವ ವಿಷಯದಲ್ಲಿ ಶ್ರೀರಾಮುಲು ಹಿಂದೆ ಬಿದ್ದಿದ್ದೇಕೆ ಎಂಬ ವಾದ ಶುರುವಾಗಿದೆ. ಪಕ್ಷ ಸಂಘಟನೆ: 2018ರ ವಿಧಾನಸಭಾ ಚುನಾವಣೆಯಲ್ಲಿ ಆನಂದ ಸಿಂಗ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದು ಬಿಜೆಪಿ ಪಾಳಯದಲ್ಲಿ ಸಂಚಲನ ಉಂಟು ಮಾಡಿತ್ತು. ಆಗ ಯಡಿಯೂರಪ್ಪ ಶ್ರೀರಾಮುಲುಗೆ ಪಕ್ಷ ಸಂಘಟನೆ ಹೊಣೆಗಾರಿಕೆ ನೀಡಿದರು. ಸ್ಥಳೀಯ ಮುಖಂಡರಾದ ಕವಿರಾಜ ಅರಸ್, ರಾಣಿ ಸಂಯುಕ್ತ, ಕಿಶೋರ್ ಪತ್ತಿಕೊಂಡ ಸೇರಿದಂತೆ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಮಾಡಿ ಕಾಂಗ್ರೆಸ್‌ನಿಂದ ಮಾಜಿ ಶಾಸಕ ಎಚ್.ಆರ್. ಗವಿಯಪ್ಪನವರನ್ನು ಬಿಜೆಪಿಗೆ ಕರೆ ತರುವಲ್ಲಿ ಶ್ರೀರಾಮುಲು ಯಶ್ವಸಿಯಾಗಿ ಚುನಾವಣೆ ಎದುರಿಸಿದರು. ಆನಂದ ಸಿಂಗ್ ವಿರುದ್ಧ ಗವಿಯಪ್ಪ ಅತ್ಯಂತ ಕಡಿಮೆ ಅಂತರದಲ್ಲಿ ಸೋತರು. ಆದರೆ ಪಕ್ಷ ತೊರೆದು ಕಾಂಗ್ರೆ ಸ್ ನಲ್ಲಿದ್ದ ಆನಂದಸಿಂಗ್ ಅವರನ್ನು ಮುಂಬರುವ ಚುನಾವಣೆಯಲ್ಲಿ ಸೋಲಿಸಬೇಕು ಎಂದು ಸಂಕಲ್ಪ ಮಾಡಿದ್ದ ಕೆಲ ಬಿಜೆಪಿ ಮುಖಂಡರು ಹಾಗೂ ಕಾರ್ಯ ಕ ರ್ತರಿಗೆ ಆನಂದಸಿಂಗ್ ಮರಳಿ ಬಿಜೆಪಿಗೆ ಬಂದಿರುವುದು ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ಆನಂದ ಸಿಂಗ್ ಪಕ್ಷ ಸೇರುವ ಮುನ್ನ ಸೋಲಿಸುವ ಲೆಕ್ಕಾಚಾ ರ ದಲ್ಲಿದ್ದ ಮುಖಂಡರು-ಕಾರ್ಯಕರ್ತರಿಗೆ ಇದೀಗ ಪಕ್ಷ ಆನಂದ ಸಿಂಗ್‌ರನ್ನು ಗೆಲ್ಲಿಸುವ ಹೊಣೆಗಾರಿಕೆ ನೀಡಿದೆ. ಆನಂದ ಸಿಂಗ್ ಮೇಲಿನ ಎಲ್ಲ ವೈಮಸ್ಸು-ಭಿನ್ನ ಮತ ಮರೆತು ಬಿಜೆಪಿ ಮುಖಂಡರು-ಕಾರ್ಯಕರ್ತರು ಅವರನ್ನು ಗೆಲ್ಲಿಸಲು ಮುಂದಾಗುತ್ತಾರಾ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.