ಹೊಸಪೇಟೆ: ಕೋವಿಡ್ ನಿಯಂತ್ರಣದ ಹಿನ್ನೆಲೆಯಲ್ಲಿ ಐತಿಹಾಸಿಕ ಹಂಪಿ ಶ್ರೀವಿರೂಪಾಕ್ಷೇಶ್ವರ ಸ್ವಾಮಿ ದೇಗುಲ ಪ್ರಾಂಗಣವನ್ನು ಪುರಾತನ ಸಂಪ್ರದಾಯದಂತೆ ಗೋಮೂತ್ರ ಹಾಗೂ ಗೋಮಯದ ಮೂಲಕ ಶುದ್ಧಗೊಳಿಸಲಾಯಿತು.
ಶ್ರೀವಿದ್ಯಾರಣ್ಯ ಭಾರತೀ ಸ್ವಾಮೀಜಿ ಸೂಚನೆಯಂತೆ ದೇವಸ್ಥಾನ ಪ್ರಧಾನ ಅರ್ಚಕರಾದ ಪಿ.ಶ್ರೀನಾಥ ಶರ್ಮಾ, ಪಿ. ಪ್ರಶಾಂತ್ ನೇತೃತ್ವದಲ್ಲಿ ಸ್ವಚ್ಛತಾ ಸಿಬ್ಬಂದಿ ವಿರೂಪಾಕ್ಷ-ಪಂಪಾಂಬಿಕೆ ದೇವಿ ದರ್ಶನಕ್ಕಾಗಿ ಆಗಮಿಸುವ ಭಕ್ತರ ಆರೋಗ್ಯದ ದೃಷ್ಟಿಯಿಂದ ಗೋಮೂತ್ರ ಹಾಗೂ ಗೋಮಯ (ಹಸುವಿನ ಸೆಗಣಿ)ದ ಮಿಶ್ರಣದಿಂದ ಇಡೀ ದೇವಾಲಯದ ಪ್ರಾಂಗಣ ಶುದ್ಧೀಕರಿಸಿದರು.
ಲಾಕ್‌ಡೌನ್ ಜಾರಿಯಾದ ಮೂರು ತಿಂಗಳ ಅವಧಿಯಲ್ಲಿ ಮೂರು ಬಾರಿ ಶುದ್ಧೀಕರಣ ಮಾಡಲಾಗಿದೆ. ವಿದ್ಯಾರಣ್ಯ ಗೋಶಾಲೆಯ ಹಸುಗಳ ಸೆಗಣಿ ಹಾಗೂ ಗೋಮೂತ್ರದಿಂದ ಶುದ್ಧೀಕರಣ ಕ್ರಿಯೆ ನಡೆಯುತ್ತಿದೆ. ದೇವಸ್ಥಾನದ ಸ್ವಚ್ಛತಾ ಸಿಬ್ಬಂದಿಗಳಾದ ಸಾವಿತ್ರಿ, ದುರ್ಗಮ್ಮ, ಗಂಗಮ್ಮ, ಮಂಜುನಾಥ, ತಿಪ್ಪಯ್ಯ ಹಾಗೂ ಪಂಪಾಪತಿ ಶುದ್ಧೀಕರಣ ಕಾರ್ಯ ನಡೆಸಿದರು.
ಸರ್ವರೋಗಕ್ಕೂ ಗೋಮೂತ್ರ ಹಾಗೂ ಗೋಮಯ ರಾಮಬಾಣವಾಗಿದ್ದು. ಪ್ರತಿಯೊಬ್ಬರು ತಮ್ಮ ಮನೆಯಂಗಳಲ್ಲಿ ಗೋಮೂತ್ರ ಹಾಗೂ ಗೋಮಯ ಉಪಯೋಗಿಸಿ ಸ್ಯಾನಿಟೈಸ್ ಮಾಡುವುದರಿಂದ ಕೋವಿಡ್ ಅನ್ನು ದೂರ ಇಡಬಹುದು.
ಪಿ. ಶ್ರೀನಾಥ ಶರ್ಮಾ,
ಪ್ರಧಾನ ಅರ್ಚಕರು, ಶ್ರೀ ವಿರೂಪಾಕ್ಷೇಶ್ವರ
ಸ್ವಾಮಿ ದೇಗುಲ, ಹಂಪಿ