Advertisement

ಕೋವಿಡ್ ನಿಂದ ವಿಶ್ವದಲ್ಲಿ ತಲ್ಲಣ

12:54 PM Jun 07, 2020 | Naveen |

ಹೊಸಪೇಟೆ: ಕೋವಿಡ್‌-19 ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದು, ಪ್ರತಿಯೊಬ್ಬರನ್ನು ಅನುಮಾನದ ದೃಷ್ಟಿಯಿಂದ ನೋಡುವ ಪರಿಸ್ಥಿತಿ ಎದುರಾಗಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ| ಸ.ಚಿ.ರಮೇಶ ವಿಷಾದಿಸಿದರು.

Advertisement

ಕನ್ನಡ ವಿಶ್ವವಿದ್ಯಾಲಯದಲ್ಲಿ ಶನಿವಾರ ಸಾಂಕ್ರಾಮಿಕ ರೋಗ ಕೋವಿಡ್‌ -19 ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಕುಟುಂಬದ ಜೊತೆಗೆ ಜಗತ್ತನ್ನೇ ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರದ್ದು. ಪ್ರತಿನಿತ್ಯ ಯೋಗ, ಧ್ಯಾನ, ಶ್ರಮದಾನದ ಜೊತೆಗೆ ಉತ್ತಮ ಆಹಾರವನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವೈದ್ಯ ಡಾ| ಸಂಪತ್‌ಕುಮಾರ್‌ ತೆಗ್ಗಿ ಮಾತನಾಡಿ, ಸ್ವಯಂ ರಕ್ಷಣೆ ನಮ್ಮೆಲ್ಲರ ಹೊಣೆ. ನಾವು ಹೆಚ್ಚಿನ ರೀತಿಯಲ್ಲಿ ಸುರಕ್ಷಿತ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ನಮ್ಮ ಕೆಟ್ಟ ರೂಢಿ ಸಂಪ್ರದಾಯಗಳನ್ನು ತ್ಯಜಿಸಿ ದಿನನಿತ್ಯ ಸ್ವಚ್ಛತೆಯಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಕುಟುಂಬಕ್ಕೆ ನಾವೇ ಮಾರಕವಾಗುತ್ತೇವೆ ಎಂದು ಎಚ್ಚರಿಸಿದರು.
ಡಾ| ಎ. ಮೋಹನ ಕುಂಟಾರ್‌ ಮಾತನಾಡಿ, ವಿಶ್ವವಿದ್ಯಾಲಯದ ಸಿಬ್ಬಂದಿಗಳು ವೈಯಕ್ತಿಕ, ಕುಟುಂಬ ಹಾಗೂ ಕಚೇರಿ ಹಿತದೃಷ್ಟಿಯಿಂದ ಸೂಕ್ತ ರೀತಿಯಾಗಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಶುಚಿತ್ವವಾಗಿ ಕಾರ್ಯನಿರ್ವಹಿಸಿದರೆ ಎಲ್ಲರೂ ಕೂಡ ಉತ್ತಮ ಆರೋಗ್ಯದಿಂದ ಜೀವನ ಸಾಗಿಸಬಹುದೆಂದು ಸಲಹೆ ನೀಡಿದರು. ಕುಲಸಚಿವ ಡಾ. ಎ. ಸುಬ್ಬಣ್ಣ ರೈ ಸ್ವಾಗತಿಸಿದರು. ಸಹಾಯಕ ನಿರ್ದೇಶಕಿ ಡಿ. ಪ್ರಭ ನಿರೂಪಿಸಿದರು. ಡೀನರು, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next