Advertisement

ಹೊಸಪೇಟೆ: ವಸಂತ ವೈಭವ ಮೆರವಣಿಗೆ ಸಂಭ್ರಮ

04:31 PM Feb 02, 2024 | Team Udayavani |

ಹೊಸಪೇಟೆ: ಹಂಪಿ ಉತ್ಸವ-2024ಕ್ಕೆ ಹೊಸಪೇಟೆ ನಗರಿ ಸಿಂಗಾರಗೊಂಡಿದೆ. ನಗರ ಸಂಪರ್ಕಿಸುವ ಪ್ರಮುಖ ರಸ್ತೆಗಳು ವಿದ್ಯುತ್‌ ದೀಪಾಲಂಕಾರದಿಂದ ಅಲಂಕೃತವಾಗಿವೆ. ಬೀದಿಗಳಿಗೆ ಅಳವಡಿಸಿರುವ ಬೆಳಕಿನ ತೋರಣ ಹಂಪಿ ಉತ್ಸವಕ್ಕೆ ಸರ್ವರನ್ನು
ಸ್ವಾಗತಿಸುತ್ತಿದೆ.

Advertisement

ಹಂಪಿ ಉತ್ಸವದ ಕ್ಷಣಗಣನೆ ನಡುವೆ, ಗುರುವಾರ ಹೊಸಪೇಟೆ ನಗರದ ವಡಕರಾಯನ ದೇವಸ್ಥಾನದ ಬಳಿ, ವಸಂತ ವೈಭವ ಮೆರವಣಿಗೆಗೆ ವಿಜಯನಗರ ಶಾಸಕ ಎಚ್‌.ಆರ್‌.ಗವಿಯಪ್ಪ ಚಾಲನೆ ನೀಡಿದರು.

ಕಂಸಾಳೆ, ಪೂಜಾಕುಣಿತ, ಕರಡಿ ಮಜಲು, ಲಂಬಾಣಿ ನೃತ್ಯ, ಚಿಲಿಪಿಲಿ ಗೊಂಬೆ, ಆಲಾಯಿ ಹೆಜ್ಜೆಮೇಳ, ಸೋಮನ ಕುಣಿತ, ಮಹಿಳಾ ವೀರಗಾಸೆ, ಕೊಂಬು ಕಹಳೆ, ಚಂಡೆ ವಾದನ, ಝಾಂಜ್‌ ಮೇಳ, ಮೋಜಿನ ಗೊಂಬೆ, ಜಗ್ಗಲಿಗಿ, ಖಡ್ಗವರಸೆ, ನವಿಲು ಕುಣಿತ, ಮರಗಾಲು ಬೀಸು, ಕಂಸಾಳೆ, ಸಿಂಧೋಳ ಕುಣಿತ, ಸಮಾಳ ಮತ್ತು ನಂದಿಕೋಲು, ಕುದುರೆ ಕುಣಿತ, ನಾದಸ್ವರ, ಡೊಳ್ಳುಕುಣಿತ, ಕೋಲಾಟ, ಹಗಲು ವೇಷ, ತಾಷಾ ರಂಡೋಲ್‌, ಗೊಂದಲಿಗರಹಾಡು,ಗೊರವರ ಕುಣಿತ ಮುಂತಾದ ನೃತ್ಯ ಪ್ರಕಾರಗಳು ಮೆರವಣಿಗೆಗೆ ಮೆರಗು ತಂದವು.

ತಾಯಿ ಭುವನೇಶ್ವರಿ ದೇವಿ ಮೂರ್ತಿಯನ್ನು ಅಲಂಕೃತಗೊಂಡ ಟ್ಯಾಕ್ಟರ್‌ ಇರಿಸಿ ಡಾ|ಪುನೀತ್‌ ರಾಜ್‌ಕುಮಾರ್‌ ಜಿಲ್ಲಾ
ಕ್ರೀಡಾಂಗಣದವರೆಗೆ ಅದ್ಧೂರಿ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ಜಿಲ್ಲಾ ಧಿಕಾರಿ ಎಂ.ಎಸ್‌.ದಿವಾಕರ, ಜಿ.ಪಂ.
ಸಿಇಒ ಸದಾಶಿವಪ್ರಭು ಬಿ., ಉಪವಿಭಾಗಾಧಿಕಾರಿ ಮಹದ್‌ಅಲಿ ಅಕ್ರಂ ಷಾ, ತಹಶೀಲ್ದಾರ್‌ ವಿಶ್ವಜಿತ್‌ ಮೆಹ್ತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್‌ ರಂಗಣ್ಣವರ್‌ ಸೇರಿದಂತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next