ಹೊಸಕೋಟೆ ಬೈಪಾಸ್ ರಸ್ತೆ ದುರಸ್ತಿಗೆ ಆಗ್ರಹಕನಕಪುರ: ಕರವೇ ಪ್ರತಿಭಟನೆಗೆ ಬೆಚ್ಚಿ ಎದ್ದನೋ ಬಿದ್ದನೋ ಎಂದು ಓಡೋಡಿ ಬಂದ ಲೋಕೋಪಯೋಗಿ ಇಲಾಖೆ ಮತ್ತು ತಾಲೂಕು ಆಡಳಿತದ ಅಧಿಕಾರಿಗಳು ತಾತ್ಕಾಲಿಕವಾಗಿ ರಾಮನಗರ ರಸ್ತೆ ದುರಸ್ತಿಗೆ ಮುಂದಾದರು.
ಹೊಸಕೋಟೆಯ ಬೈಪಾಸ್ ರಸ್ತೆ ಕಥೆ
ಜಿಲ್ಲಾ ಕೇಂದ್ರ ರಾಮನಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹೊಸಕೋಟೆಯ ಬೈಪಾಸ್ ರಸ್ತೆಯ ಬಳಿ ನೂರಾರು ಗುಂಡಿಗಳು ಬಿದ್ದು ವರ್ಷಗಳೇ ಕಳೆದಿದ್ದರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ದುರಸ್ತಿಗೆ ಮುಂದಾಗಿರಲಿಲ್ಲ. ಗುರುವಾರ ಮಳೆ ಯನ್ನು ಲೆಕ್ಕಿಸದೆ ಹತ್ತಾರು ಕರವೇ ಕಾರ್ಯಕರ್ತರು ನಡೆಸಿದ ಪ್ರತಿಭಟನೆಗೆ ಓಡೋಡಿ ಬಂದ ಇಲಾಖೆ ಅಧಿಕಾರಿಗಳು ಯಂತ್ರಗಳನ್ನು ತಂದು ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡುವ ಕಾರ್ಯಕ್ಕೆ ಮುಂದಾದರು.
ಕರವೇ ಆಕ್ರೋಶ
ಗುರುವಾರ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ರಾಮ ನಗರ ರಸ್ತೆಯ ಬೈಪಾಸ್ ರಸ್ತೆಯ ಬಳಿ ಕರವೇ ಪ್ರತಿ ಭಟನೆ ಹಮ್ಮಿಕೊಂಡಿತ್ತು. ಈ ವೇಳೆ ಕರವೇ ಜಿಲ್ಲಾಧ್ಯಕ್ಷ ಕಬ್ಟಾಳೇಗೌಡ ಮಾತನಾಡಿ, ಲೋಕೋಪ ಯೋಗಿ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಚರಂಡಿ ಮತ್ತು ಕಾಲುವೆ, ಜಮೀನುಗಳಿಂದ ಹರಿದು ಬರುವ ನೀರಿನಿಂದ ರಸ್ತೆ ಹದಗೆಟ್ಟಿದೆ. ವಾರ್ಷಿಕ ನಿರ್ವಹಣೆ ಬಾಪ್ತಿನಲ್ಲಿ ಗುಂಡಿಗಳನ್ನು ಮುಚ್ಚಿ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳಲು ಅವಕಾಶವಿದೆ. ಆದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ರಸ್ತೆ ಡಾಂಬರೀಕರಣ ಮಾಡಲು ಟೆಂಡರ್ ಹಂತದಲ್ಲಿದೆ ಎಂದು ಕುಂಟು ನೆಪ ಮಾಡಿಕೊಂಡು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳ ದೌಡು
ಪ್ರತಿಭಟನೆ ಬಿಸಿ ತಟ್ಟುತಿದ್ದಂತೆ ಓಡೋಡಿ ಬಂದ ಲೋಕೋಪಯೋಗಿ ಇಲಾಖೆ ಮತ್ತು ತಾಲೂಕು ಆಡಳಿತದ ಗ್ರೇಡ್-2 ತಹಶೀಲ್ದಾರ್ ಶಿವಕುಮಾರ್, ಪಿಡಬ್ಲ್ಯೂಡಿ ಎಇಇ ಮೂರ್ತಿ, ಶಶಿಧರ್ ಅಧಿಕಾರಿಗಳು ತರಾತುರಿಯಲ್ಲಿ ಯಂತ್ರಗಳನ್ನು ತಂದು ರಸ್ತೆಯ ಮೇಲೆ ಹರಿಯು ತ್ತಿದ್ದ ಕಾಲುವೆ ನೀರನ್ನು ತಡೆದು ಗುಂಡಿ ಬಿದ್ದ ರಸ್ತೆಗೆ ಜೆಲ್ಲಿ ಸುರಿದು ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಿದ ಅಧಿಕಾರಿಗಳು ರಸ್ತೆಯುದ್ಧಕ್ಕೂ ಬಿದ್ದಿರುವ ಗುಂಡಿಗಳನ್ನು ಮುಚ್ಚುವುದಾಗಿ ಭರವಸೆ ನೀಡಿದ ಬಳಿಕ ಕರವೇ ಹೋರಾಟಗಾರರು ಪ್ರತಿಭಟನೆ ಯನ್ನು ಹಿಂಪಡೆದು ಲೋಕೋಪಯೋಗಿ ಇಲಾಖೆ ಮತ್ತು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.
ಕರವೇ ಜಿಲ್ಲಾ ಉಪಾಧ್ಯಕ್ಷ ಪುಟ್ಟಸ್ವಾಮಿ, ತಾಲೂಕು ಅಧ್ಯಕ್ಷ ಜಯರಾಮೇಗೌಡ, ನಗರ ಘಟಕದ ಅಧ್ಯಕ್ಷ ಅಂದಾನಿಗೌಡ, ತಾಲೂಕು ಉಪಾಧ್ಯಕ್ಷ ಡಿ.ರವಿ, ರೈತ ಘಟಕದ ಉಪಾಧ್ಯಕ್ಷ ಜಯಕೃಷ್ಣಪ್ಪ, ರೈತ ಘಟಕದ ಗುರುಗೌಡ, ಜಿಲ್ಲಾ ಮುಖಂಡರಾದ ಜಗದೀಶ್, ಅರುಣ್ ಕುಮಾರ್, ಶಿವುಗೌಡ, ಮನುಗೌಡ, ಪ್ರಶಾಂತ್ ಕುಮಾರ್, ಮಹೇಶ್ ಬಾಬು, ತಿಮ್ಮರಾಜು, ಪ್ರಭುಕುಮಾರ್, ಶ್ರೀನಿವಾಸ್ ಸೇರಿದಂತೆ ವಾಹನ ಸವಾರರು ಸಾರ್ವಜನಿಕರು ಪ್ರತಿಭಟನೆಗೆ ಬೆಂಬಲ ನೀಡಿದರು.