Advertisement

ವಲಸಿಗರ ಸಾಗಾಟಕ್ಕೆ ವಿಶೇಷ ರೈಲು

05:33 PM May 18, 2020 | Naveen |

ಹೊಸಪೇಟೆ: ನಗರ ರೈಲ್ವೆ ನಿಲ್ದಾಣದಿಂದ ಹೊರ ರಾಜ್ಯದ ವಲಸಿಗರನ್ನು ಹೊತ್ತ ಶ್ರಮಿಕ ವಿಶೇಷ ರೈಲು ಭಾನುವಾರ ಉತ್ತರ ಪ್ರದೇಶದತ್ತ ತೆರಳಿತು.

Advertisement

ಉಪವಿಭಾಗಾಧಿಕಾರಿ ಶೇಖ್‌ ತನ್ವೀರ್‌ ಆಸೀಫ್‌, ತಹಶೀಲ್ದಾರ್‌ ವಿಶ್ವನಾಥ ಮತ್ತು ಸಿಬ್ಬಂದಿ 1452 ವಲಸಿಗರಿಗೆ ಶುಭಹಾರೈಸಿ, ಚಪ್ಪಾಳೆ ತಟ್ಟಿ ಬೀಳ್ಕೊಟ್ಟರು. ಜಿಲ್ಲೆಯ ವಿವಿಧೆಡೆ ಜೀವನ ನಿರ್ವಹಣೆಗೆ ಬಂದಿದ್ದ ಉತ್ತರಪ್ರದೇಶದ ವಲಸಿಗರನ್ನು ಬಳ್ಳಾರಿ ಕೇಂದ್ರ ಬಸ್‌ ನಿಲ್ದಾಣದಲ್ಲಿ ಹಾಗೂ ತೋರಣಗಲ್ಲು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ, ಪ್ರಮಾಣಪತ್ರ ವಿತರಿಸಿ, ರೈಲ್ವೆ ಟಿಕೆಟ್‌ ನೀಡಲಾಗಿತ್ತು.

ಅವರಿಗೆ ನೀಡಲಾದ ಟಿಕೆಟ್‌ ಹಿಂಬದಿಯಲ್ಲಿ ಬರೆಯಲಾದ ಬೋಗಿ ಮತ್ತು ಸೀಟ್‌ ಸಂಖ್ಯೆಯಲ್ಲಿ ಆಸೀನರಾಗುವಂತೆ ಸೂಚಿಸಲಾಗಿತ್ತು. ಉತ್ತರ ಪ್ರದೇಶದ ಆಗ್ರಾ, ಅಲಿಘರ್‌, ಅಜಂಘರ್‌, ಲಕ್ನೋ, ಅಲಹಾಬಾದ್‌, ಅಮೇಥಿ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ತೆರಳಲು ರೈಲಿನ ಸೀಟಿನಲ್ಲಿ ಆಸೀನರಾಗಿದ್ದ ವಲಸಿಗರು ತಮ್ಮೂರು ಕಡೆ ಸುರಕ್ಷಿತವಾಗಿ ಪಯಣಿಸಿದರು.

ಉತ್ತರ ಪ್ರದೇಶಕ್ಕೆ ಈ ರೈಲು ತೆರಳಲಿದ್ದು, 34 ಗಂಟೆಗಳ ಪ್ರಯಾಣದ ಅವಧಿಯದ್ದಾಗಿದೆ. ಮಾರ್ಗಮಧ್ಯೆ ಯಾರಿಗೂ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಆಹಾರ ಪೊಟ್ಟಣಗಳನ್ನು ವಿತರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next