Advertisement

ಸಂಡೂರು ಬೈಪಾಸ್‌ ರಸ್ತೆ ಅಭಿವೃದ್ಧಿಗೆ ಆಗ್ರಹ

03:28 PM Feb 26, 2020 | Naveen |

ಹೊಸಪೇಟೆ: ನಗರದ ಹೊರ ವಲಯದ ಸಂಡೂರು ರಸ್ತೆಯ ಬೈಪಾಸ್‌ ರಸ್ತೆಯನ್ನು ಕೂಡಲೇ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿ, ಲಾರಿ ಮಾಲೀಕರು ಮಂಗಳವಾರ ಸಂಡೂರ್‌ ರಸ್ತೆ ಬಂದ್‌ ಮಾಡಿ ದಿಢೀರ್‌ ಪ್ರತಿಭಟನೆ ನಡೆಸಿದರು.

Advertisement

ಲಾರಿ ಮಾಲೀಕರ ಸಂಘ, ವಿಜಯ ನಗರ ಹೊಸ ಪೇಟೆ ತಾಲೂಕು ಗಣಿ ಮಾಲೀಕರ ಸಂಘ ಹಾಗೂ ಕರುನಾಡು ಕಲಿಗಳು ಕ್ರೀಯಾ ಶೀಲ ಸಮಿತಿ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದರು.

ರಸ್ತೆಗಳು ಸಂಪೂರ್ಣ ಹಾಳಾಗಿವೆ. 870 ಕೋಟಿ ರೂ. ವೆಚ್ಚದಲ್ಲಿ 95 ಕಿ.ಮೀ ಕಾಮಗಾರಿಯನ್ನು ಗ್ಯಾಮನ್‌ ಇಂಡಿಯಾ ಕಂಪನಿಗೆ ವಹಿಸಲಾಗಿತ್ತು. 2017 ಮಾರ್ಚ್‌ 3 ರಂದು ಟೆಂಡರ್‌ ನೀಡಲಾಗಿದ್ದು, 2 ವರ್ಷದ ಒಳಗಡೆ ಮುಗಿಸಬೇಕಾಗಿತ್ತು. ಆದರೆ, ಕಾಲ ಮಿತಿ ಮುಗಿದು 10 ತಿಂಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧೂಳು ಸೇವಿಸಿ ಅಸ್ತಮಾ ಮತ್ತು ನಾನಾ ರೋಗಗಳಿಗೆ ಜನರು ತುತ್ತಾಗುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕಂಪನಿಗೆ ಸೂಚಿಸಿ, ಕಾಮಗಾರಿಯನ್ನು ನಿರ್ದಿಷ್ಟ ಸಮಯದಲ್ಲಿ ಪೂರ್ಣಗೊಳಿಸಲು ಸೂಚಿಸಬೇಕು. ಇಲ್ಲದಿದ್ದರೇ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು. ಬಳಿಕ ಅರಣ್ಯ ಸಚಿವ
ಆನಂದ ಸಿಂಗ್‌ ಅವರಿಗೆ ಮನವಿ ಸಲ್ಲಿಸಲಾಯಿತು. ಕೂಡಲೇ ಪ್ರತಿ ಭಟನಾ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಸಚಿವ ಆನಂದ ಸಿಂಗ್‌, ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿ ಮಾತನಾಡಿ, ಗಣಿ ಬಾಧಿತ ನಿಧಿಯಿಂದ ಕಾರಿಗ ನೂರಿನಿಂದ ವಿರೂ ಪಾಕ್ಷ ನಾಯಕ ವೃತ್ತದ
ವರಗೆ ರಸ್ತೆ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರೂ ಯಾವುದೇ ಪ್ರಯೋಜವಾಗಿಲ್ಲ ಎಂದರು.

Advertisement

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಶೇಖ ತನ್ವೀರ್‌ ಆಸೀಫ್ಸ್ಥ ಳಕ್ಕೆ ಆಗಮಿಸಿ, ಶೀಘ್ರವೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು. ವಿಜಯನಗರ ಹೊಸ ಪೇಟೆ ತಾಲೂಕು ಗಣಿ ಮಾಲೀ ಕರ ಸಂಘ ಸಂಘದ ಗೌರವ ಅಧ್ಯಕ್ಷ ಎನ್‌. ಸದಾಶಿವ, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಎಸ್‌.ಮಣಿ, ಮುಖಂಡರಾದ ಮನ್ನಾನ್‌ ಖಾನ್‌, ಎಚ್‌.ಮೆಹಬೂಬ್‌ ಸಾಬ್‌, ಟಿ.ಮತಿವಂತ, ದುರ್ಗಪ್ರಸಾದ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next