ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಎಂ.ಪಿ.ಪ್ರಕಾಶ್ ನಗರದಲ್ಲಿ ಎದುರಾಗಿರುವ ಸ್ವತ್ಛತೆಕೊರತೆ ಹಲವು ಸಾಂಕ್ರಾಮಿಕ ರೋಗ-ರುಜಿನಗಳಿಗೆಆಹ್ವಾನ ನೀಡಿದೆ.ಹಂಪಿ ಗ್ರಾಮ ಪಂಚಾಯ್ತಿ ಸ್ವತ್ಛತೆ ಆದ್ಯತೆನೀಡುತ್ತಿಲ್ಲ. ಆಗೊಮ್ಮೆ-ಈಗೊಮ್ಮೆ ಬರುವಕಾರ್ಮಿಕರು, ಚರಂಡಿಯಲ್ಲಿ ಬಿದ್ದಿರುವ ತ್ಯಾಜ್ಯವನ್ನುಹೊರತೆಗೆದು ರಸ್ತೆ ಬದಿಯಲ್ಲಿಯೇ ಹಾಕುತ್ತಾರೆ.
ರಸ್ತೆಬದಿಯ ತ್ಯಾಜ್ಯವನ್ನು ಹೊರ ಸಾಗಿಸುವುದಿಲ್ಲ. ಪುನಃತ್ಯಾಜ್ಯ ಚರಂಡಿಯನ್ನು ಸೇರಿ ಗಬ್ಬು ನಾರುತ್ತದೆ.ಇದರಿಂದಾಗಿ ಸೊಳ್ಳೆ, ನೊಣ ಹೆಚ್ಚಾಗಿ, ಡೆಂಘೀ,ಮಲೇರಿಯಾ ಮುಂತಾದ ಸಾಂಕ್ರಾಮಿಕ ರೋಗಗಳುಹರಡುವ ಭೀತಿ ಎದುರಾಗಿದೆ ಎಂದು ಪ್ರಕಾಶನಗರದ ವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಈಚೆಗಷ್ಟೇ ಜಿಲ್ಲಾಧಿ ಕಾರಿ ಅನಿರುದ್ಧ ಶ್ರವಣ್ ಅವರು,ಹಂಪಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಸ್ವತ್ಛತೆಆದ್ಯತೆ ನೀಡಬೇಕು ಎಂದು ಕಮಲಾಪುರ ಸಮೀಪದದರೋಜಿ ನೈಸರ್ಗಿಕ ಧಾಮದಲ್ಲಿ ಹಮ್ಮಿಕೊಂಡಿದ್ದಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆಸೂಚಿಸಿದ್ದರು. ಕಳೆದ ತಿಂಗಳು ಹಂಪಿ ರಥಬೀದಿಸೇರಿದಂತೆ ಪ್ರಮುಖ ಸ್ಮಾರಕ ಹತ್ತಿರ ಸ್ವತ್ಛತೆ ಅಭಿಯಾನನಡೆಸಿ ಖುದ್ದು ತಾವೇ ಸ್ವತ್ಛತಾ ಕಾರ್ಯ ಮಾಡಿಗಮನ ಸೆಳೆದಿದ್ದರು.
ಕಂಡು ಕಾಣದಂತೆ ಅಧಿ ಕಾರಿಗಳುಜಾಣಕುರುಡುತನ ಪ್ರದರ್ಶನ ಮಾಡುತ್ತಿರುವುದುಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ವಿಶ್ವವಿಖ್ಯಾತಪ್ರವಾಸಿ ತಾಣದಲ್ಲಿ ಸ್ವತ್ಛತೆಯತ್ತ ಇಲಾಖೆಗಳುಗಮನ ಹರಿಸದಿರುವುದು ಅ ಧಿಕಾರಿಗಳನಿರ್ಲಕ್ಷ Â ಧೋರಣೆಗೆ ಹಿಡಿದ ಕೈನ್ನಡಿಯಾಗಿದೆ ಎಂದು ಸ್ಥಳೀಯ ಆಟೋ ಚಾಲಕರ ಸಂಘದ ಅಧ್ಯಕ್ಷ ಬಿ.ರಾಘವೇಂದ್ರ, ಮಾಜಿ ಅಧ್ಯಕ್ಷ ಟಿ. ಪಂಪಾಪತಿ, ಗುನ್ನಿಪಂಪಾಪತಿ, ಕೊಲುಮೆ ಹನುಮಂತ, ಅನೀಪ್‌ಸಾಬ್, ಗೈಡ್ ಸಿ. ಹುಲಗಪ್ಪ, ಕುರುಬರ ಕೃಷ್ಣಆರೋಪಿಸಿದ್ದಾರೆ