Advertisement

ಹುಬ್ಬಳ್ಳಿ-ಚೆನ್ನೈ ಎಕ್ಸ್‌ಪ್ರೆಸ್‌ ರೈಲಿಗೆ ಸ್ವಾಗತ

01:37 PM Sep 15, 2019 | Team Udayavani |

ಹೊಸಪೇಟೆ: ಹಗಲು ವೇಳೆಯಲ್ಲಿ ಹೊಸಪೇಟೆಯಿಂದ ಬೆಂಗಳೂರಿಗೆ ಇಂಟರ್‌ಸಿಟ್ ರೈಲು ಸಂಚಾರಕ್ಕಾಗಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ವೈ. ದೇವೇಂದ್ರಪ್ಪ ಹೇಳಿದರು.

Advertisement

ಹುಬ್ಬಳ್ಳಿ ಶನಿವಾರ ಸಂಚಾರ ಆರಂಭಿಸಿರುವ ನೂತನ ಹುಬ್ಬಳ್ಳಿ-ಚೆನ್ನೈ ಎಕ್ಸ್‌ಪ್ರೆಸ್‌ ರೈಲಿಗೆ ಸ್ಥಳೀಯ ರೈಲ್ವೆ ನಿಲ್ದಾಣದಲ್ಲಿ ಸ್ವಾಗತಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸಪೇಟೆ-ಬೆಂಗಳೂರು ನಡುವೆ ನೂತನ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳುವಂತೆ ಕೇಂದ್ರ ರೈಲ್ವೆ ಸಚಿವ ಸುರೇಶ್‌ ಅಂಗಡಿ ಅವರಲ್ಲಿ ಮನವಿ ಮಾಡಿಕೊಳ್ಳಲಾಗುವುದು. ಸಚಿವರು, ಈ ಭಾಗದ ಜನರ ಬೇಡಿಕೆಯನ್ನು ಖಂಡಿತವಾಗಿ ಈಡೇರಿಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.

ಸ್ಥಳೀಯ ರೈಲ್ವೆ ನಿಲ್ದಾಣದಲ್ಲಿ 20 ಕೋಟಿ ರೂ ವೆಚ್ಚದಲ್ಲಿ ಪ್ಲಾಟ್ಫಾರಂ ವಿಸ್ತರಣೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಅಗತ್ಯ ಬಿದ್ದಲ್ಲಿ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಹುಬ್ಬಳ್ಳಿ ಚೆನ್ನೆ ಎಕ್ಸ್‌ಪ್ರೆಸ್‌ ರೈಲು ಓಡಾಟದಿಂದ ಹುಬ್ಬಳ್ಳಿ, ಗದಗ, ಕೊಪ್ಪಳ ಹಾಗೂ ಬಳ್ಳಾರಿ ಇತರೆ ಭಾಗಗಳ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ನೈರುತ್ಯ ರೈಲ್ವೆ ವಲಯದ ಬಳಕೆದಾರರ ಸಲಹಾ ಸಮಿತಿಯ ಸದಸ್ಯ ಬಾಬುಲಾಲ್ ಜಿ ಜೈನ್‌ ಅವರಿಗೆ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾಸಮಿತಿ ಅಧ್ಯಕ್ಷ ವೈ.ಯಮುನೇಶ್‌, ಕೆ.ಮಹೇಶ್‌, ಹಾಗೂ ಉಪಾಧ್ಯಕ್ಷ ದೀಪಕ್‌ಉಳ್ಳಿ, ಅನಂತಪದ್ಮನಾಭ ಸ್ವಾಮಿ, ಸಾಲಿಸಿದ್ದಯ್ಯ ಸ್ವಾಮಿ, ಕಟಗಿ ರಾಮಕೃಷ್ಣ, ಎಂ.ಉಮೇಶ್‌, ರೈಲ್ವೆ ಸಿಓಎಸ್‌, ನಾರಾಯಣಪ್ಪ, ಎಂ.ರಾಮಣ್ಣ, ತಮಿಳು ಸಂಘದ ಮುಖಂಡರಾದ ಎ.ಅಳಗಿರಿ ಸ್ವಾಮಿ, ಚಿನ್ನಪ್ಪನ್‌, ಪಯ ಗಣೇಶ್‌,ಅಣ್ಣಮೈಲೆ, ಧರ್ಮಲಿಂಗಂ, ಲೋಕನಾಥ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next