Advertisement

ಹಂಪಿ ಸ್ಮಾರಕ ವಿವರಗಳ ಆ್ಯಪ್‌ ಬಿಡುಗಡೆ

03:15 PM Jan 13, 2020 | Naveen |

ಹೊಸಪೇಟೆ: ಹಂಪಿ ಉತ್ಸವದ ಅಂಗವಾಗಿ ಶ್ರೀ ಕೃಷ್ಣದೇವರಾಯ ವೇದಿಕೆ (ಗಾಯತ್ರಿ ಪೀಠ)ಯಲ್ಲಿ ಡಿಜಿಟೂರ್‌ ಆ್ಯಪ್‌ನ್ನು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿ ವ ಸಿ.ಟಿ.ರವಿ ಲೋಕಾರ್ಪಣೆ ಮಾಡಿದರು.

Advertisement

ಪ್ರತಿ ಸ್ಮಾರಕಗಳ ವಾಸ್ತು ಶಿಲ್ಪಗಳ ವಿವರ ಮತ್ತು ಐತಿಹಾಸಿಕ ಮಾಹಿತಿ ಮುಂತಾದವುಗಳ ಬಗ್ಗೆ ಹಲವು ಭಾಷೆಗಳಲ್ಲಿ ಸವಿವರವಾಗಿ ಮಾಹಿತಿಯನ್ನು ನೀಡುತ್ತದೆ. ಈ ತಂತ್ರಜ್ಞಾನವನ್ನು 2 ತಿಂಗಳುಗಳ ಕಾಲ ಪ್ರವಾಸಿಗರಿಗೆ ಉಚಿತವಾಗಿ ನೀಡಲಾಗಿದೆ ಎಂದರು. ಕರ್ನಾಟಕದ ಹಲವು ಸ್ಮಾರಕಗಳ ಮಾಹಿತಿ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಸ್ಮಾರಕಗಳ ಮಾಹಿತಿ ಅಳವಡಿಸಲಾಗುತ್ತದೆ. ಡಿಜಿಟೂರ್‌ ಎಂಬ ಸಂಸ್ಥೆಯು ಐತಿಹಾಸಿಕ ಸ್ಮಾರಕಗಳ ಮಾಹಿತಿಯನ್ನು ಹೊಸ ತಂತ್ರಜ್ಞಾನವನ್ನು ಬಳಸಿ ಪ್ರವಾಸಿಗರಿಗೆ ಧ್ವನಿ ಮತ್ತು ದೃಶ್ಯ ಮಾಧ್ಯಮಗಳ ಮೂಲಕ ಮೊಬೈಲ್‌ನಲ್ಲಿ ಮಾಹಿತಿ ನೀಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ರಾಜ್ಯ ಪ್ರವಾಸೋದ್ಯಮ ಇಲಾಖೆಯ ಐಡಿಯಾ ಟೂ ಪೋಕ್‌ (ಪಿಒಸಿ) ಯೋಜನೆಯಡಿಯಲ್ಲಿ ಡಿಜಿಟೂರ್‌ ಸಂಸ್ಥೆಯು ಈ ಅನ್ವೇಷಣೆಯನ್ನು ಕೈಗೊಂಡು ಡಿಜಿಟೂರ್‌ ಮೊಬೈಲ್‌ ಆ್ಯಪ್‌ನ್ನು ಅಭಿವೃದ್ಧಿಪಡಿಸಲಾಗಿದೆ.

ಪ್ರವಾಸಿಗರು, ವಿದ್ಯಾರ್ಥಿಗಳು, ಇತಿಹಾಸಕಾರರು ಆ್ಯಡ್‌ರೊಡ್‌ ಪ್ಲೇ ಸ್ಟೋರ್‌ ಮತ್ತು ಆ್ಯಪ್‌ ಸ್ಟೋರ್‌ಗಳಲ್ಲಿ ಆ್ಯಪ್‌ ಡೌನ್‌ ಲೋಡ್‌ ಮಾಡಿಕೊಳ್ಳಬಹುದು ಎಂದರು. ಈ ಸಂದರ್ಭದಲ್ಲಿ ಶಾಸಕ ಆನಂದಸಿಂಗ್‌, ಲೋಕಸಭಾ ಸದಸ್ಯ ವೈ. ದೇವೇಂದ್ರಪ್ಪ, ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌, ತಾಪಂ ಸದಸ್ಯ ಪಾಲಪ್ಪ, ಅಂಚೆ ಇಲಾಖೆಯ ವೀಣಾ ಶ್ರೀವಾತ್ಸವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ರಂಗಪ್ಪ, ಪ್ರೊಬೆನಷರಿ ಐಎಎಸ್‌ ಈಶ್ವರ್‌ ಕಾಂಡೂ, ಅಪರ ಜಿಲ್ಲಾಧಿಕಾರಿ ಪಿ.ಎಸ್‌. ಮಂಜುನಾಥ ಸೇರಿದಂತೆ ಡಿಜಿಟೂರ್‌ ಆ್ಯಪ್‌ ಸಂಸ್ಥೆಯ ಸ್ಥಾಪಕರಾದ ಆನಂದಬಾಬು, ಶಶಿಧರ್‌, ಹರೀಶ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next