Advertisement

Hosapete; ಗಾಂಜಾ ಮಾರಾಟ ಜಾಲ ಪತ್ತೆ: ಮಹಿಳೆ ಸೇರಿ ಮೂವರ ಬಂಧನ

12:29 PM Jul 27, 2023 | Team Udayavani |

ಹೊಸಪೇಟೆ: ಅಕ್ರಮ ಗಾಂಜಾ‌‌‌ ಮಾರಾಟ ಜಾಲವನ್ನು‌ ಪತ್ತೆ ಹಚ್ಚಿರುವ ವಿಜಯನಗರ‌‌ ಜಿಲ್ಲಾ ಪೊಲೀಸರು, ಇಲ್ಲಿನ‌ 31ನೇ ವಾರ್ಡಿನ ಗಾಂಧಿ ಕಾಲೋನಿಯ ಹೆಚ್ ಎಲ್ ಸಿ ಕಾಲುವೆಯ ಬಳಿ ಗಾಂಜಾ ಮಾರಾಟ ನಡೆಸುತ್ತಿದ್ದ ಓರ್ವ‌ ಮಹಿಳೆ ಸೇರಿದಂತೆ ಮೂವರು ಆರೋಪಿಗಳನ್ನು‌ ಗುರುವಾರ ಬಂಧಿಸಿದ್ದಾರೆ.

Advertisement

ಘಟನೆಯಲ್ಲಿ ‌560 ಗ್ರಾಂ ತೂಕದ ಅಂದಾಜು 28‌ ಸಾವಿರ ರೂ ಬೆಲೆಬಾಳುವ ಗಾಂಜಾ, 3.83,100‌‌‌‌ ನಗದು, 35 ಸಾವಿರ ರೂ ಬೆಲೆಯ ಪ್ಯಾಸೆಂಜರ್ ಆಟೋ ಸೇರಿದಂತೆ ಒಟ್ಟು 4,46.100 ರೂ ಮೌಲ್ಯದ ವಸ್ತುಗಳನ್ನು ಬಡವಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ:ಉಡುಪಿ ಕಾಲೇಜು ಘಟನೆ: ಎಬಿವಿಪಿ ಪ್ರತಿಭಟನೆ; ಪೊಲೀಸರೊಂದಿಗೆ ವಾಗ್ವಾದ

ಈ ಪ್ರಕರಣ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದು, ಗಾಂಜಾ ಮಾರಾಟದ ಜಾಲದ‌ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು‌ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next