Advertisement

ಸಕ್ಕರೆ ಕಾರ್ಖಾನೆ ಪುನಾರಂಭಕ್ಕೆ ಒತ್ತಾಯ

04:04 PM Apr 12, 2019 | Naveen |

ಹೊಸಪೇಟೆ: ಸ್ಥಗಿತಗೊಂಡಿರುವ ಚಿತ್ತವಾಡ್ಗಿ ಐಎಸ್‌ಆರ್‌ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಐಎಸ್‌ಆರ್‌ ಕಾರ್ಖಾನೆ ಅಚ್ಚುಕಟ್ಟು ಪ್ರದೇಶದ ರೈತರು ಚಿತ್ತವಾಡ್ಗೆಪ್ಪ ದೇವಾಲಯದ ಆವರಣದಲ್ಲಿ ಗುರುವಾರ ಸಭೆ ನಡೆಸಿದರು.

Advertisement

ಕಬ್ಬಿನ ಬಾಕಿ ಹಣದ ವಿಷಯ ಕುರಿತಂತೆ ರೈತರು ಹಾಗೂ ಮಾಲೀಕರ ನಡುವಿನ ಹೊಂದಾಣಿಕೆ ಕೊರತೆಯಿಂದಾಗಿ ಕಾರ್ಖಾನೆ ಸ್ಥಗಿತಗೊಳ್ಳಲು ಕಾರಣವಾಗಿದೆ. ಕಾರ್ಖಾನೆ ಪುನಾರಂಭಕ್ಕೆ ರೈತ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪಕ್ಷ ಬೇಧ ಮರೆತು ಸರ್ಕಾರದ ಮೇಲೆ ಒತ್ತಡ ಹಾಕಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಹೊಸಪೇಟೆ ರೈತ ಸಂಘದ ಅಧ್ಯಕ್ಷ ಗುಜ್ಜಲ
ಹನುಮಂತಪ್ಪ , ಈ ಹಿಂದಿನ ಎಲ್ಲಾ ಸಂಘಟನೆಗಳ ಪದಾಧಿಕಾರಿಗಳು ಕಾರ್ಖಾನೆಯ ಮಾಲೀಕರ ಜೊತೆ ಸೌಹಾರ್ದಯುತವಾಗಿ ಮಾತನಾಡಿ, ಕಾರ್ಖಾನೆ ಆರಂಭಿಸಬೇಕಿದೆ. ಕಬ್ಬು ಬೆಳೆಗಾರರಿಗೆ ಆಗುವ ಹಾನಿ ತಪ್ಪಿಸಲು
ಸ್ಥಳಿಯ ಕಾರ್ಖಾನೆ ಕೂಡಲೇ ಆರಂಭವಾಗಬೇಕಿದೆ. ಕಬ್ಬು ಬೆಳೆಗಾರರ ಹಿತಾಸಕ್ತಿಗೆ ಧಕ್ಕೆಯಾಗದಂತೆ ಕಾರ್ಖಾನೆಯ ಆಡಳಿತ ವರ್ಗದ ಜೊತೆ ಮಾತನಾಡುತ್ತೇವೆ ಹಾಗೂ ಕಾರ್ಖಾನೆ ಆರಂಭಿಸಲು ಏನಾದರೂ ಅಡೆತಡೆ ಇದ್ದರೆ ಸರ್ಕಾರದ ಮನವೊಲಿಸಿ ಎಲ್ಲಾ ಬಗೆಯ ಸಹಾಯ ನೀಡಲು
ಸಿದ್ಧರಾಗಿದ್ದೇವೆ. ಆದ್ದರಿಂದ ರೈತರು ಐಕ್ಯತೆಯಿಂದ ಕಾರ್ಖಾನೆಯ ಮಾಲೀಕರ
ಮೇಲೆ ಒತ್ತಡ ತಂದು ಕಬ್ಬು ನುರಿಯುವ ಕೆಲಸಕ್ಕೆ ಚಾಲನೆ ನೀಡಬೇಕು ಎಂದರು.

ರೈತ ಮುಖಂಡ ವೈ.ಯಮುನೇಶ್‌ ಮಾತನಾಡಿ, ತುಂಗಭದ್ರಾ ಜಲಾಶಯ
ವ್ಯಾಪ್ತಿಯ ಹೊಸಪೇಟೆ ತಾಲೂಕು ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ವಾರ್ಷಿಕವಾಗಿ 4 ಲಕ್ಷ ಟನ್‌ ಕಬ್ಬನ್ನು ಬೆಳೆಯಲಾಗುತ್ತಿದೆ. ಸ್ಥಳೀಯ ಐಎಸ್‌ಆರ್‌ ಸಕ್ಕರೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡುವ ಪದ್ಧತಿ
ಇದೆ. ಆದರೆ ಕಾರ್ಖಾನೆಯಿಂದ ರೈತರಿಗೆ ಪಾವತಿಯಾಗಬೇಕಿದ್ದ ಕಬ್ಬಿನ ಹಳೇ
ಬಾಕಿಗೆ ಸಂಬಂಧಿಸಿದಂತೆ ರೈತರು ಮತ್ತು ಕಾರ್ಖಾನೆಯವರ ಮಧ್ಯೆ ವಿವಾದದಿಂದಾಗಿ ಕಳೆದ ಮೂರ್‍ನಾಲ್ಕು ವರ್ಷಗಳಿಂದ
ಕಾರ್ಖಾನೆ ಕಬ್ಬು ಅರೆಯುವುದನ್ನು ಸ್ಥಗಿತಗೊಳಿಸಿರುವುದರಿಂದ ರೈತರು
ಕಬ್ಬನ್ನು ಕಡಿಮೆ ಬೆಲೆಗೆ ಬೆಲ್ಲದ ಗಾಣ ಹಾಗೂ ದೂರದ ಸಕ್ಕರೆ ಕಾರ್ಖಾನೆಗಳಿಗೆ
ಸಾಗಿಸುತ್ತಾ ಅಪಾರವಾದ ನಷ್ಟಕ್ಕೆ ಈಡಾಗಿದ್ದಾರೆ. ಕಾರ್ಖಾನೆ ಸಕ್ಕರೆ
ಉತ್ಪಾದನೆ ಬಂದ್‌ ಮಾಡಿರುವುದರಿಂದ ಅಲ್ಲಿ ಕೆಲಸ ಮಾಡುತ್ತಿದ್ದ ನೂರಾರು
ಕುಟುಂಬಗಳು ಬೀದಿ ಪಾಲಾಗಿವೆ.

ಆದ್ದರಿಂದ ಕಾರ್ಖಾನೆಯ ಆಡಳಿತ ವರ್ಗ ಕರ್ಮಿಕರು ಹಾಗೂ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಕಾರ್ಖಾನೆಯು 2019-20ನೇ ಸಾಲಿನಿಂದ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ನೀಡಬೇಕು. ಕಾರ್ಖಾನೆ ಆರಂಭವಾದರೆ ನೂರಾರು ಕೋಟಿ ರೂ. ಹಣ ಮಾರುಕಟ್ಟೆಯಲ್ಲಿ ಚಲಾವಣೆಯಾಗಿ ವ್ಯಾಪಾರ ವಹಿವಾಟು ವೃದ್ದಿಯಾಗುವುದಲ್ಲದೆ, ಅಸಂಘಟಿತ ವಲಯದಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತದೆ. ರೈತರಿಗೂ ಸ್ಥಳೀಯವಾಗಿ
ಕಬ್ಬಿಗೆ ಉತ್ತಮ ಬೆಲೆ ದೊರೆಯುತ್ತದೆ ಎಂದರು.

Advertisement

ರೈತ ಮುಖಂಡ ಗುದ್ದಲಿ ಪರಶುರಾಮ ಮಾತನಾಡಿ, ರಾಜ್ಯದ ಬಹುತೇಕ ಸಕ್ಕರೆ
ಕಾರ್ಖಾನೆಗಳಲ್ಲಿ ಅಲ್ಲಿನ ರೈತರಿಗೆ ಹಳೆ ಬಾಕಿ ಪಾವತಿಯ ವಿವಾದವಿದ್ದರೂ
ಕಾರ್ಖಾನೆಯ ಮಾಲೀಕರು ಮತ್ತು ರೈತರ ನಡುವೆ ಸೌಹಾರ್ದಯುತ ಒಪ್ಪಂದ
ಮಾತುಕತೆ ಫ‌ಲವಾಗಿ ಕಾರ್ಖಾನೆಗಳು ಕಬ್ಬು ಅರೆಯುವುದನ್ನು ನಿಲ್ಲಿಸಿಲ್ಲ. ಆದ್ದರಿಂದ ಈ ಭಾಗದ ಆರ್ಥಿಕ ಚಟುವಟಿಕೆಗಳ ಜೀವನಾಡಿಯಂತಿರುವ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಸರ್ಕಾರ ಚಾಲನೆ ನೀಡಬೇಕಿದೆ. ನಗರದ ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳು, ಸಾರ್ವಜನಿಕ ಸಂಘ ಸಂಸ್ಥೆಗಳು, ಪಕ್ಷಾತೀತವಾಗಿ ಕಾರ್ಖಾನೆ ಆರಂಭಿಸಲು ಶ್ರಮಿಸಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಗೌಡ್ರ ರಾಮಚಂದ್ರಪ್ಪ, ಖಾಜಾಹುಸೇನಿ ನಿಯಾಜಿ, ಜಂಬಾನಹಳ್ಳಿ ವಸಂತ ಕುಮಾರ, ಸತ್ಯನಾರಾಯಣ, ಗುಜ್ಜಲರಾಮಣ್ಣ, ಎಸ್‌.ಗಾಳೆಪ್ಪ, ಹಾಗೂ ನೂರಾರು ಕಬ್ಬು ಬೆಳೆಗಾರರು ಪಾಲ್ಗೊಂಡಿದ್ದರು.

ರಾಜ್ಯದ ಬಹುತೇಕ ಸಕ್ಕರೆ ಕಾರ್ಖಾನೆಗಳಲ್ಲಿ ಅಲ್ಲಿನ ರೈತರಿಗೆ ಹಳೆ ಬಾಕಿ ಪಾವತಿಯ ವಿವಾದವಿದ್ದರೂ ಕಾರ್ಖಾನೆಯ ಮಾಲೀಕರು ಮತ್ತು ರೈತರ ನಡುವೆ ಸೌಹಾರ್ದಯುತ ಮಾತುಕತೆ ಮೂಲಕ ಕಾರ್ಖಾನೆಗಳು ಕಬ್ಬು ಅರೆಯುವುದನ್ನು ನಿಲ್ಲಿಸಿಲ್ಲ. ಆದ್ದರಿಂದ ಈ ಭಾಗದ ಆರ್ಥಿಕ ಚಟುವಟಿಕೆಗಳ ಜೀವನಾಡಿಯಂತಿರುವ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಸರ್ಕಾರ ಚಾಲನೆ ನೀಡಬೇಕಿದೆ. ನಗರದ ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಪಕ್ಷಾತೀತವಾಗಿ ಕಾರ್ಖಾನೆ ಆರಂಭಿಸಲು ಶ್ರಮಿಸಬೇಕು.
ಗುದ್ದಲಿ ಪರಶುರಾಮ,
ರೈತ ಮುಖಂಡ.

Advertisement

Udayavani is now on Telegram. Click here to join our channel and stay updated with the latest news.

Next