Advertisement

ನೆರೆ ಸಂತ್ರಸ್ತರಿಗೆ ನೆರವಿನ ಮಹಾಪೂರ

01:38 PM Aug 19, 2019 | Naveen |

ಹೊಸಪೇಟೆ: ನಗರದ ಶ್ರೀಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ವತಿಯಿಂದ ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ 5 ಲಕ್ಷ ರೂ.ದೇಣಿಗೆ ನೀಡಿದರು.

Advertisement

ಶ್ರೀಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಪೀಠಾಧಿಪತಿ ಡಾ| ಸಂಗನಬಸವ ಶ್ರೀ 5 ಲಕ್ಷ ರೂ. ಚೆಕ್‌ನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಕಳುಹಿಸಿದರು.

ಸಿದ್ದರಾಮಯ್ಯ ಅಭಿಮಾನಿ ಬಳಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮಾನ ಬಳಗ ಹಾಗೂ ನವರತ್ನ ಯುವಕರ ಮಂಡಳಿ ವತಿಯಿಂದ ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತು ಹಾಗೂ ಆಹಾರ ಪದಾರ್ಥಗಳನ್ನು ರವಾನಿಸಲಾಯಿತು. ರವಿಕುಮಾರ್‌, ಸುಬ್ರಮಣ್ಯಂ, ಸಣ್ಣ ಮಾರೆಪ್ಪ, ಮಲ್ಲಿಕಾರ್ಜುನ, ರವಿಕುಮಾರ್‌, ರಘುಕುಮಾರ್‌, ಕನ್ನಪ್ಪ, ಭೋಜರಾಜ್‌, ಹೊನ್ನೂರಸ್ವಾಮಿ, ಎರಿಸ್ವಾಮಿ, ಕೊಟ್ರೇಶ್‌, ವಿನೋದ್‌, ಮಂಜು, ಅಪ್ಪಯ್ಯ, ರಾಜ, ಆನಂದ, ಗಂಗಮ್ಮ, ಮಂಜುಳಾ ಹಾಗೂ ವಿಜಯಮ್ಮ ಇನ್ನಿತರರಿದ್ದರು.

ಕೆಎಸ್‌ಪಿಎಲ್ ಶಾಲೆ: ನಗರದ ಕೆಎಸ್‌ಪಿಎಲ್ ಶಾಲೆಯಲ್ಲಿ ಮಾರುಕಟ್ಟೆ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಮಕ್ಕಳ ಮಾರುಕಟ್ಟೆಯಲ್ಲಿ ಬಂದ ಹಣವನ್ನು ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ರವಾನಿಸಿದರು. ಶ್ರೀ ಕೃಷ್ಣ ಸಾಯಿ ಎಜ್ಯುಕೇಶನ್‌ ಟ್ರಸ್ಟ್‌ ಕಾರ್ಯದರ್ಶಿ ಶ್ರೀಮತಿ ಕೃಷ್ಣ ಕುಮಾರಿ ಮಕ್ಕಳಿಂದ ನೆರೆ ಸಂತ್ರಸ್ತರ ದೇಣಿಗೆ ಸಂಗ್ರಹಿಸಿದರು. ಶಿಕ್ಷಕರು,ವಿದ್ಯಾರ್ಥಿ ಹಾಗೂ ಪಾಲಕರು ಹಾಜರಿದ್ದರು.

ಪಿಡಿಐಟಿ ಕಾಲೇಜ್‌: ಪಿಡಿಐಟಿ ಕಾಲೇಜಿನ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ ಮತ್ತು ಲೀಡ್‌ ಘಟಕದ ವಿದ್ಯಾರ್ಥಿ ಬಳಗ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ 1 ಲಕ್ಷ ರೂ. ಅಧಿಕ ಮೌಲ್ಯದ ಆಹಾರ ಪದಾರ್ಥ ಹಾಗೂ ದಿನಬಳಕೆ ವಸ್ತುಗಳನ್ನು ರವಾನಿಸಿದರು. ಪ್ರಾಚಾರ್ಯ ಡಾ| ಎಸ್‌.ಎಂ. ಶಶಿಧರ್‌, ವಿದ್ಯಾರ್ಥಿ ಮುಖಂಡರಾದ ಚಂದ್ರಕುಮಾರ್‌ ಚಕ್ರಸಾಲಿ ಹಾಗೂ ಆರ್‌.ನವೀನ್‌ ಇನ್ನಿತರರಿದ್ದರು.

Advertisement

ನಗರದ ಶಂಕರ್‌ ಆನಂದ್‌ ಸಿಂಗ್‌ ಕಾಲೇಜ್‌: ನಗರದ ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ ವತಿಯಿಂದ ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ 3 ಲಕ್ಷಕ್ಕೂ ಆಧಿಕ ಮೌಲ್ಯದ ಧವಸ-ಧಾನ್ಯ, ತರಕಾರಿ ಹಾಗೂ ಬಟ್ಟೆ, ಬರೆಗಳನ್ನು ರವಾನಿಸಿದರು. ಗದಗ ಜಿಲ್ಲೆಯ ರೋಣ ಹೊಳೆ ಆಲೂರು ಸುತ್ತಮುತ್ತ ಲಿನ ಗ್ರಾಮಕ್ಕೆ ತೆರಳಿದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ತಂಡ, ಮೂರು ದಿನಗಳ ಕಾಲ ಶ್ರಮಾದಾನ ನಡೆಸಿದರು. ಬಳಿಕ ಸಂತ್ರಸ್ತರಿಗೆ ಆಹಾರ ಪದಾರ್ಥ, ಬಟ್ಟೆ ಬರೆ ವಿತರಣೆ ಮಾಡಿದರು. ಕಾಲೇಜ್‌ ಪ್ರಾಂಶುಪಾಲ ಡಾ| ಬಿ.ಜಿ.ಕನಕೇಶ ಮೂರ್ತಿ, ಉಪನ್ಯಾಸಕರಾದ ಡಾ| ಟಿ. ಎಚ್.ಬಸವರಾಜ, ಡಾ| ಡಿ.ಎಂ.ಮಲ್ಲಿಕಾರ್ಜುನ, ಡಾ| ಕೆ.ವೆಂಕಟೇಶ್‌, ಡಾ| ನಾಗಣ್ಣ, ಕೆ.ಶಿವಪ್ಪ, ವಾರಣಿ, ಪಿ.ಸಿ.ರೂಪಾ, ಕೆ.ಸಿ.ಗದಿಗೇಶ್‌, ಗ್ರಂಥಪಾಲಕ ಎ.ಜಿ. ವೀರಭದ್ರಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ಮಂಜುನಾಥ ಆರೆಂಟ್ನೂರು ಹಾಗೂ ವಿದ್ಯಾರ್ಥಿಗಳು ಇದ್ದರು.

ವಿಜಯನಗರ ಕಾಲೇಜು: ನಗರದ ವಿಜಯನಗರ ಕಾಲೇಜ್‌ ವತಿಯಿಂದ ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ನೆರವಿಗಾಗಿ 51 ಸಾವಿರ ರೂ ಪರಿಹಾರದ ಚೆಕ್‌ನ್ನು ಉಪವಿಭಾಗಾಧಿಕಾರಿಗಳಿಗೆ ನೀಡುವ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ರವಾನಿಸಿದರು. ಕಾಲೇಜ್‌ ಆಡಳಿತ ಮಂಡಳಿ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ, ಉಪನ್ಯಾಸಕರಾದ ಅಶೋಕ್‌ ಪತ್ತಾರ್‌, ಪ್ರಕಾಶ್‌ ಕಟ್ಟಿಮನಿ, ಚಂದ್ರಶೇಖರ ಶಾಸ್ತ್ರಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next