Advertisement

Hosanagara: ಕೊಲ್ಲೂರು ಹೆದ್ದಾರಿ ಎಬಗೋಡು ಪಕ್ಕದಲ್ಲೇ ನಿಧಿ ಶೋಧ

01:16 PM Dec 13, 2024 | Kavyashree |

ಹೊಸನಗರ: ರಾಣೆಬೆನ್ನೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಕೊಲ್ಲೂರು ಮಾರ್ಗದ ಎಬಗೋಡು ಬಳಿ ಹೆದ್ದಾರಿ ಪಕ್ಕದಲ್ಲೇ ನಿಧಿಯಾಸೆಗಾಗಿ ಗುಂಡಿ ತೋಡಿದ ಘಟನೆ ಡಿ.12ರ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

Advertisement

ಎಬಗೋಡು ಹೆದ್ದಾರಿಗೆ ತಾಗಿಕೊಂಡಂತಿರುವ ಧರೆಯ ಮೇಲ್ಭಾಗದಲ್ಲಿ ಶಿವಲಿಂಗದ ಕೆತ್ತನೆಯಿರುವ ಕಲ್ಲಿದ್ದು, ಅದರ ಪಕ್ಕದಲ್ಲೇ ಗುಂಡಿ ತೋಡಲಾಗಿದೆ. ಶಿವಲಿಂಗ ಕಲ್ಲಿಗೆ ಅರಶಿಣ, ಕುಂಕುಮ ಹಚ್ಚಿದ್ದು, ಪಕ್ಕದ ಬೃಹತ್ ಮರದ ಪೊಟರೆಯೊಳಗೆ ಹೂವಿನ ಹಾರ ಕಂಡು ಬಂದಿದೆ. ಸುತ್ತಲೂ ಅಲ್ಲಲ್ಲಿ ಲಿಂಬೆಹಣ್ಣು ಎಸೆದಿರುವುದು ಕಂಡು ಬಂದಿದೆ. ನಿಧಿಯಾಸೆಗೆ ಈ ಘಟನೆ ನಡೆದಿರುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಹೆದ್ದಾರಿಯಿಂದ ಹೆಚ್ಚೆಂದರೆ 10-20 ಅಡಿ ಅಂತರದಲ್ಲಿ ಈ ಕೃತ್ಯ ಎಸಗಲಾಗಿದೆ. 2 ವರ್ಷದ ಹಿಂದೆ ಪಕ್ಕದ ಶ್ರೀಧರ ಗುಡ್ಡದ ಮೇಲ್ಭಾಗದಲ್ಲಿರುವ ಶಿವಲಿಂಗದ ಕೆತ್ತನೆಯಿರುವ ಕಲ್ಲಿನ ಪಕ್ಕದಲ್ಲಿ ಇದೇ ಮಾದರಿ ಘಟನೆ ನಡೆದಿತ್ತು.

ನಗರ ಭಾಗದಲ್ಲಿ ಹಲವು ವರ್ಷಗಳಿಂದ ನಿಧಿಗಾಗಿ ಶೋಧ ನಡೆಸುವ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಬಂದಿದೆ. ಸಮಾಧಿ ಸ್ಥಳ, ಗಳಿಗೆ ಬಟ್ಟಲು, ಬರೇಕಲ್ ಬತೇರಿ, ಅರೋಡಿ, ಬಸವನಬ್ಯಾಣ, ದರಗಲ್ ಗುಡ್ಡ ಸೇರಿದಂತೆ ಇತಿಹಾಸ ಮಹತ್ವದ ಸ್ಥಳಗಳನ್ನು ಕೂಡ ನಿಧಿಯಾಸೆಗಾಗಿ ಲೂಟಿಕೂರರು ಧ್ವಂಸಗೊಳಿಸಿದ್ದರು.

Advertisement

Advertisement

Udayavani is now on Telegram. Click here to join our channel and stay updated with the latest news.

Next