ಹೊಸನಗರ: ತಾಲೂಕಿನ ನಗರ ಮತ್ತುಹುಂಚಾ ಹೋಬಳಿಯಲ್ಲಿ ಅಂದಾಜು 6200ಬಗರ್‌ಹುಕುಂ ಅರ್ಜಿಗಳು ವಿಲೇವಾರಿಗೆಬಾಕಿ ಇದ್ದು ಅರ್ಹ ಫಲಾನುಭವಿಗಳಿಗೆ ಭೂಹಕ್ಕು ನೀಡುವಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ನಗರ ಮತ್ತುಹುಂಚಾ ಹೋಬಳಿ ಬಗರ್‌ಹುಕುಂಸಮಿತಿಯ ನೂತನ ಅಧ್ಯಕ್ಷ ಬಂಕ್ರಿಬೀಡುಮಂಜುನಾಥ್ ತಿಳಿಸಿದ್ದಾರೆ.
ಪಟ್ಟಣದ ಗೃಹಸಚಿವರ ಕಚೇರಿಕಚೇರಿಯಲ್ಲಿ ಸುದ್ದಿಗಾರರೊಂದಿಗೆಮಾತನಾಡಿದ ಅವರು, ಯಾವುದೇ ಲಾಭಿಗೆಒಳಗಾಗದೆ ಭೂಹಕ್ಕಿನ ನಿರೀಕ್ಷೆಯಲ್ಲಿರುವರೈತರಿಗೆ ಹಕ್ಕುಪತ್ರ ನೀಡಲಾಗುವುದುಎಂದರು. ಅರ್ಜಿಗಳ ಪರಿಶೀಲನೆಮತ್ತು ಸರ್ವೇ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಹಕ್ಕುಪತ್ರ ಸಿಗುತ್ತದೆ ಎಂದುಕಾಡಿಗೆ ಬೇಲಿ ಹಾಕಿಕೊಂಡರೆ ನಾವುಜವಾಬ್ದಾರರಲ್ಲ. ಅರ್ಜಿ ಬಂದಿರುವ ಸ.ನಂ.ಅನ್ನು ಪರಿಶೀಲಿಸಿ ಎಷ್ಟು ವರ್ಷದಿಂದಅನುಭವದಲ್ಲಿದೆ ಮತ್ತು ಬೆಳೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. 57ಮತ್ತು 53ರಲ್ಲಿ ಅರ್ಜಿ ಹಾಕಿದ ರೈತರ ಬಗ್ಗೆವಿಶೇಷ ಮುತುವರ್ಜಿ ವಹಿಸಲಾಗುವುದು ಎಂದರು.
ಮಧ್ಯವರ್ತಿಗಳಿಗೆ ಅವಕಾಶವಿಲ್ಲ:ಈ ಹಿಂದೆ ಮಧ್ಯವರ್ತಿಗಳಸಹಾಯದಿಂದ ತಹಶೀಲ್ದಾರ್‌ಕಚೇರಿಗೆ ಅಲೆಯಬೇಕಾಗಿತ್ತು.ಆದರೆ ಇನ್ನು ಆ ಸಮಸ್ಯೆಇಲ್ಲ. ರೈತರು ಮಧ್ಯವರ್ತಿಗಳ ಮೊರೆಹೋಗದೆ ನೀವಿದ್ದಲ್ಲಿಗೆ ಬಂದು ಸರ್ವೇಅ ಧಿಕಾರಿಗಳು, ಗ್ರಾಮ ಲೆಕ್ಕಿಗರು ಮತ್ತುಕಂದಾಯ ನಿರೀಕ್ಷಕರ ವಾಸ್ತವ ವರದಿಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು.
ಈ ನಡುವೆಯೂ ಹಕ್ಕುಪತ್ರದ ಆಸೆತೋರಿಸಿ ಮಧ್ಯವರ್ತಿಗಳಿಗೆ ಹಣ ಕೊಟ್ಟುಕಳೆದುಕೊಂಡರೆ ನಾವು ಹೊಣೆಯಲ್ಲಎಂದು ಸ್ಪಷ್ಟ ಪಡಿಸಿದರು.ನಗರ ಹೋಬಳಿಯಲ್ಲಿ ವಿಶೇಷವಾಗಿಸೂಚಿತ ಅರಣ್ಯ, ಕೆಪಿಸಿಗೆ ಸೇರಿದಜಾಗದಲ್ಲಿ ಜನರು ವಾಸಿಸುತ್ತಿದ್ದು ಬಗರ್‌ಹುಕುಂಗೆ ಅರ್ಜಿ ಸಲ್ಲಿಸಲಾಗಿದೆ. ಈಬಗ್ಗೆ ಕೂಡ ಇತಿಮಿತಿಯೊಳಗೆ ಕಾರ್ಯನಿರ್ವಹಿಸಲಾಗುವುದು. ಬೇರೆ ಸ್ಥಳದಲ್ಲಿದ್ದುಇಲ್ಲಿ ಅರ್ಜಿ ಹಾಕಿದರೆ ಯಾವುದೇಕಾರಣಕ್ಕೂ ಹಕ್ಕುಪತ್ರ ನೀಡುವುದಿಲ್ಲ ಎಂದುಸ್ಪಷ್ಟಪಡಿಸಿದರು.ಕರಿಮನೆ ಗ್ರಾಪಂ ಮಾಜಿ ಅಧ್ಯಕ್ಷ ನರ್ತಿಗೆಸುರೇಶ್, ರಾಮಣ್ಣ ಇದ್ದರು.