Advertisement
ಸಾಲಗಾರರ ಕ್ಷೇತ್ರದಿಂದ 11 ಸ್ಥಾನ ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ 1 ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಜ.4 ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದ್ದು, ಒಟ್ಟು 30 ನಾಮಪತ್ರಗಳು ಸಲ್ಲಿಕೆಯಾಗಿದೆ. ಸಾಲಗಾರರ ಕ್ಷೇತ್ರದಿಂದ ಮೂಡುಗೊಪ್ಪ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಾಮಾನ್ಯ(1), ಸಾಮಾನ್ಯ ಮಹಿಳೆ(1), ಬಿಸಿಎಂ(ಎ)(2) ಮತ್ತು ಪಪಂ(1) ಸ್ಥಾನ, ಅರಮನೆಕೊಪ್ಪ ಗ್ರಾಪಂ ವ್ಯಾಪ್ತಿಯಲ್ಲಿ 2 ಸ್ಥಾನವಿದ್ದು, ಒಂದು ಮಹಿಳೆ ಮತ್ತು ಮತ್ತೂಂದು ಸಾಮಾನ್ಯಕ್ಕೆ ಮೀಸಲಾಗಿದೆ. ಅಂಡಗದೋದೂರು ಗ್ರಾಪಂ ವ್ಯಾಪ್ತಿಯಲ್ಲಿ 2 ಸ್ಥಾನಗಳಿದ್ದು, ಎರಡು ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಕರಿಮನೆ ಗ್ರಾಪಂ ವ್ಯಾಪ್ತಿಯಲ್ಲಿ 2 ಸ್ಥಾನಕ್ಕೆ ಆಯ್ಕೆ ನಡೆಯಬೇಕಿದ್ದು, ಒಂದು ಪರಿಶಿಷ್ಟ ಜಾತಿ ಮತ್ತೂಂದು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಒಟ್ಟು 11 ಸ್ಥಾನಗಳಿಗೆ ಮತ್ತು ಸಾಲ ಪಡೆಯದ ಕ್ಷೇತ್ರದಿಂದ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
Related Articles
Advertisement
ಒಟ್ಟು 30 ನಾಮಪತ್ರ: ಸಾಲಗಾರರ ಕ್ಷೇತ್ರದ 11 ಸ್ಥಾನಗಳಿಗೆ ನಾಮಪತ್ರ ಕೊನೆದಿನ ಶನಿವಾರ ಒಟ್ಟು 27 ನಾಮಪತ್ರ ಸಲ್ಲಿಕೆಯಾಗಿದೆ. ಸಾಲಗಾರರಲ್ಲದ ಕ್ಷೇತ್ರದ ಒಂದು ಸ್ಥಾನಕ್ಕೆ 3 ನಾಮಪತ್ರಗಳು ಸಲ್ಲಿಕೆಯಾಗಿವೆ.
ನಾಮಪತ್ರ ಸಲ್ಲಿಸಿದವರು: ಸಂಘದ ಅಧ್ಯಕ್ಷೆ ರೇಖಾ ಆದಿರಾಜ್, ಗ್ರಾಪಂ ಉಪಾಧ್ಯಕ್ಷ ಕರುಣಾಕರಶೆಟ್ಟಿ, ಸದಸ್ಯರಾದ ಹಿಲ್ಕುಂಜಿ ಕುಮಾರ್, ಮಾಜಿ ಸದಸ್ಯ ಬಿ.ಟಿ.ರಮೇಶ್, ಪ್ರಮುಖರಾದ ನಾಡಗಂಟಿ ಚಂದ್ರ ಶೇಖರ್, ವ್ಯಾಸರಾಯ ಆಚಾರ್, ಕಿಶೋರ್ ಸಿ.ವಿ, ಬಿ.ಟಿ.ಚಂದ್ರಪಪ್, ಎಚ್.ಕೆ.ಪ್ರದೀಪ್, ಎನ್.ಎಸ್.ನಾಗರಾಜ ಶೆಟ್ಟಿ, ಎಚ್.ಜಿ.ಚಂದ್ರನಾಯ್ಕ, ಬಿ.ಮಾರುತಿ, ಕೆ.ಜಿ.ಸುರೇಶ್, ರವಿರಾಜ್, ಬಿ.ಎಸ್. ಮಧುಕರಶೆಟ್ಟಿ, ಜಿ.ಸಿ.ರಾಜಶೇಖರ್, ಡಿ.ಎಸ್. ಗುರುರಾಜ, ಸುಮಿತ್ರ ಎಸ್.ಬಾಯಾರ್, ಎಸ್. ಎಂ ಹರೀಶ್, ಎಂ.ಎನ್.ವಿಠೊಬ, ವಿಶ್ವನಾಥ ಎಂ, ಉದಯಕುಮಾರ ಶೆಟ್ಟಿ, ಬಿ.ಈಶ್ವರಪ್ಪ, ಎಸ್. ಎಚ್.ಗುಂಡಪ್ಪ, ನಾಗಪ್ಪಗೌಡ, ಜಯಮ್ಮ, ಎಂ.ಕೆ. ಲೀಲಾಕೃಷ್ಣ, ಎಂ.ಎನ್.ತಿಮ್ಮಪ್ಪ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ನಗರ ನೀಲಕಂಠೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ ಮೂಡುಗೊಪ್ಪ, ಕರಿಮನೆ, ಅರಮನೆಕೊಪ್ಪ, ದೋದೂರು ವ್ಯಾಪ್ತಿಯ ಒಟ್ಟು 12 ಕ್ಷೇತ್ರಗಳಿಗೆ 30 ನಾಮಪತ್ರ ಸಲ್ಲಿಕೆಯಾಗಿವೆ. ಇದರಲ್ಲಿ ಸಾಲಗಾರರ ಕ್ಷೇತ್ರದ ಒಟ್ಟು 11 ಸ್ಥಾನ ಮತ್ತು ಸಾಲಗಾರರಲ್ಲದ ಕ್ಷೇತ್ರದ ಒಂದು ಸ್ಥಾನ ಕೂಡ ಸೇರಿದೆ. ಜ.4 ಅಂದರೆ ಶನಿವಾರ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿತ್ತು. ನಾಮಪತ್ರ ವಾಪಾಸ್ ಪಡೆಯಲು ಜನವರಿ 6 ಕಡೆ ದಿನವಾಗಿದೆ. ಮಂಜುನಾಥ ಒಡೆಯರ್, ರಿಟರ್ನಿಂಗ್ ಆಫೀಸರ್.