Advertisement
ಹೊಸನಗರ: ದುಬೈನಲ್ಲಿ ನ. 10ರಂದು ನಡೆದ 17 ವರ್ಷ ವಯೋಮಾನದೊಳಗಿನ ಅಂತಾರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯಲ್ಲಿ ಇಂಡಿಯಾ ವಿಜಯ ಪತಾಕೆ ಹಾರಿಸಿದೆ. ಮಲೆನಾಡ ಹುಡುಗ ಸನತ್ ಎಸ್. ಸತೀಶ ಗೌಡ, ಬೆಸ್ಟ್ ರೈಡರ್ ಆಗುವ ಮೂಲಕ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿ ಗಮನ ಸೆಳೆದಿದ್ದಾನೆ.
Related Articles
Advertisement
ಸನತ್ ಬೆಸ್ಟ್ ರೈಡರ್: ಮಲೆನಾಡ ಹುಡುಗ ಸನತ್ ಗೌಡ ಆಲ್‌ರೌಂಡರ್ ಆಗಿದ್ದು ಉತ್ತಮ ರೈಡ್ ಮೂಲಕ ಬೆಸ್ಟ್ ರೈಡರ್ ಪಟ್ಟವನ್ನು ಅಲಂಕರಿಸಿರುವುದು ಮಾತ್ರವಲ್ಲದೆ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ ಗಮನ ಸೆಳೆದಿದ್ದಾನೆ.
ಇಂಡಿಯಾ ತಂಡದಲ್ಲಿ ಕರ್ನಾಟಕದ ನಾಲ್ವರು: ಇಂಡಿಯಾ ತಂಡದಲ್ಲಿ ಹೊಸನಗರದ ಸನತ್, ತೀರ್ಥಹಳ್ಳಿಯ ಕಾರ್ತಿಕ್ ಮತ್ತು ಶಿರಸಿಯ ಪವನ್, ಬೆಂಗಳೂರಿನ ವಿಜಯ್, ಬೆಂಗಳೂರು ಗ್ರಾಮಾಂತರದ ಪ್ರಭು ಪ್ರತಿನಿಧಿಸಿದ್ದರು. ಉಳಿದಂತೆ ತಮಿಳುನಾಡಿನ ವಿಜಯ್, ಮಹಾರಾಷ್ಟ್ರದ ಕನಿಷ್R, ಉತ್ತರ ಪ್ರದೇಶದ ವಿನೋದ್ ಕೂಡ ತಂಡದಲ್ಲಿದ್ದರು. ಕೋಚ್ ಉಮಾಪತಿ ಮಾರ್ಗದರ್ಶನದಲ್ಲಿ ಆಟವಾಡಿದ ಹುಡುಗರು ಅಂತಾರಾಷ್ಟ್ರೀಯ ಮಟ್ಟದಲ್ಲಿದೇಶದ ಗೌರವವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಹೊಸನಗರದ ಸನತ್: ಕಬಡ್ಡಿ ತಂಡವನ್ನು ಪ್ರತಿನಿಧಿಸಿದ ಸನತ್ ಹೊಸನಗರದ ಶ್ರೀ ರಾಮಕೃಷ್ಣ ವಿದ್ಯಾಲಯದ 9 ನೇ ತರಗತಿ ವಿದ್ಯಾರ್ಥಿ. ತಾಲೂಕಿನ ನಗರ ಹೆಂಡೆಗದ್ದೆಯ ಸತೀಶ್ ಗೌಡ ಮತ್ತು ಸರೋಜ ದಂಪತಿಯ ಪುತ್ರ. ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಚಾಂಪಿಯನ್ ಆಗಿರುವುದು ಓದಿದ ಶಾಲೆ ಮತ್ತು ಗ್ರಾಮಸ್ಥರಲ್ಲಿ ಸಂತಸ ಉಂಟು ಮಾಡಿದೆ. ಇಂದು ಬಿದನೂರಿನಲ್ಲಿ ಸ್ವಾಗತಕ್ಕೆ ಸಿದ್ಧತೆ: ದುಬೈನಲ್ಲಿ ಕಬಡ್ಡಿ ಚಾಂಪಿಯನ್ ಆಗುವ ಮೂಲಕ ದೇಶಕ್ಕೆ, ನಾಡಿಗೆ, ಜೊತೆಗೆ ಊರಿನ ಕೀರ್ತಿಯನ್ನು ಹೆಚ್ಚಿಸಿದ ಸನತ್ ಶನಿವಾರ ತಾಲೂಕಿನ ಬಿದನೂರು ನಗರಕ್ಕೆ ಬರಲಿದ್ದು ಅದ್ಧೂರಿಯಾಗಿ ಬರಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಜನಸೇವಕ ಸಂಸ್ಥೆಯ ವಿಶ್ವನಾಥ ಎಂ. ತಿಳಿಸಿದ್ದಾರೆ. ಬಿದನೂರು ಕೋಟೆ ಹೆಬ್ಟಾಗಿಲ ಬಳಿ ಸ್ವಾಗತ ಕೋರಿ ಅಲ್ಲಿಂದ ಮೆರವಣಿಗೆ ಮೂಲಕ ಚಿಕ್ಕಪೇಟೆಗೆ ಕರೆತರಲಾಗುವುದು. ಬಳಿಕ ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.