ಹೊಸನಗರ: ಹೊಸನಗರ ತಾಪಂ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಆಲುವಳ್ಳಿ ವೀರೇಶ ಜಯ ಗಳಿಸಿದ್ದಾರೆ. ಶನಿವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಎಲ್ಲಾ 12 ಜನ ಸದಸ್ಯರು ಪಾಲ್ಗೊಂಡಿದ್ದರು.
ಕೈ ಎತ್ತುವ ಮೂಲಕ ಚುನಾವಣೆ ನಡೆಸಲಾಯಿತು. ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆಲುವಳ್ಳಿ ವೀರೇಶ್ 7 ಮತಗಳನ್ನು ಪಡೆದು ಜಯ ಗಳಿಸಿದರು. ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ.ಜಿ. ಚಂದ್ರಮೌಳಿ 5 ಮತ ಪಡೆದು ಸೋಲು ಅನುಭವಿಸಿದರು. ಇಬ್ಬರ ನಾಮಪತ್ರ: ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಏಕ ಸದಸ್ಯರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಆಲುವಳ್ಳಿ ವೀರೇಶ ಅವರಿಗೆ ಕೆ.ವಿ. ಸುಬ್ರಹ್ಮಣ್ಯ ಸೂಚಕರಾಗಿದ್ದರು. ಬಿ.ಜಿ. ಚಂದ್ರಮೌಳಿಗೆ ಏರಗಿ ಉಮೇಶ ಸೂಚಕರಾಗಿದ್ದು. ಎರಡು ನಾಮಪತ್ರಗಳು ಸಿಂಧುಗೊಂಡ ಬಳಿ ಚುನಾವಣೆ ನಡೆಸಲಾಯಿತು.
ಆಲುವಳ್ಳಿ ವಿರೋಧಿ ಸದ ಕಾಂಗ್ರೆಸ್ ಸದಸ್ಯರು!: ಚುನಾವಣಾ ಪ್ರಕ್ರಿಯೆಯಲ್ಲಿ ಮೊದಲು ಬಿ.ಜಿ. ಚಂದ್ರಮೌಳಿ ಪರ ಮತ ಚಲಾಯಿಸಲು ಸೂಚಿಸಲಾಗಿದ್ದು 5 ಸದಸ್ಯರು ಮತ ಚಲಾಯಿಸಿದರು. ವಿರೋಧ ಚಲಾಯಿಸಲು ಸೂಚಿಸಿದಾಗ 7 ಸದಸ್ಯರು ವಿರೋಧ ಮತ ಚಲಾಯಿಸಿದರು. ಆಲುವಳ್ಳಿ ವಿರೇಶ ಪರ ಮತ ಚಲಾಯಿಸಿಲು ಸೂಚಿಸಿದಾಗ 7 ಜನ ಸದಸ್ಯರು ಮತ ಚಲಾಯಿಸಿದರು. ಆದರೆ ಆಲುವಳ್ಳಿ ವಿರೋಧ ಮತ ಚಲಾವಣೆಗೆ ಸೂಚಿಸಿದಾಗ ಕಾಂಗ್ರೆಸ್‌ನ ಯಾವೊಬ್ಬ ಸದಸ್ಯ ಕೂಡ ಮತ ಚಲಾಯಿಸದೆ ಗಮನ ಸೆಳೆದರು.
ಗೆದ್ದ ಪಕ್ಷ ನಿಷ್ಠೆ: ನಿರ್ಗಮಿತ ಅಧ್ಯಕ್ಷ ವಾಸಪ್ಪ ಗೌಡ ರಾಜೀನಾಮೆ ನೀಡಿದ ನಂತರ ತೆರವಾದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಇಬ್ಬರು ಸದಸ್ಯರು ಕಾಂಗ್ರೆಸ್ ಸದಸ್ಯರ ಪರ ಪ್ರಮಾಣ ಮಾಡಿದ್ದ ವಿಚಾರ ದೊಡ್ಡ ಸದ್ದು ಮಾಡಿತ್ತು. ಆ ಸದಸ್ಯರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಮನಸ್ಸು ಮಾಡಿದ್ದರು. ಆದರೆ ಆ ಸದಸ್ಯರ ಮನವೊಲಿಸುವಲ್ಲಿ ಯಶಸ್ವಿಯಾಗಿ ಆಣೆ ಪ್ರಮಾಣ ಸೋತು ಪಕ್ಷನಿಷ್ಠೆ ಗೆದ್ದಂತಾಗಿದೆ.
ಹೆಸರು ಘೋಷಣೆ: ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಸಾಗರ ಉಪವಿಭಾಗಾಧಿಕಾರಿ ಡಾ| ನಾಗರಾಜ್ ಚುನಾವಣಾ ಪ್ರಕ್ರಿಯೆ ಬಳಿಕ ವಿಜಯಿ ಅಭ್ಯರ್ಥಿ ಆಲುವಳ್ಳಿ ವೀರೇಶ್ ಹೆಸರನ್ನು ಘೋಷಿಸಿದರು.