Advertisement
ಪಟ್ಟಣದ ಎಪಿಎಂಸಿಯಲ್ಲಿ ರೈತರ ಮನೆ ಬಾಗಿಲಿಗೆ ಹೋಗುವ ವಾಹನ ಸೌಲಭ್ಯ ಇರದ ಕಾರಣ ರೈತ ಸಂಕಷ್ಟಕ್ಕೀಡಾಗಿದ್ದಾನೆ. ಈ ಬಗ್ಗೆ ಸಾಕಷ್ಟು ರೈತರು ಮೌಖೀಕವಾಗಿ ಎಪಿಎಂಸಿಯ ಗಮನ ಸೆಳೆದರೂ ಯಾವುದೇ ಪ್ರಯೋಜವಾಗದೆ ಎಪಿಎಂಸಿಗೆ ಬರಲು ಮೀನಾಮೇಷ ಎಣಿಸುವಂತಾಗಿದೆ.
Related Articles
Advertisement
ಮಾತ್ರವಲ್ಲ, ಇದರ ಜತೆಗೆ ಕೆಲ ಬೆಳೆಗಾರರು ಉತ್ಪನ್ನವನ್ನು ಮಾರುಕಟ್ಟೆಗೆ ತರಲೇಬೇಕಾದಅನಿವಾರ್ಯತೆ ಇದ್ದಾಗ ಹರಸಾಹಸಪಡುವ ಸ್ಥಿತಿಯೂ ನಿರ್ಮಾಣವಾಗಿದೆ. ಖಾಸಗಿ ವಾಹನಗಳಲ್ಲಿ ಅದೂ ಅವರು ಕೇಳಿದಷ್ಟು ಬಾಡಿಗೆ ತೆತ್ತು ಮಾರುಕಟ್ಟೆ ಸೇರುವಷ್ಟರಲ್ಲಿ ಹಣ್ಣುಗಾಯಿ ನೀರುಗಾಯಿಯಾಗುವ ಪರಿಸ್ಥಿತಿಯೂ ಇದೆ. ಮಾರುಕಟ್ಟೆ ಸಂಪರ್ಕ ಹೇಗೆ?: ಇತ್ತ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆದಾಯ ಹೆಚ್ಚಿಸುವ ಉದ್ದೇಶದಿಂದ ರೈತರಲ್ಲಿ ಮನೆ ಬಾಗಿಲ ವ್ಯಾಪಾರ ಬೇಡ ಮಾರುಕಟ್ಟೆಗೆ ತನ್ನಿ ಎಂದು ನಿತ್ಯ ಹೇಳುತ್ತಿದ್ದಾರೆ. ಅಲ್ಲದೆ ಇಲ್ಲಿನ ಯಾರ್ಡ್‌ನಲ್ಲಿ ದೊಡ್ಡ ಸೂಚನಾ ಫಲಕ ಹಾಕಿ ಜನರಿಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಸಾಗಾಣಿಕೆ ಹೊರೆಯಿಂದ ತಪ್ಪಿಸಿಕೊಳ್ಳಬೇಕಾದ ರೈತ ಅನಿವಾರ್ಯವಾಗಿ ತಾನು ಬೆಳೆದ ಉತ್ಪನ್ನಗಳನ್ನು ಮನೆ ಬಾಗಿಲಿನಲ್ಲಿ ವ್ಯಾಪಾರ ಮಾಡುತ್ತಿದ್ದಾನೆ. ರೈತರಿಗೆ ನಿಖರವಾದ ತೂಕ ಮತ್ತು ನ್ಯಾಯಯುತ ಬೆಲೆ ನೀಡಿಸುವುದೇ ನಮ್ಮ ಗುರಿ ಎಂದು ಹೇಳುವ ಕೃಷಿ ಮಾರುಕಟ್ಟೆ ಸಮಿತಿ ಬಡ ರೈತ ತನ್ನ ಉತ್ಪನ್ನವನ್ನು ಮಾರುಕಟ್ಟೆಗೆ ತರುವ ವಿಧಾನ ಹೇಗೆ ಎಂದು ತಿಳಿಸಿಕೊಟ್ಟಿಲ್ಲ. ಸರ್ಕಾರಕ್ಕೆ ಮನವಿ: ಉಳಿದ ಕಡೆಗಳಲ್ಲಿ ವಾಹನ ವ್ಯವಸ್ಥೆ ಇದೆ. ಅದು ರೈತರಿಗೆ ಅನುಕೂಲವಾಗಿದೆ. ಆದರೆ ಅತಿ ಹೆಚ್ಚು ಅಗತ್ಯವಿರುವ ಸಂತ್ರಸ್ತ ಹೊಸನಗರ ತಾಲೂಕಿನಲ್ಲಿ ಇಲ್ಲದಿರುವುದು ತೊಂದರೆ ಹೌದು. ಈ ಅಗತ್ಯತೆ ಕುರಿತು ಮೇಲಧಿಕಾರಿಗಳಿಗೆ ಮನವಿ ನೀಡಲಾಗಿದೆ ಎನ್ನುತ್ತಾರೆ ಅಧಿ ಕಾರಿಗಳು. ಒಟ್ಟಾರೆ ಉತ್ತಮ ಮಾರುಕಟ್ಟೆಯಾಗಿ ರೂಪುಗೊಳ್ಳುವ ಎಲ್ಲಾ ಲಕ್ಷಣಗಳಿರುವ ಹೊಸನಗರದ ಎಪಿಎಂಸಿ ರೈತರು ಮತ್ತು ಅವರು ಬೆಳೆದ ಫಸಲು ಮಾರುಕಟ್ಟೆಗೆ ಬರಲು ಪೂರಕವಾಗಿ ಸೂಕ್ತ ವ್ಯವಸ್ಥೆ ಮಾಡಬೇಕಿದೆ. ಇದರಿಂದ ರೈತರಿಗೂ ಅನುಕೂಲ. ಮಾರುಕಟ್ಟೆ ಅಭಿವೃದ್ಧಿಗೂ ರಹದಾರಿ. ಎಪಿಎಂಸಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುತ್ತದೋ ಕಾದು ನೋಡಬೇಕು. ಈ ಕುರಿತು ಸಮಿತಿಯಿಂದ ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಬೆಳೆಗಾರರ ಹಿತದೃಷ್ಟಿಯಿಂದ ಅಗತ್ಯವಿದೆ ಮತ್ತು ನಿಯಮಾನುಸಾರ ಇಲ್ಲಿಗೆ ಸರ್ಕಾರ ವಾಹನ ಮಂಜೂರು ನೀಡುವುದಕ್ಕೆ ಸಾಧ್ಯವಿದೆ ಎನ್ನುವುದಾದರೆ ತಕ್ಷಣ ಸರ್ಕಾರದೊಂದಿಗೆ ಚರ್ಚಿಸಿ ವಾಹನದ ವ್ಯವಸ್ಥೆ ಮಾಡಿಸಲಾಗುವುದು.
ಹರತಾಳು ಹಾಲಪ್ಪ,
ಶಾಸಕ ಹಿಂದೆ ಸಾಗರ ಸಮಿತಿಯಿದ್ದಾಗ ವಾರದಲ್ಲಿ
ಎರಡು ದಿನ ಇಲ್ಲಿ ವಾಹನ ವ್ಯವಸ್ಥೆ ಮಾಡಲಾಗಿತ್ತು.
ಈಗಲೂ ಇಚ್ಛಾಶಕ್ತಿ ಅಗತ್ಯವಿದೆ. ಸಂಬಂಧಪಟ್ಟವರು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡಿದರೆ ಖಂಡಿತ ಈ ಕಾರ್ಯ ಸಾಧ್ಯವಿದೆ.
ವಾಟಗೋಡು ಸುರೇಶ್
ಮಾಜಿ ನಿರ್ದೇಶಕ, ಎಪಿಎಂಸಿ. ಕುಮುದಾ ನಗರ