Advertisement
ಹೊಸನಗರ ತಾಲೂಕಿನ ನಗರ ಹೋಬಳಿ ಕರಿಮನೆ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಚಕ್ರಾ ಮತ್ತು ಸಾವೇಹಕ್ಲು ಜಲಾಶಯಗಳು ಲಿಂಗನಮಕ್ಕಿಗೆ ನೀರು ಹರಿಸುವ ಮೂಲಕ ವಿದ್ಯುತ್ ಉತ್ಪಾದನೆಯಲ್ಲಿ ತನ್ನದೇ ಕೊಡುಗೆ ನೀಡುತ್ತಾ ಬಂದಿದೆ. ಚಕ್ರಾನಗರ ಪ್ರವಾಸಿ ಮಂದಿರದ ಅಕ್ಕಪಕ್ಕದಲ್ಲಿ 6 ಕಿಮೀ ದೂರದ ಸಮಾನಾಂತರದಲ್ಲಿ ನಿಲುಕುವ ಈ ಅವಳಿ ಜಲಾಶಯ ಪ್ರವಾಸಿಗರನ್ನು ತನ್ನತ್ತ ಗಮನ ಸೆಳೆಯತ್ತವೆ.
Related Articles
ಎನಿಸುತ್ತದೆ. ಕೇವಲ 10 ಅಡಿ ವಿಸ್ತೀರ್ಣದ ಆ ಒಂದು ಕೊಠಡಿಯಲ್ಲೇ ಭದ್ರತಾ ಸಿಬ್ಬಂದಿಗಳ ವಾಸ. ಅದು ಕೂಡ ಬಿರುಕು ಬಿಟ್ಟಿದೆ. ಕಿಟಕಿ ಬಾಗಿಲುಗಳು ಕಟ್ಟಡಕ್ಕೆ ಸಂಬಂಧವಿಲ್ಲದಂತೆ ಇದೆ. ಚಕ್ರಾ ಮತ್ತು ಸಾವೇಹಕ್ಲು ಜಲಾಶಯದ ಭದ್ರತೆಗಾಗಿ ದಿನದ 24 ಗಂಟೆ ಮೂರು ಸಿಬ್ಬಂದಿಗಳು ಕೆಲಸ ಮಾಡುತ್ತಾರೆ. ಆದರೆ ತಮ್ಮ ಎಲ್ಲದಕ್ಕೂ ಅದೇ ಕೊಠಡಿ ಆಸರೆ. ಶಿಥಿಲಾವಸ್ಥೆಗೆ ತಲುಪಿರುವ ಕಟ್ಟಡದಲ್ಲೇ ಕೆಲಸ ಮಾಡಬೇಕಾದ ಅನಿವಾರ್ಯ. ಇನ್ನು ಮಳೆಗಾಲದಲ್ಲಂತೂ ಕಟ್ಟಡದ ಒಳಗೆ ಕೊಡೆ ಹಿಡಿದು ಇರಬೇಕಾದ ಸ್ಥಿತಿ ಇದೆ.
Advertisement
ಪ್ರವಾಸಿಗರಿಗೂ ಸೌಲಭ್ಯವಿಲ್ಲ: ಚಕ್ರಾ ಮತ್ತು ಸಾವೇಹಕ್ಲು ಡ್ಯಾಂ ವೀಕ್ಷಣೆಗೆ ಮಾಸ್ತಿಕಟ್ಟೆಯಲ್ಲಿರುವ ಕೆಪಿಸಿ ಕಚೇರಿಯಿಂದ ಪಾಸ್ ಪಡೆದು ಹೋಗಬೇಕು. ಆದರೆ ಅಲ್ಲಿ ಭದ್ರತಾ ಕೊಠಡಿ ಬಿಟ್ಟರೆ ಶೌಚಾಲಯವಾಗಲಿ, ನಿರೀಕ್ಷಣಾ ಕೊಠಡಿಯಾಗಲಿ ಇಲ್ಲ. ರಾತ್ರಿ ವೇಳೆ ಬಂದರೆ ವಿದ್ಯುತ್ ಇಲ್ಲದೆ ಪರದಾಡಬೇಕು. ಸಾಕಷ್ಟು ವರ್ಷದಿಂದ ಬೇಡಿಕೆ: ಚಕ್ರಾ ಸಾವೇಹಕ್ಲು ಪ್ರದೇಶದ ಸುಂದರ ಪರಿಸರ, ಮೈದುಂಬಿದ ಹಿನ್ನೀರು, ಓವರ್ ಫ್ಲೋ ಸಮಯದಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಪ್ರವಾಸಿಗರ ಮೂಲಸೌಲಭ್ಯಕ್ಕಾಗಿ ಮತ್ತು ಭದ್ರತಾ ಸಿಬ್ಬಂದಿಗಳ ಸುಲಭ ನಿರ್ವಹಣೆಗೆ ಪೂರಕವಾಗಿ ಕಾಯಕಲ್ಪಕ್ಕೆ ಹಲವು ವರ್ಷದ ಬೇಡಿಕೆ ಇದೆ. ಮುಂದಿನ ಮಳೆಗಾಲ ಆರಂಭವಾಗುವ ಮುನ್ನವಾದರೂ ಅಗತ್ಯ ಸೌಲಭ್ಯ ಒದಗಿಸಿ ಎಂಬುದು ಸ್ಥಳೀಯರ ಮತ್ತು ಪ್ರವಾಸಿಗರ ಆಗ್ರಹ.
ನೀಲನಕ್ಷೆ ತಯಾರಿದೆಅವಳಿ ಜಲಾಶಯ ನಿರ್ಮಾಣ ಕಂಡ ವೇಳೆ. ವೀಕ್ಷಣಾ ಕಟ್ಟಡವನ್ನು ನಿರ್ಮಿಸಲಾಗಿತ್ತು. ನಂತರ ಅದನ್ನೆ ಭದ್ರತಾ ಕೊಠಡಿಯಾಗಿ ನಿರ್ಮಿಸಲಾಗಿದೆ. ಸಾವೇಹಕ್ಲು ಮತ್ತು ಚಕ್ರಾ ಡ್ಯಾಂನ ಭದ್ರತೆಗೆ ಸಂಬಂಧ ಪಟ್ಟಂತೆ ಶಿಥಿಲಾವಸ್ಥೆಯ ಬಗ್ಗೆ ಗಮನಕ್ಕೆ ಬಂದಿದೆ. ಅಲ್ಲದೆ ಈ ಬಗ್ಗೆ ಪ್ರಪೋಸಲ್ ಕಳಿಸಲಾಗಿದೆ. ಮಂಜೂರಾತಿ ಸಿಕ್ಕ ಕೂಡಲೇ ಕಾಮಗಾರಿ ಕೈಗೊಳ್ಳಲಾಗುವುದು.
ಪ್ರಕಾಶ್ ಬ್ರಹ್ಮಾವರ್,
ಇಇ ಕರ್ನಾಟಕ ವಿದ್ಯುತ್ ನಿಗಮ ಮಾಸ್ತಿಕಟ್ಟೆ, ಪ್ರವಾಸೋದ್ಯಮವೇ ಜೀವಾಳ
ಮುಳುಗಡೆಯಿಂದ ನಲುಗಿದ ನಗರ ಹೋಬಳಿ ಪುನಶ್ಚೇತನಕ್ಕೆ ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವುದೇ ಇರುವ ಏಕೈಕ ಮಾರ್ಗ. ಚಕ್ರಾ ಮತ್ತು ಸಾವೇಹಕ್ಲು ಡ್ಯಾಂಗೆ ವರ್ಷಪೂರ್ತಿ ಪ್ರವಾಸಿಗರು ಹೆಚ್ಚಿರುತ್ತಾರೆ. ಮಳೆಗಾಲದಲ್ಲಂತೂ ಪ್ರವಾಸಿಗರು ಕಿಕ್ಕಿರಿಯುತ್ತಾರೆ. ಪೂರಕವಾಗಿ ಸೌಲಭ್ಯ ಒದಗಿಸುವ ಕಾರ್ಯ ತುರ್ತು ಆಗಬೇಕಿದೆ.
ವಿದ್ಯಾಧರ ಗುರುಶಕ್ತಿ,
ಹೊಸನಗರ ಕುಮುದಾ ನಗರ