Advertisement

Hosanagar: ಮುಂಡಳ್ಳಿ ಸಮೀಪ ರಸ್ತೆಗೆ ಬಿದ್ದ ಬೃಹತ್ ಮರ; ಬೆಳಗ್ಗೆ 4 ಗಂಟೆ ಸಂಚಾರ ಬಂದ್

10:51 AM Jul 24, 2024 | Kavyashree |

ಹೊಸನಗರ: ಶಿವಮೊಗ್ಗದ ಹೊಸನಗರ ನಗರ ಮಾಸ್ತಿಕಟ್ಟೆ  ಮೂಲಕ ಕುಂದಾಪುರ- ಉಡುಪಿ ಸಾಗುವ ಮಾರ್ಗದ ಮುಂಡಳ್ಳಿ ಸಮೀಪ ಬೃಹತ್ ಮರವೊಂದು ಬೆಳಗ್ಗಿನ ಜಾವ ರಸ್ತೆಗೆ ಅಡ್ಡಲಾಗಿ ಬಿದ್ದು 4 ಗಂಟೆ ಸಂಚಾರ ಸ್ಥಗಿತಗೊಂಡ ಘಟನೆ ಜು.24ರ ಬುಧವಾರ ಬೆಳಿಗ್ಗೆ ನಡೆದಿದೆ.

Advertisement

ಈ ಭಾಗದಲ್ಲಿ ರಾತ್ರಿ ಭಾರೀ ಬಿರುಗಾಳಿ ಸಹಿತ ಮಳೆ ಸುರಿದಿದ್ದು, ಗಾಳಿ ರಭಸಕ್ಕೆ ಮರ ಧರಾಶಾಹಿಯಾಗಿದೆ. ಶಿವಮೊಗ್ಗ-ಉಡುಪಿ‌ ನಡುವಿನ ಪ್ರಮುಖ ಮಾರ್ಗ ಇದಾಗಿದೆ. ಬೆಳಗ್ಗಿನ ಜಾವ ಆದ ಕಾರಣ ವಾಹನ ದಟ್ಟಣೆ ಅಷ್ಟಾಗಿ ಇರಲಿಲ್ಲ.

ಅರಣ್ಯ ಇಲಾಖೆ ಮತ್ತು ಸ್ಥಳೀಯರ ಸಹಭಾಗಿತ್ವದಲ್ಲಿ ಮರ ತೆರವು ಕಾರ್ಯಾಚರಣೆ ನಡೆಸಲಾಯಿತು. ಬೆಳಿಗ್ಗೆ 3 ಗಂಟೆಗೆ ಸ್ಥಗಿತಗೊಂಡಿದ್ದ ಸಂಚಾರ ಬೆಳಿಗ್ಗೆ ಗಂಟೆಗೆ ಮುಕ್ತವಾಯಿತು.

ಉಪವಲಯ ಅರಣ್ಯಾಧಿಕಾರಿ ಅಮೃತ್ ಮತ್ತು ಸಿಬ್ಬಂದಿ ವರ್ಗ, ಶಾಸಕರ ಆಪ್ತ ಸಹಾಯಕ ರಾಜೇಶ ಹಿರಿಮನೆ, ದೇವು ಕಂದ್ಲಕೊಪ್ಪ, ಕೆ.ಕೆ.ರಾಮಣ್ಣ, ಯೋಗೇಂದ್ರ ಪಡುಕೋಣೆ, ದೀಕ್ಷಿತ್ ಮುಂಡಳ್ಳಿ ಹಾಗೂ ಸ್ಥಳೀಯರು ಮರ ತೆರವಿಗೆ ಸಹಕರಿಸಿದರು.

Advertisement

Advertisement

Udayavani is now on Telegram. Click here to join our channel and stay updated with the latest news.

Next