Advertisement

ನಗರಸಭೆ ಚುನಾವಣೆ: ಸೂಕ್ತ ಅಭ್ಯರ್ಥಿಗಳೇ ಇಲ

05:53 PM Jan 23, 2020 | Naveen |

ಹೊಸಕೋಟೆ: ನಗರಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ನಗರದಲ್ಲಿ ರಾಜಕೀಯ ಪಕ್ಷಗಳ ಚಟುವಟಿಕೆ ಬಿರುಸಾಗಿದ್ದರೂ ಅಭ್ಯರ್ಥಿಗಳ ಆಯ್ಕೆಗೆ ತೀವ್ರವಾದ ಕಸರತ್ತು ನಡೆಸಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.

Advertisement

ಸೂಕ್ತ ಅಭ್ಯರ್ಥಿಗಳೇ ಇಲ್ಲ: ಚುನಾವಣೆಗೆ ಸ್ಪರ್ಧಿಸಲು ವಾರ್ಡ್‌ವಾರು ನಿಗದಿ ಪಡಿಸಿರುವ ಮೀಸಲಾತಿಯಂತೆ ಸೂಕ್ತ ಅಭ್ಯರ್ಥಿಗಳು ಲಭ್ಯವಾಗುವುದು ವಿರಳ ವಾಗಿದ್ದು ಬೇರೆ ಪ್ರದೇಶದ
ವಾಸಿಗಳು ಸ್ಪರ್ಧಿ ಸುವುದು ಅನಿವಾರ್ಯವಾಗಿದೆ. ಒಟ್ಟು 31 ವಾರ್ಡ್‌ಗಳಲ್ಲಿ 17 ಪುರುಷರಿಗೆ, 14 ಸ್ಥಾನಗಳನ್ನು ಮಹಿಳೆಯರಿಗೆ ನೀಡಲಾಗಿದೆ.

ತ್ರಿಕೋನ ಸ್ಪರ್ಧೆ: ಡಿ.5ರಂದು ನಡೆದ ಕ್ಷೇತ್ರದ ವಿಧಾನಸಭಾ ಉಪಚುನಾವಣೆಯಂತೆ ನಗರಸಭೆಗೂ ಸಹ ತ್ರಿಕೋನ ಸ್ಪರ್ಧೆ ಏರ್ಪಡುವುದು ಬಹುತೇಕ ಖಚಿತವಾಗಿದ್ದು ಕಾಂಗ್ರೆಸ್‌, ಬಿಜೆಪಿ ಪಕ್ಷಗಳು, ಸ್ವಾಭಿಮಾನ ಬಣ ಎರಡು ಸುತ್ತಿನ ಪೂರ್ವಭಾವಿ ಸಭೆ ಗಳನ್ನು ನಡೆಸಿದೆ. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ ಆಕಾಂಕ್ಷಿಗಳಿಂದ ಅರ್ಜಿಗಳನ್ನು ಸ್ವೀಕರಿಸಿದ್ದು ಇದಕ್ಕಾಗಿ ರಚಿಸಿರುವ ಸಮಿತಿಯಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದೆ.

28 ಕೊನೆ ದಿನ: ಜ.28 ನಾಮ ಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದ್ದು ಮಂಗಳ ವಾರವಾಗಿರುವ ಕಾರಣ ಜ.27ರಂದೇ ಬಹಳಷ್ಟು ಅಭ್ಯರ್ಥಿಗಳು ನಾಮಪತ್ರ ಸಲ್ಲಿ ಸಲಿದ್ದಾರೆ. ಡಿ.5ರಂದು ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ ನಗರದಲ್ಲಿ ಒಟ್ಟು 46738 ಮತದಾರರಿದ್ದು ನಂತರ ನೂತ ನವಾಗಿ ನೋಂದಣಿಗೆ ಅವಕಾಶ ನೀಡಿದ್ದರಿಂದ ಪ್ರತಿ ವಾರ್ಡಿನಲ್ಲೂ 50 ರಿಂದ 100ರಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ. ವಾರ್ಡ್‌ವಾರು ಮೀಸಲಾತಿ: 1. ವಿವೇಕಾನಂದ
ನಗರ-1: ಹಿಂದುಳಿದ 4. ಚಿಕ್ಕತಿಗಳರಪೇಟೆ, ರಾಮಮಂದಿರ ರಸ್ತೆ: ಹಿಂದುಳಿದ ವರ್ಗ-ಬಿ; 5. ಕಿಲಾರಿಪೇಟೆ, ಬ್ರಾಹ್ಮಣರ ಬೀದಿ: ಹಿಂದುಳಿದ ವರ್ಗ-ಎ; 6. ಪಾರ್ವತಿಪುರ: ಪರಿಶಿಷ್ಟ ಪಂಗಡ; 7. ಗೌತಮ್‌ ಕಾಲೋನಿ: ಸಾಮಾನ್ಯ ಮಹಿಳೆ; 8. ಷರಾಬ್‌ ಮುನಿಶಾಮಯ್ಯ ಲೇಔಟ್‌: ಸಾಮಾನ್ಯ; 9. ಕುರುಬರಪೇಟೆ: ಸಾಮಾನ್ಯ; 10. ನಾಲಾಗಲ್ಲಿ: ಹಿಂದುಳಿದ ವರ್ಗ-ಎ ಮಹಿಳೆ; 11. ಮೇಲಿನಪೇಟೆ: ಸಾಮಾನ್ಯ; 12. ತಮ್ಮೇಗೌಡ ಬಡಾವಣೆ: ಹಿಂದುಳಿದ ವರ್ಗ-ಎ; 13. ವಿವೇಕಾನಂದನಗರ-2: ಸಾಮಾನ್ಯ; 14. ಪಿಡಬ್ಲೂಡಿ ಕ್ವಾರ್ಟಸ್‌: ಹಿಂದುಳಿದ ವರ್ಗ-ಎ ಮಹಿಳೆ; 15. ಎಂವಿ ಬಡಾವಣೆ-1: ಸಾಮಾನ್ಯ; 16. ಎಂವಿ ಬಡಾವಣೆ-2: ಸಾಮಾನ್ಯ; 17. ಅಂಬೇಡ್ಕರ್‌ ಕಾಲೋನಿ: ಹಿಂದುಳಿದ ವರ್ಗ-ಎ; 18. ಖಾಜಿ ಮೊಹಲ್ಲಾ : ಸಾಮಾನ್ಯ ಮಹಿಳೆ; 19. ವರದಾಪುರ: ಹಿಂದುಳಿದ ವರ್ಗ-ಎ ಮಹಿಳೆ; 20. ದಂಡುಪಾಳ್ಯ: ಪರಿಶಿಷ್ಟ ಜಾತಿ ಮಹಿಳೆ; 21. ಎಂವಿ ಬಡಾವಣೆ-3: ಸಾಮಾನ್ಯ; 22. ಎಂವಿ ಬಡಾವಣೆ-4: ಸಾಮಾನ್ಯ; 23. ಎಂವಿ ಬಡಾವಣೆ-5: ಪರಿಶಿಷ್ಟ ಜಾತಿ; 24. ಎಂವಿ ಬಡಾವಣೆ-6: ಸಾಮಾನ್ಯ ಮಹಿಳೆ; 25. ಎಂವಿ ಬಡಾವಣೆ-7: ಹಿಂದುಳಿದ ವರ್ಗ-ಎ; 26. ಎಂವಿ ಬಡಾವಣೆ-8-ಸಾಮಾನ್ಯ ಮಹಿಳೆ; 27. ಎಐಆರ್‌ ಸ್ಟೇಷನ್‌: ಸಾಮಾನ್ಯ ಮಹಿಳೆ; 28. ಎಂವಿ ಬಡಾವಣೆ-9 ಕುವೆಂಪುನಗರ: ಸಾಮಾನ್ಯ ಮಹಿಳೆ; 29. ಎಂವಿ ಬಡಾವಣೆ-10: ಸಾಮಾನ್ಯ ಮಹಿಳೆ; 30. ಎಂವಿ ಬಡಾವಣೆ-11: ಪರಿಶಿಷ್ಟ ಜಾತಿ; 31. ಟೀಚರ್ ಕಾಲೋನಿ: ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next