ಹೊಸದುರ್ಗ: ಜ್ಞಾನದ ಗಣಿಯಾಗಬೇಕಾಗಿದ್ದ ಗ್ರಂಥಾಲಯಗಳು ಓದುಗರಿಗೆ ಸ್ಪಂದಿಸಬೇಕಾಗಿರುವ ಅವಧಿಯಲ್ಲಿ ತೆರೆಯದೆ ಅವೈಜ್ಞಾನಿಕ ಅವಧಿಯಲ್ಲಿ ತೆರೆದಿರುವುದು ಪ್ರಯೋಜನಕ್ಕೆ ಬರುತ್ತಿಲ್ಲ.
ಸಾರ್ವಜನಿಕ ಗ್ರಂಥಾಲಯ ಇಲಾಖೆ ಜಿಲ್ಲಾ ಕೇಂದ್ರ ಗ್ರಂಥಾಲಯ ಹೊಸದುರ್ಗ ಶಾಖೆಯು ಪಟ್ಟಣದ ಅಶೋಕ ಕ್ಲಬ್ ಭವನದ ಬಾಡಿಗೆ ಕಟ್ಟಡದಲ್ಲಿ 1970ರಂದು ಸ್ಥಾಪನೆಗೊಂಡಿದ್ದು, ಕೇವಲ 100 ರೂ. ಬಾಡಿಗೆ ನೀಡಲಾಗುತ್ತಿದೆ ಬಸ್ ನಿಲ್ದಾಣಕ್ಕೆ ಹತ್ತಿರವಿರುವ ಕಟ್ಟಡದಲ್ಲಿ ಸ್ಥಳದ ಅಭಾವ ಹೆಚ್ಚಾಗಿದೆ.
ಬಹಳ ದಿನಗಳಿಂದಲು ಇರುವ ಗ್ರಂಥಾಲಯದ ಸಮಯದ ಬದಲಾವಣೆಯಿಂದ ಓದುಗಗೆ ಕಷ್ಟಕರವಾಗುತ್ತಿದೆ ಎನ್ನುತ್ತಾರೆ ಹಿರಿಯ ಓದುಗರು 8ಕ್ಕೆ ಆರಂಭವಾಗುವ ಗ್ರಂಥಾಲಯ ಕಚೇರಿ 11.30ಕ್ಕೆ ಮುಚ್ಚಲ್ಪಡುತ್ತದೆ. ಬೆಳಗಿನ ಉಪಹಾರ ಮುಗಿಸಿಕೊಂಡು ಬರುವ ಹೊತ್ತಿಗೆ ಆಗಲೆ ಮುಚ್ಚುವ ಸಮಯ ಬಂದಿರುತ್ತದೆ. ಇನ್ನೂ ಮಧ್ಯಾಹ್ನ 3ಕ್ಕೆ ತೆರೆಯುವ ಕಚೇರಿ 7.30ಕ್ಕೆ ಮುಚ್ಚಲ್ಪಡುತ್ತದೆ.
ಹೀಗಾಗಿ ಓದುಗರ ಅಭಿಪ್ರಾಯ ಪಡೆದು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಸಮಯದಲ್ಲಿ ಗ್ರಂಥಾಲಯ ತೆಗೆಯಬೇಕೆನ್ನುವುದು ಓದುಗ ಜಯಣ್ಣ ಅವರ ಅಭಿಪ್ರಾಯ. ಗ್ರಂಥಾಲಯದಲ್ಲಿ ಒಟ್ಟು 16,785 ಪುಸ್ತಕಗಳಿದ್ದು ಪೂರ್ಣಾವಧಿ ಓರ್ವ ನೌಕರ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ನಿಯಂತ್ರಣದಲ್ಲಿದ್ದ ತಾಲೂಕಿನ 33 ಗ್ರಾಮ ಪಂಚಾಯ್ತಿಗಳ ಗ್ರಂಥಾಲಯಗಳು ಇದೀಗ ನೇರವಾಗಿ ಸಂಬಂಧಿಸಿದ ಗ್ರಾಪಂ ನಿಯಂತ್ರಣದಲ್ಲಿ ಕಳೆದ ಅಕ್ಟೋಬರ್ ಒಂದರಿಂದ ಕಾರ್ಯನಿರ್ವಹಿಸುತ್ತಿವೆ.
ಇನ್ನೂ ಹಲವು ಗ್ರಾಮ ಪಂಚಾಯ್ತಿ ಕೇಂದ್ರದಲ್ಲಿ ನಡೆಯುವ ಗ್ರಂಥಾಲಯಗಳು ಕೆಲವಡೆ ಸಮರ್ಪಕವಾಗಿ ಕೆಲ ಪತ್ರಿಕೆಗಳನ್ನು ಹೊರತು ಪಡಿಸಿದರೆ ವಿಭಿನ್ನ ಪುಸ್ತಕಗಳ ಲಭ್ಯತೆ ಇಲ್ಲ ಎಂಬ ಆರೋಪವಿದ್ದರೆ ಗ್ರಾಮೀಣ ಜನರಿಗೆ ಅನುಕೂಲವಾಗುವ ಸಮಯದಲ್ಲಿ ತೆರೆದಿರುವುದಿಲ್ಲ. ಸಮರ್ಪಕ ಕಟ್ಟಡವಿಲ್ಲ ಬಾಗೂರಿನ ಗ್ರಂಥಾಲಯ ಕಟ್ಟಡ ಶಿಥಿಲಗೊಂಡಿದೆ ಎನ್ನುತ್ತಾರೆ ರಾಜು ವಿಠ್ಠಲ .