Advertisement
ತಾಲೂಕಿನ ಸಾಣೇಹಳ್ಳಿ ಮಠದ ಎಂ.ಎಂ. ಕಲ್ಬುರ್ಗಿ ಗ್ರಂಥಾಲಯದ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಶ್ರೀ ಶಿವಕುಮಾರ ಕಲಾ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿರುವ ಹಳಗನ್ನಡ ಕಾವ್ಯ: ರಸಾಭಿವ್ಯಕ್ತಿ ಕಮ್ಮಟದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
Related Articles
Advertisement
ಇಂಥ ಕಮ್ಮಟಗಳನ್ನು ಕರ್ನಾಟಕದಾದ್ಯಂತ ಹಮ್ಮಿಕೊಳ್ಳಬೇಕು. ರನ್ನ, ಪೊನ್ನ, ಕುಮಾರವ್ಯಾಸ, ರಾಘವಾಂಕ ಮುಂತಾದ ಕವಿಗಳಿಗೆ ಹಾಗೂ ಲೇಖಕರಿಗೆ ಕನ್ನಡಿಗರು ಋಣಿಯಾಗಿರಬೇಕು. ಓದುಗರಿಲ್ಲದೆ ಕವಿಗಳು, ಲೇಖಕರು ನೊಂದು ಬೆಂದಿದ್ದಾರೆ. ಇಂಥ ದುರಂತಗಳನ್ನು ತಪ್ಪಿಸಿಕೊಳ್ಳಲು ಕಮ್ಮಟಗಳು ಅವಕಾಶ ನೀಡಬೇಕು ಎಂದರು.
ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಬಿ.ವಿ. ವಸಂತಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಂಡಿತಾರಾಧ್ಯ ಶ್ರೀಗಳು ಇಂದಿನ ಯುವ ಸಮೂಹವನ್ನು ಹೊಸ ಚಿಂತನೆಗೆ ಹಚ್ಚಿದ್ದಾರೆ. “ಶಿವ’ ಎಂದರೆ ಕಲ್ಯಾಣ ಮತ್ತು ಒಳಿತು ಎಂದರ್ಥ. ಎಲ್ಲರಿಗೂ ಒಳಿತಾಗಲಿ ಎನ್ನುವುದು ಪೂಜ್ಯರ ಹೆಬ್ಬಯಕೆ. ಆ ಕಾರಣದಿಂದ ಇಂಥ ಚಟುವಟಿಕೆಗಳು ಇಲ್ಲಿ ನಿರಂತರವಾಗಿ ನಡೆಯತ್ತಿವೆ. ಈ ಮೂಲಕ ನಮ್ಮಂಥವರಿಗೆ ವೈಚಾರಿಕವಾಗಿ, ನೈತಿಕವಾಗಿ, ಅಧ್ಯಾತ್ಮಿಕವಾಗಿ ಆತ್ಮಬಲವನ್ನು ತುಂಬುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ ವೆಂಕಟೇಶ್, ಅದ್ಯಾಪಕ ದ್ಯಾಮೇಶ್ ಹಾಜರಿದ್ದರು. ಆರಂಭದಲ್ಲಿ ಶಿವಸಂಚಾರದ ಎಚ್.ಎಸ್ ನಾಗರಾಜ್ ವಚನ ಪ್ರಾರ್ಥನೆ ನಡೆಸಿಕೊಟ್ಟರು.