Advertisement

ರೈತರು ರಾಸಾಯನಿಕ ಮುಕ್ತ ಕೃಷಿ ಪದ್ಧತಿ ಅನುಸರಿಸಲಿ

06:29 PM Dec 28, 2019 | Naveen |

ಹೊಸದುರ್ಗ: ರೈತರು ರಾಸಾಯನಿಕ ಮುಕ್ತ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ ಎಂದು ಹೇಳಿದ್ದಾರೆ.

Advertisement

ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದ ಚಿಣ್ಣರ ನಡಿಗೆ ಕೃಷಿ ಕಡೆಗೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ರೈತರು ರಾಸಾಯನಿಕ ಮುಕ್ತ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಹಿಂದಿನ ತಲೆಮಾರಿನವರಂತೆ ಸಾಂಪ್ರದಾಯಿಕ ಬೇಸಾಯ ಪದ್ಧತಿ ಅನುಸರಿಸಿದ್ದಲ್ಲಿ ಆರೋಗ್ಯ ಪೂರ್ಣ ಜೀವನ ನಡೆಸಲು ಸಾಧ್ಯವಾಗುತ್ತದೆ. ಯಾವುದೇ ರಾಸಾಯನಿಕ ಗೊಬ್ಬರದ ಅವಶ್ಯಕತೆಯಿಲ್ಲದೇ ನವಣೆ, ಸಾಮೆ, ಊದಲು, ಕೊರಲೆಯಂತಹ ಸಿರಿಧಾನ್ಯಗಳನ್ನು ಉತ್ತಮವಾಗಿ ಬೆಳೆಯಬಹುದಾಗಿದೆ. ಮಿತ ಬಂಡವಾಳ ಹಾಗೂ ಕಡಿಮೆ ನೀರಿನಲ್ಲಿ ಸಿರಿಧಾನ್ಯ ಬೆಳೆದು ಅಧಿಕ ಲಾಭಗಳಿಸಬಹುದಾಗಿದೆ ಎಂದರು.

ರೈತ ಸ್ವಾರ್ಥಿಯಾಗಬೇಕು. ಕುಟುಂಬಕ್ಕೆ ಬೇಕಾಗುವಷ್ಟು ಧವಸಧಾನ್ಯ ಇಟ್ಟು ಕೊಂಡು ನಂತರ ಮಾರಾಟ ಮಾಡಬೇಕು. ರೈತ ಕೇವಲ ಬೆಳೆ ಬೆಳೆದರೆ ಸಾಲದು ಅದನ್ನು ಮಾರುಕಟ್ಟೆಗೆ ತಂದು ಮೌಲ್ಯವರ್ಧನೆ ಮಾಡುವ ಜಾಣ್ಮೆ ಹೊಂದಬೇಕು. ಕಚ್ಚಾ ವಸ್ತುಗಳನ್ನು ಸಿದ್ದವಸ್ತುಗಳನ್ನಾಗಿ ಮಾರ್ಪಾಡು ಮಾಡಬೇಕು. ಆಗ ಮಾತ್ರ ಅನ್ನದಾತ ಸಂಕಷ್ಟದಿಂದ ಪಾರಾಗಿ ಆರ್ಥಿಕವಾಗಿ ಸದೃಢವಾಗಲು ಸಾಧ್ಯವಾಗಲಿದೆ. ರೈತ ಬೆಳೆದು ಕೊಟ್ಟ ಅಡಿಕೆಯನ್ನು ಕಂಪನಿಗಳು ಗುಟ್ಕಾ ತಯಾರಿಸಿ ಅದನ್ನು ದುರ್ವಿನಿಯೋಗ ಮಾಡುತ್ತಿವೆ. ಕಂಪನಿಗಳು ಗುಟ್ಕಾ ತಿನ್ನಿಸಿ ಜನರ ಆರೋಗ್ಯ ಹಾಳು ಮಾಡುತ್ತಿವೆ. ಅಡಿಕೆ ದುರ್ವಿನಿಯೋಗವಾಗದಂತೆ ರೈತರು ಯೋಜನೆ ರೂಪಿಸಿಕೊಳ್ಳಬೇಕಿದೆ ಎಂದರು.

ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಡಾ|ಕೆ.ಅನಂತ್‌ ಮಾತನಾಡಿ, ರೈತರು ವೈಜ್ಞಾನಿಕತೆಯಿಂದ ಬೆಳೆಗಳನ್ನು ಬೆಳೆಯುವುದರಿಂದ ದೇಶದ ಆರ್ಥಿಕತೆ ಹೆಚ್ಚಾಗುತ್ತದೆ ರೈತರು ಸೃಜನಶೀಲ, ಪ್ರಯೋಗಶೀಲ ಮತ್ತು ಪ್ರಗತಿಪರರಾಗಬೇಕು. ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿ ಬೆಳೆಯುವುದರಿಂದ ಹೆಚ್ಚಿನ ಲಾಭ ಪಡೆಯುವುದರೊಂದಿಗೆ ಮಣ್ಣಿನ ಫಲವತ್ತತೆಯನ್ನು ಉಳಿಸಿಕೊಳ್ಳಬಹುದಾಗಿದೆ. ಇಂದಿನ ಶಾಲಾ ಮಕ್ಕಳಿಗೆ ಶಿಕ್ಷಣದ ಜತೆಗೆ ಕೃಷಿ ಕ್ಷೇತ್ರದ ಬಗ್ಗೆ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕೇವಲ ಪಠ್ಯಪುಸ್ತಕದಿಂದ ಸಾರ್ವಂಗೀಣ ಶಿಕ್ಷಣ ದೊರಕುವುದು ಅಸಾಧ್ಯ. ಕೃಷಿಯಿಂದ ವಿಮುಖರಾಗುತ್ತಿರುವ ಕಾಲಘಟ್ಟದಲ್ಲಿ ಇಂತಹ ಕಾರ್ಯಾಗಾರಗಳು ಹೆಚ್ಚು ಉಪಯುಕ್ತವಾಗಲಿವೆ ಎಂದರು.

ಜಿಪಂ ಸದಸ್ಯ ಅಜ್ಜಪ್ಪ ಮಾತನಾಡಿ, ಇಂದು ವ್ಯವಸಾಯ ಮಾಡುವವರನ್ನು ನಿಷ್ಕೃರ್ಷ ಭಾವನೆಯಿಂದ ಕಾಣಲಾಗುತ್ತಿದೆ. ಇಂದಿನ ಯುವಪೀಳಿಗೆ ಬಹುತೇಕ ಕೃಷಿಕ ಕುಟುಂಬದ ಹಿನ್ನೆಲೆಯಿಂದ ಬಂದಿದ್ದರಾದರೂ ಕೃಷಿ ಉಪಕರಣಗಳ ಬಗ್ಗೆ ಮಾಹಿತಿ ಹೊಂದಿಲ್ಲ. ಇದಕ್ಕೆಲ್ಲಾ ಸರಕಾರಿ ನೌಕರಿ ಪಡೆಯಬೇಕ್ಕೆಂಬ ಹಂಬಲವಾಗಿವೇ ಕಾರಣ ಎಂದರು.

Advertisement

ಜಿಪಂ ಸದಸ್ಯರಾದ ಮಮತಾ, ಚೇತನಾ ಪ್ರಸಾದ್‌, ತಹಶೀಲ್ದಾರ್‌ ತಿಪ್ಪೇಸ್ವಾಮಿ, ಬಿಇಒ ಎಲ್‌.ಜಯಪ್ಪ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್‌, ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ|ಕಿರಣ್‌, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶ್ರೀಕಾಂತ್‌, ರೈತ ಸಂಘದ ಅಧ್ಯಕ್ಷ ರಮೇಶ್‌, ಮುಖಂಡರಾದ ಕರಿಸಿದ್ದಯ್ಯ, ಬಯಲಪ್ಪ ಮತ್ತಿತರಿದ್ದರು. ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಇಲಾಖೆಗಳು ಏರ್ಪಡಿಸಿದ್ದ ವ್ಯವಸಾಯದ ಉಪಕರಣಗಳ ಪ್ರದರ್ಶನವನ್ನು ಸುಮಾರು 800ಕ್ಕೂ ಅಧಿಕ ವಿದ್ಯಾರ್ಥಿಗಳು ವೀಕ್ಷಿಸಿದರು. ನಂತರ ಸಮೀಪದ ಜಮೀನಿನಲ್ಲಿ ವಿದ್ಯಾರ್ಥಿಗಳಿಗೆ ಉಳುಮೆ ಮಾಡುವ ಕುರಿತು ಪ್ರಾತ್ಯಕ್ಷಿಕೆ ತೋರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next