Advertisement
ಕಳೆದ ವರ್ಷದ ಕೊನೆಯಲ್ಲಿ ನಡೆದ ನೋಟುಗಳ ಅಪಮೌಲಿÂàಕರಣದಿಂದ ಸಮಾಜದಲ್ಲಿ ನೈತಿಕ ಜಾಗೃತಿ ಉಂಟಾಗಬಹುದೆಂದು ಭಾವಿಸಿದರೆ ಅದು ನಿಜವಾಗುವ ಬಗ್ಗೆ ಸಂದೇಹವಿದೆ. ಮದ್ಯದಂಗಡಿಗಳಲ್ಲಿ ವ್ಯಾಪಾರ ಕಡಿಮೆಯಾಗಿಲ್ಲ. ಯುವಕರು ಹೊಸವರ್ಷಾಚರಣೆ ಎಂದರೆ ಅಮಲಿನ ಲೋಕದಲ್ಲಿ ಮುಳುಗಿಹೋಗುವುದೆಂದು ತಿಳಿದಂತಿದೆ. ಕೆಲವು ವರ್ಷಗಳ ಹಿಂದೆ ಡಿಸೆಂಬರ್ 31ರ ರಾತ್ರಿ ಗೆಳೆಯರೊಂದಿಗೆ ಬೆಂಗಳೂರಿನ ಎಂ.ಜಿ. ರೋಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ಆಗ ಹೊಸವರ್ಷಾಚರಿಸುವ ಯುವಕರ ನೂಕುನುಗ್ಗಲಿನಿಂದ ನಮ್ಮ ಜೊತೆಗಿದ್ದ ಹಿರಿಯ ಸ್ನೇಹಿತರೊಬ್ಬರು ದೂಡಲ್ಪಟ್ಟು ರಸ್ತೆ ಬದಿಗೆ ಬೀಳುವಂತಾಯಿತು. ಹೊಸದರ ಆಚರಣೆ ಎಂದರೆ ಹಳೆಯ ನೋಟುಗಳನ್ನು, ಹಳೆಯ ತಲೆಗಳನ್ನು ಅವಗಣಿಸಬೇಕೆಂದು ಅರ್ಥವೆ?
Advertisement
ನಿಜವಾಗಿ ಹೊಸದಾಗುವುದು…
03:45 AM Jan 01, 2017 | |
Advertisement
Udayavani is now on Telegram. Click here to join our channel and stay updated with the latest news.