Advertisement

ಹೊಸಬೆಟ್ಟು: ತಂದೆಯ ಕೊಲೆ –ಮಗನ ಮೇಲೆ ಹಲ್ಲೆ

01:08 PM Apr 16, 2017 | Team Udayavani |

ಮೂಡಬಿದಿರೆ: ತಂದೆ ಮತ್ತು ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆದು ತಂದೆ ಸಾವಿಗೀಡಾಗಿ ಮಗ ಗಂಭೀರವಾಗಿ ಗಾಯಗೊಂಡ ಘಟನೆ ಸಮೀಪದ ಹೊಸಬೆಟ್ಟು ಗ್ರಾಮದ ಕರಂಗಾನದಲ್ಲಿ  ಶುಕ್ರವಾರ ರಾತ್ರಿ ಸಂಭವಿಸಿದೆ. ಶೇಡಿಗುರಿ ಚೆ„ತನ್ಯ ಯುವಕ ಮಂಡಲದ ಹತ್ತಿರದ ನಿವಾಸಿ, ಕೃಷಿಕ  ಪೌಲ್‌ ಗೋವಿಯಸ್‌ (82) ಕೊಲೆಯಾದ ವ್ಯಕ್ತಿ. ಅವರ ಮಗ ಈ   ಸ್ಟಾ éನಿ ಘಟನೆಯಲ್ಲಿ ಗಾಯಗೊಂಡು ಮಂಗಳೂರು ವೆನಾÉಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಸ್ಟಾ ನಿ ನೀಡಿದ ದೂರಿನನ್ವಯ ಅವರ ಸಹೋದರ ಡಾಲ್ಫಿಯನ್ನು ಆರೋಪಿ ಎಂದು ಗುರುತಿಸಲಾಗಿದೆ. ಎ.14ರ ಗುಡ್‌ಫ್ತೈಡೆಯಂದು ಹೊಸಬೆಟ್ಟು ಚರ್ಚ್‌ ನಲ್ಲಿ  ಸಂಜೆ 5 ಗಂಟೆಯಿಂದ 7.45ರ ವರೆಗೆ ಪೂಜಾ ಕಾರ್ಯಕ್ರಮಗಳು ನಡೆಯುತ್ತಿದ್ದವು. ಮಗ ಸ್ಟಾ éನಿ ಪೂಜೆಗೆ ಹೊರಟು ತಂದೆಯನ್ನೂ ಬರಹೇಳಿದಾಗ ಕೈ ನೋಯುತ್ತಿರುವ ಕಾರಣ ಬರುವುದಿಲ್ಲವೆಂದು ಪೌಲ್‌ ಹೇಳಿದರೆನ್ನಲಾಗಿದೆ. ಹಾಗೆ ಹೋದ ಮಗ ವಾಪಾಸ್‌ ಬಂದು ಬೈಕನ್ನು ಪಾರ್ಕ್‌ ಮಾಡುವಾಗ ಸ್ಟಾ éನಿ ಸಹೋದರ ಡಾಲ್ಪಿ  ಕತ್ತಿಯಂಥ ಹರಿತವಾದ ಆಯುಧ ಹಿಡಿದುಕೊಂಡು “ಒಬ್ಬನನ್ನು ತೆಗೆದಿದ್ದೇನೆ, ನನ್ನ ಸಾಮಗ್ರಿ, ಕಪಾಟು ಎಲ್ಲಿ? ಇನ್ನು ನಿನ್ನನ್ನು ತೆಗೆಯುತ್ತೇನೆ’ ಎಂದು ತಮ್ಮ ಆಡುಭಾಷೆಯಲ್ಲಿ ಬೊಬ್ಬಿರಿಯುತ್ತ ಸ್ಟಾನಿಯ ಮೇಲೆ ಹಲ್ಲೆ ಮಾಡಲೆತ್ನಿಸಿದಾಗ ಸ್ಟಾ éನಿಯ ಕಿವಿ ಮತ್ತು ತಲೆಯ ಭಾಗಕ್ಕೆ ಗಾಯಗಳಾದವು ಎಂದೂ  ಸ್ಟಾ éನಿ ತಂದೆಯನ್ನು ಹುಡುಕುವಾಗ ಅವರು ಅಡುಗೆ ಕೋಣೆಯಲ್ಲಿ  ರಕ್ತಸಿಕ್ತ ಸ್ಥಿತಿಯಲ್ಲಿ ಕಂಡು ಬಂದರು ಎಂದೂ ಹೇಳಲಾಗಿದೆ.

ಮೂಡಬಿದಿರೆಯಲ್ಲಿ ಶಾಮಿಯಾನ ವ್ಯವಹಾರ ಮಾಡುತ್ತಿರುವ ಡಾಲ್ಫಿ ಅಜೆಕಾರ್‌ನಲ್ಲಿರುವ ತನ್ನ ಪತ್ನಿಯ ಮನೆಯಲ್ಲಿದ್ದು   ಮೂಡಬಿದಿರೆಗೆ ಬಂದುಹೋಗುತ್ತಿದ್ದ.

ತಾಯಿಯ ನಿಗೂಢ ಸಾವು
ಪೌಲ್‌ ಗೋವಿಯಸ್‌ರ ಪತ್ನಿ ಲಿಲ್ಲಿ ಗೋವಿಯಸ್‌ ಎರಡು ವರ್ಷದ ಹಿಂದೆ, 2015ರ ಜನವರಿ ತಿಂಗಳಲ್ಲಿ ಅತ್ತೂರು ಚರ್ಚ್‌ ವಾರ್ಷಿಕ ಮಹೋತ್ಸವದ ವೇಳೆ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದರು. 

ನೇಣು ಹಾಕಿದ ಸ್ಥಿತಿಯಲ್ಲಿದ್ದ  ಲಿಲ್ಲಿಯದ್ದು ಕೊಲೆ ಎಂಬ ಸಂಶಯವನ್ನು ಕುಟುಂಬಸ್ಥರೇ ವ್ಯಕ್ತಪಡಿಸಿದ್ದರು. ಪೌಲ್‌ರ ಪತ್ನಿಯನ್ನು ಜಾಗದ ತಕರಾರಿಗೆ ಸಂಬಂಧಿಧಿಸಿಯೇ ಕೊಲೆಗೆ„ದು ನೇಣಿಗೆ ಹಾಕಲಾಗಿತ್ತು ಎಂಬುದಾಗಿ ಅಂದು ಆರೋಪ ಕೇಳಿಬಂದಿತ್ತು. ಅದೂ ಡಾಲ್ಫಿಯ ಸುತ್ತಮುತ್ತ ಸಂಶಯಗಳಿಗೆ ಕಾರಣವಾಗಿದ್ದರೂ ಮೊಬೈಲ್‌ ಟವರ್‌ ಸೂಚನೆಯಂತೆ ಆತ ಆರೋಪದಿಂದ ಪಾರಾಗಿದ್ದ ಎನ್ನಲಾಗಿದೆ. 

Advertisement

ಜಾಗದ ತಕರಾರು
ಪೌಲ್‌ ಗೋವಿಯಸ್‌ರಿಗೆ ಒಟ್ಟು 5 ಮಂದಿ ಮಕ್ಕಳು.  ಅವರಲ್ಲಿ  ಇಬ್ಬರು ಪುತ್ರರ ನಡುವೆ ಜಾಗದ ವಿಷಯದಲ್ಲಿ ತಕರಾರಿದೆ. ಒಂದೂವರೆ ತಿಂಗಳ ಹಿಂದೆಯಷ್ಟೇ ಪೌಲ್‌ ಗೋವಿಯಸ್‌ ತನ್ನ ಒಬ್ಬ ಪುತ್ರಿ ಕೆನೆಡಾದಲ್ಲಿರುವ ಪೆಲ್ಸಿಯ ಹೆಸರಿಗೆ  ತನ್ನ ವಶದಲ್ಲಿದ್ದ ಜಾಗವನ್ನು ರಿಜಿಸ್ಟ್ರಾರ್‌ ಮಾಡಿಸಿ ಮನೆಯಲ್ಲಿ ತನ್ನ ಜತೆಗಿದ್ದ ಪುತ್ರ ಸ್ಟಾ éನಿಯ ಹೆಸರಿಗೆ ಪವರ್‌ ಆಫ್‌ ಅಟಾರ್ನಿ ಮಾಡಿಸಿಕೊಟ್ಟಿದ್ದರು. ಇನ್ನೊಬ್ಬ ಪುತ್ರ ಮೂಡಬಿದಿರೆಯ ಶಾಮಿಯಾನ ಉದ್ಯಮಿ ಡಾಲ್ಫಿ ಗೋವಿಯಸ್‌ ಹಾಗೂ ಕೊಲೆಯಾದ ಪೌಲ್‌ ಗೋವಿಯಸ್‌ ಮಧ್ಯೆ ಜಾಗದ ತಕರಾರು ಕೋರ್ಟಿನಲ್ಲಿತ್ತು.

ಇನ್ನೊಂದೆಡೆ ಶಾಮಿಯಾನದ ಕಬ್ಬಿಣದ ಸಾಮಗ್ರಿಗಳು ಪೌಲ್‌ ಗೋವಿಯಸ್‌ ಮನೆಯಿ ರುವ ಜಾಗದಲ್ಲಿ ಹರಡಿಕೊಂಡಿದ್ದು  ಮನೆಗೆ ಬರಲು ತಂದೆಯ ತಕರಾರು ಇತ್ತು ಎನ್ನಲಾಗಿದೆ. ಪೌಲ್‌ ಗೋವಿಯಸ್‌  ಮೂವರು ಪುತ್ರಿಯರಲ್ಲಿ ಜಾನೆಟ್‌ ಮುಂಬೆ„ಯಲ್ಲಿ, ಪೆಲ್ಸಿ  ಕೆನಡಾದಲ್ಲಿದ್ದು  ಇನ್ನೊಬ್ಟಾಕೆ  ವೈಲೆಟ್‌ ಊಟಿಯಲ್ಲಿ ಸಿಸ್ಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ನಾಯಿ ಬೊಗಳಲಿಲ್ಲ?
ಘಟನೆ ಸಂಜೆ ಸುಮಾರು 7.30ರ ವೇಳೆಗೆ ನಡೆದಿದ್ದು  ಮನೆಯಲ್ಲಿರುವ ನಾಯಿ ಬೊಗಳಿಲ್ಲ ಎಂದು ಹೇಳಲಾಗಿದ್ದು ಇದು ಹಲವು ಸಂಶಯಗಳಿಗೆ ಎಡೆ ಮಾಡಿಕೊಡುತ್ತಿದೆ.

ಕಾಣೆಯಾದ ಡಿವಿಆರ್‌ 
ಕೊಲೆಯಾದ ಪೌಲ್‌ ಗೋವಿಯಸ್‌ರ ಮನೆಗೆ ಸುತ್ತಲೂ ಸಿಸಿಟಿವಿ ಕೆಮರಾ ಅಳವಡಿಸಲಾಗಿದ್ದು, ಡಿವಿಆರ್‌ ದೊರೆತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಸಿಸಿ ಕೆಮರಾಗಳು ಅದೇ ಸ್ಥಳದಲ್ಲಿದ್ದು, ಡಿವಿಆರ್‌ ಮಾತ್ರ ಹೇಗೆ ನಾಪತ್ತೆಯಾಗಿದೆ ಎಂಬ ಸಂಶಯ ಕಾಡುತ್ತಿದೆ. 

ಪೊಲೀಸ್‌ ಕಮಿಶನರ್‌ ಚಂದ್ರಶೇಖರ್‌, ಡಿಸಿಪಿ (ಲಾ) ಶಾಂತರಾಜು, ಡಿಸಿಪಿ (ಕ್ರೈಂ) ಸಂಜೂ ಪಟೇಲ್‌, ಎಸಿಪಿ ರಾಜೇಂದ್ರ ಡಿ.ಎಸ್‌., ಮೂಡಬಿದಿರೆ ಪೊಲೀಸ್‌ ಇನ್ಸ್‌ಪೆೆಕ್ಟರ್‌ ರಾಮಚಂದ್ರ ನಾಯಕ್‌, ಪಿಎಸ್‌ಐ ದೇಜಪ್ಪ , ಬೆರಳಚ್ಚು ತಜ್ಞರು, ಶ್ವಾನದಳ,  ಫೂರೆನ್ಸಿಕ್‌ ತಜ್ಞರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next