Advertisement

ಕಾನೂನಿನ ವ್ಯಾಪ್ತಿಯಲ್ಲಿ ಕೆಲಸ ಮಾಡಿ

11:21 AM Jun 05, 2020 | Naveen |

ಹೊಸದುರ್ಗ: ತಾಲೂಕಿನ 33 ಗ್ರಾಮ ಪಂಚಾಯ್ತಿಗಳಲ್ಲಿ ಕಳೆದ 2013-14 ರಿಂದ ಆಗಿರುವ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಲಾಗುವುದು ಈ ಬಗ್ಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ವೇಳೆ ನೀಡಬೇಕು ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಪಿಡಿಒಗಳಿಗೆ ಸೂಚಿಸಿದರು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಪರಿಶೀಲನಾ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು. ಪ್ರತಿ ಗ್ರಾಮ ಪಂಚಾಯ್ತಿಗಳಲ್ಲಿ ಕಾಮಗಾರಿಗಳ ಹಗರಣಗಳಾದರೇ ಉತ್ತರಕೊಡುವವರು ಪಿಡಿಒಗಳೇ ಹೊರತು ಬಿಲ್‌ ಕಲೆಕ್ಟರ್‌, ಡಾಟಾಎಂಟ್ರಿ ಆಪರೇಟರ್‌ಗಳಲ್ಲ. ತನಿಖೆ ವೇಳೆ ಅವ್ಯವಹಾರ ಸಾಬೀತಾದರೇ ಸಮಸ್ಯೆ ಎದುರಿಸಬೇಕಾಗುತ್ತದೆ. ಪಿಡಿಒಗಳು ಯಾರ ಮುಲಾಜಿಗೂ ಒಳಗಾಗದೇ ಕಾನೂನಿನ ವ್ಯಾಪ್ತಿಯಲ್ಲಿ ಕೆಲಸ ಮಾಡಬೇಕು ಎಂದರು.

ಗ್ರಾಮ ಪಂಚಾಯ್ತಿಗಳಲ್ಲಿ ಪಿಡಿಒಗಳು ಸಮಯಕ್ಕೆ ಸರಿಯಾಗಿ ಕಚೇರಿಗಳಿಗೆ ಹಾಜರಾಗುವುದಿಲ್ಲ. ಕೇಳಿದರೇ ತಾಪಂ ಸಭೆ ಇಲ್ಲವೆ ಚಿತ್ರದುರ್ಗದಲ್ಲಿ ಸಭೆಇತ್ತು. ಸ್ಟಾಪ್‌ ವಿಸೀಟ್‌ ಹೋಗಿದ್ದೆ ಎಂದು ಉತ್ತರ ನೀಡುತ್ತೀರಾ? ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುವುದನ್ನು ರೂಢಿಸಿಕೊಳ್ಳಿ ಎಂದು ಸೂಚಿಸಿದರು. ತಾಪಂ ಇಒ ಜಾನಕಿರಾಮ್‌, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಿ.ಎಸ್‌.ಈಶ, ತೋಟಗಾರಿಕೆ ಇಲಾಖೆ ಎಡಿ ಶ್ರೀಕಾಂತ್‌ ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next